ದೇಶದಲ್ಲಿ ಕಾಂಗ್ರೆಸ್ ಅಡ್ರೆಸ್ಗಿಲ್ಲ, ಕರ್ನಾಟಕದಲ್ಲೂ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಬಿಜೆಪಿ ನಾಯಕ B.S.ಯಡಿಯೂರಪ್ಪ
ರಾಜ್ಯದಲ್ಲಿ 140 ಸ್ಥಾನ ಗೆದ್ದು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಯಾರೇ ಎಷ್ಟೇ ಬೊಬ್ಬೆ ಹೊಡೆದರೂ ನಾವೇ ಅಧಿಕಾರಕ್ಕೆ ಬರುತ್ತೇವೆ. 2 ದಿನದ ಬಳಿಕ 2 ತಂಡವಾಗಿ ರಾಜ್ಯ ಪ್ರವಾಸ ಆರಂಭ ಮಾಡುತ್ತೇವೆ.
ರಾಮನಗರ: ಭಾರತ್ ಜೋಡೋದಿಂದ ಏನೂ ಆಗಲ್ಲ. ಕರ್ನಾಟಕದಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಬಿಜೆಪಿ ನಾಯಕ B.S.ಯಡಿಯೂರಪ್ಪ ಹೇಳಿದರು. ಹರಿಸಂದ್ರ ಗ್ರಾಮದಲ್ಲಿ ಮಾತನಾಡಿದ ಅವರು ಭಾರತ್ ಜೋಡೋ ಯಾತ್ರೆಗೆ ಹೆದರಿ ಮೀಸಲಾತಿ ಹೆಚ್ಚಳ ವಿಚಾರವಾಗಿ ರಾಹುಲ್ ಗಾಂಧಿ ಆರೋಪಕ್ಕೆ ಯಡಿಯೂರಪ್ಪ ತಿರುಗೇಟು ನೀಡಿದರು. ದೇಶದಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲ. ರಾಜ್ಯದಲ್ಲಿ ಉಸಿರಾಡುತ್ತಿದೆ. ಇಲ್ಲಿ ಬಂದು ಮನಬಂದಂತೆ ಮಾತಾಡಿದರೆ ಪ್ರಯೋಜನ ಇಲ್ಲ. ಯುಪಿಯಲ್ಲಿ ನಿಮ್ಮ ತಂಗಿ, ಮಹಿಳೆ ಎಲ್ಲರನ್ನೂ ಸೇರಿಸಿ ಪ್ರಚಾರ ಮಾಡಿದ್ರಲ್ಲ ಏನಾಯ್ತು ಎಂದು ರಾಹುಲ್ ಗಾಂಧಿಗೆ ಪ್ರಶ್ನಿಸಿದರು. ಟಿಪ್ಪು ಎಕ್ಸ್ ಪ್ರೆಸ್ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಅವರು ಅಲ್ಪ ಸಂಖ್ಯಾತರನ್ನು ಒಲೈಸುವ ಚಟ. ಹಾಗಾಗಿ ಈ ರೀತಿಯ ಮಾತುಗಳನ್ನು ಆಡುತ್ತಾರೆ. ಇಡೀ ದೇಶ ಹಾಗೂ ರಾಜ್ಯದ ಜನರು ಇದನ್ನು ಸ್ವಾಗತಿಸಿದ್ದಾರೆ. ಎಲ್ಲರೂ ಸ್ವಾಗತ ಮಾಡುವ ಈ ಸಂಧರ್ಭದಲ್ಲಿ ಕೆಲವರಿಗೆ ಬೇಜಾರಾಗೋದು ಸಹಜ. ಇನ್ನು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪಿಸಿದ್ದಾಗ ಅದನ್ನು ನನ್ನ ಹತ್ತಿರ ಕೇಳಬೇಡಿ, ಸಿಎಂ ಬಳಿ ಕೇಳಿ ಎಂದು ಹೇಳಿದರು.
140 ಸ್ಥಾನ ಗೆದ್ದು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ: B.S.ಯಡಿಯೂರಪ್ಪ
ರಾಜ್ಯದಲ್ಲಿ 140 ಸ್ಥಾನ ಗೆದ್ದು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಯಾರೇ ಎಷ್ಟೇ ಬೊಬ್ಬೆ ಹೊಡೆದರೂ ನಾವೇ ಅಧಿಕಾರಕ್ಕೆ ಬರುತ್ತೇವೆ. 2 ದಿನದ ಬಳಿಕ 2 ತಂಡವಾಗಿ ರಾಜ್ಯ ಪ್ರವಾಸ ಆರಂಭ ಮಾಡುತ್ತೇವೆ. ಸುಮಾರು 50 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತೇವೆ. ಈಗಾಗಲೇ ಕೆಲವರು ನಾನೇ ಸಿಎಂ, ಡಿಸಿಎಂ ಎಂದು ಹೇಳುತ್ತಿದ್ದಾರೆ. 2023ಕ್ಕೆ ಹೆಚ್ಡಿಕೆ ಸಿಎಂ ಆಗುತ್ತಾರೆಂಬ ದೇವೇಗೌಡರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಹೆಚ್.ಡಿ.ದೇವೇಗೌಡರ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಮಗನ ಮೇಲಿನ ಮಮತೆಯಿಂದ ದೇವೇಗೌಡರು ಹೇಳಿದ್ದಾರೆ. ಬಿಜೆಪಿ ಎಲ್ಲಾ ವರ್ಗದವರನ್ನೂ ಅಭಿವೃದ್ಧಿ ಮಾಡುವ ಪಕ್ಷ. ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ರಾಜ್ಯ ಪ್ರವಾಸ ಮಾಡಿ ಪಕ್ಷ ಅಧಿಕಾರಕ್ಕೆ ತರಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ಚಿಕ್ಕನಾಯಕನಹಳ್ಳಿ ತಲುಪಿದ ‘ಭಾರತ್ ಜೋಡೋ ಪಾದಯಾತ್ರೆ’
ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ಪಾದಯಾತ್ರೆ’ಯು (Bharat Jodo Yatra) ಇಂದು ಚಿಕ್ಕನಾಯಕನಹಳ್ಳಿ ತಲುಪಿದೆ. ಪಾದಯಾತ್ರೆ ವೇಳೆ ರಾಹುಲ್ ಗಾಂಧಿ ಅವರು ತಮ್ಮನ್ನು ನೋಡಲು ಬಂದಿದ್ದ ಮಾನ್ವಿ ಹಾಗೂ ಅನ್ವಿಕಾ ಎಂಬ ಮಕ್ಕಳನ್ನು ಕರೆದು ಫೋಟೊ ತೆಗೆಸಿಕೊಂಡರು. ರಾಹುಲ್ ನೋಡಲು ಬಂದಿದ್ದ ಕುಟುಂಬಸ್ಥರು ಕಾಂಗ್ರೆಸ್ ನಾಯಕನ ಸರಳ, ಸಜ್ಜನಿಕೆ ಕಂಡು ಖುಷಿಯಾದರು. ಪಟ್ಟಣದಲ್ಲಿ ಮುಂಜಾನೆ ಪಾದಯಾತ್ರೆಯನ್ನು ಅಂತ್ಯಗೊಳಿಸಿ ಹಿಂದಿರುಗುವ ಮೊದಲು ಮಗುವೊಂದನ್ನು ಎತ್ತಿಕೊಂಡು ನಿಂತಿದ್ದ ಮಹಿಳೆಯನ್ನು ರಾಹುಲ್ ಹತ್ತಿರ ಕರೆದರು. ಬಳಿಕ ಆ ಪುಟ್ಟ ಮಗುವಿಗೆ ಚಾಕೊಲೇಟ್ ಕೊಟ್ಟರು. ರಾಹುಲ್ ಮಗು ಎತ್ತಿಕೊಂಡಿದ್ದು ನೋಡಿದ ಮಹಿಳೆಯರು ಖುಷಿಪಟ್ಟರು.
ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ಸರ್ಕಲ್ನಲ್ಲಿ ವಾಲ್ಮೀಕಿ ಚಿತ್ರಪಟಕ್ಕೆ ರಾಹುಲ್ ಪುಷ್ಪ ನಮನ ಸಲ್ಲಿಸಿದರು. ಪಟ್ಟಣದ ಕನಕ ಭವನದಲ್ಲಿ ರಾಹುಲ್ ಅವರಿಗೆ ಕಂಬಳಿ ನೀಡಲು ಕೆಲವರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಭದ್ರತಾ ದೃಷ್ಟಿಯಿಂದ ಕಂಬಳಿ ನಿರಾಕರಿಸಲು ರಾಹುಲ್ ಅವರ ಭದ್ರತಾ ತಂಡವು ನಿರಾಕರಿಸಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.