AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohini Sindhuri vs D Roopa: ನಿಮ್ಮ ಗಲಾಟೆಯಲ್ಲಿ ನನ್ನ ಮಗನ ಹೆಸರು ಎಳೆದು ತರಬೇಡಿ: ಡಿ.ಕೆ.ರವಿ ತಾಯಿ ಗೌರಮ್ಮ

IAS vs IPS: IPS ಅಧಿಕಾರಿ ಡಿ ರೂಪಾ, IAS ಅಧಿಕಾರಿ ರೋಹಿಣಿ ಸಿಂಧೂರಿ ಅವರೇ ನಿಮ್ಮಿಬ್ಬರ ಜಗಳದ ನಡುವೆ ನನ್ನ ಮಗನ ಹೆಸರು ಎಳೆದು ತರಬೇಡಿ ಎಂದು ಡಿ.ಕೆ.ರವಿ ತಾಯಿ ಗೌರಮ್ಮ ಕಣ್ಣೀರಿಟ್ಟಿದ್ದಾರೆ.

TV9 Web
| Edited By: |

Updated on:Feb 20, 2023 | 12:18 PM

Share

ರಾಮನಗರ: IPS ಅಧಿಕಾರಿ ಡಿ ರೂಪಾ (D Roopa), IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ನಡುವೆ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ. ಇವರ ಇಬ್ಬರ ಜಗಳದಲ್ಲಿ ದಿವಂಗತ ಐಎಎಸ್​​ ಅಧಿಕಾರಿ ಡಿ.ಕೆ ರವಿ (DK Ravi) ಅವರ ಹೆಸರು ಎಳೆದು ತಂದಿದ್ದು, ಈ ವಿಚಾರವಾಗಿ ಡಿ.ಕೆ.ರವಿ ತಾಯಿ ಗೌರಮ್ಮ ನಿಮ್ಮ ಗಲಾಟೆ ವಿಚಾರದಲ್ಲಿ ನನ್ನ ಮಗನ ಹೆಸರು ಎಳೆದು ತರಬೇಡಿ ಎಂದು ಹೇಳಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕದರಮಂಗಳ ಗ್ರಾಮದಲ್ಲಿ ಮಾಧ್ಯಮ ಪ್ರಿನಿಧಿಗಳೊಂದಿಗೆ ಮಾತನಾಡಿದ ಅವರು ನೀವಿಬ್ಬರೂ ಏನಾದರೂ ಕಿತ್ತಾಡಿ, ಆದರೆ ನನ್ನ ಮಗನ ಹೆಸರು ತರಬೇಡಿ ಟಿವಿ 9 ಎದುರು ಕಣ್ಣೀರಿಟ್ಟಿದ್ದಾರೆ.

8 ವರ್ಷವಾಯ್ತು ನನ್ನನ್ನು ನೋಡಲು ಯಾರೂ ಬಂದಿಲ್ಲ. ಡಿ.ಕೆ.ರವಿಯನ್ನು ನಾನು ಸಾಕಿ ಬೆಳೆಸಿದ್ದೇನೆ. ಡಿ.ಕೆ.ರವಿ ಜತೆ ಕುಸುಮಾ 5 ವರ್ಷ ಅಷ್ಟೆ ಸಂಸಾರ ಮಾಡಿದ್ದಾಳೆ. ನನ್ನ ಮಗ ಇರುವವರೆಗೂ ಮಾತ್ರ ಆಕೆ ಸೊಸೆ. ಹೀಗಾಗಿ ನೀವ್ಯಾರೂ ನನ್ನ ಮಗನ ಹೆಸರನ್ನು ತರಬೇಡಿ ಎಂದು ಮನವಿ ಮಾಡಿದ್ದಾರೆ.

ಡಿ ರೂಪಾಗೆ ರೋಹಿಣಿ ಸಿಂಧೂರಿ ಪತಿ ಪ್ರಶ್ನೆ

ರೂಪಾ ಅನ್ನೋರು ಯಾರು? ರೋಹಿಣಿ ಸಿಂಧೂರಿಗೆ ಯಾವುದೇ ಪ್ರಚಾರ ಬೇಡ. ಯಾವ್ಯಾವ ಅಧಿಕಾರಿಗಳಿಗೆ ಫೋಟೋ ಕಳುಹಿಸಿದ್ದಾರೆ ಮೊದಲು ಹೇಳಿ. ನಾನು ಹುಟ್ಟಿದ್ದು ಇಲ್ಲೇ, ನಾನು ಕನ್ನಡಿಗ. ಆಂಧ್ರಪ್ರದೇಶದಲ್ಲಿ ನಮ್ಮ ಸಂಬಂಧಿಕರು ಯಾರೂ ಇಲ್ಲ. ನಮ್ಮ ಕುಟುಂಬದ ಬಗ್ಗೆ ಅನಗತ್ಯವಾಗಿ ಮಾತನಾಡುವುದು ಸರಿಯಲ್ಲ. ರೋಹಿಣಿ ಸಿಂಧೂರಿ ಸಾಮಾಜಿಕ ಜಾಲತಾಣ ಬಳಕೆ ಮಾಡುತ್ತಿಲ್ಲ. ಫೋಟೋಗಳನ್ನು ಅವರು ಹ್ಯಾಕ್ ಮಾಡಿ ತೆಗೆದುಕೊಂಡಿರಬಹುದು. ರೋಹಿಣಿ ಸಿಂಧೂರಿ ಯಾರಿಗೆ ಫೋಟೋ ಕಳಿಸಿದ್ದಾರೆ ಹೆಸರು ಹೇಳಿ. ನನ್ನ ತಂದೆ ಕಾಲದಿಂದಲೂ ರಿಯಲ್ ಎಸ್ಟೇಟ್​​​ ಮಾಡುತ್ತಿದ್ದೇವೆ ಎಂದು ಐಪಿಎಸ್​ ಅಧಿಕಾರಿ ಡಿ.ರೂಪಾ ವಿರುದ್ಧ ಬೆಂಗಳೂರಿನಲ್ಲಿ ರೋಹಿಣಿ ಸಿಂಧೂರಿ ಪತಿ ಸುಧೀರ್​ ರೆಡ್ಡಿ ವಾಗ್ದಾಳಿ ಮಾಡಿದ್ದಾರೆ.

IPS ಅಧಿಕಾರಿ ರೂಪಾ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ

IPS ಅಧಿಕಾರಿ ರೂಪಾ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ. ಹೊಟ್ಟೆಕಿಚ್ಚಿನಿಂದ ಡಿ.ರೂಪಾ ಅವರು ಈ ರೀತಿ ಮಾಡುತ್ತಿದ್ದಾರೆ. ರೋಹಿಣಿ ಸಿಂಧೂರಿ ಒಳ್ಳೆಯ ಕೆಲಸ ಮಾಡಿ ಹೆಸರು ಮಾಡಿದ್ದಾರೆ. ಹಣಕಾಸು ವಿಚಾರದಲ್ಲಿ ನಾವು ಚೆನ್ನಾಗಿಯೇ ಇದ್ದೇವೆ. ಡಿ.ಕೆ.ರವಿ ಅವರ ವಿಚಾರವನ್ನು ಈಗ ಪ್ರಸ್ತಾಪಿಸುವುದು ಸರಿಯಲ್ಲ. ಹೋಗಿರುವವರ ಬಗ್ಗೆ ಏನನ್ನೂ ಮಾತನಾಡಬಾರದು. ಹೋಗಿರುವವರ ಬಗ್ಗೆ ಮಾತನಾಡುವ ಸಂಸ್ಕಾರ ರೂಪಾ ಅವರದ್ದು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:07 pm, Mon, 20 February 23

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್