ರವಿಶಂಕರ್ ಗುರೂಜಿಗೂ ತಾನು IAS ಎಂದಿದ್ದ; ಜಮೀನು ವಿವಾದ ಬಗೆಹರಿಸಿಕೊಡುವುದಾಗಿ ಹೇಳಿದ್ದ ನಕಲಿ ಅಧಿಕಾರಿ ಅರೆಸ್ಟ್

| Updated By: ಆಯೇಷಾ ಬಾನು

Updated on: Sep 08, 2021 | 11:51 AM

ರವಿಶಂಕರ್ ಗುರೂಜಿ ಆಶ್ರಮದ ಜಮೀನು ವಿಚಾರಕ್ಕೆ ಪ್ರಕರಣದಲ್ಲಿ ಎಂಟ್ರಿ ಕೊಟ್ಟಿದ್ದ ಶಶೀರ್, ಪೊಲೀಸರ ಬಳಿ ನಾನು ಐಎಎಸ್ ಅಧಿಕಾರಿಯೆಂದು ಹೇಳಿಕೊಂಡಿದ್ದ. ಅಲ್ಲದೇ ರವಿಶಂಕರ್ ಗುರೂಜಿ ಆಶ್ರಮಕ್ಕೂ ಭೇಟಿ ಕೊಟ್ಟು ಐಎಎಸ್ ಅಧಿಕಾರಿಯೆಂದು ಪರಿಚಯ ಮಾಡಿಕೊಂಡಿದ್ದ.

ರವಿಶಂಕರ್ ಗುರೂಜಿಗೂ ತಾನು IAS ಎಂದಿದ್ದ; ಜಮೀನು ವಿವಾದ ಬಗೆಹರಿಸಿಕೊಡುವುದಾಗಿ ಹೇಳಿದ್ದ ನಕಲಿ ಅಧಿಕಾರಿ ಅರೆಸ್ಟ್
ಶಶೀರ್
Follow us on

ರಾಮನಗರ: IAS ಅಧಿಕಾರಿ ಎಂದು ಹೇಳಿಕೊಂಡು ಓಡಾಡ್ತಿದ್ದ ವ್ಯಕ್ತಿಯನ್ನು ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಶಶೀರ್(24) ಬಂಧಿತ ವ್ಯಕ್ತಿ.

ರವಿಶಂಕರ್ ಗುರೂಜಿ ಆಶ್ರಮದ ಜಮೀನು ವಿಚಾರಕ್ಕೆ ಪ್ರಕರಣದಲ್ಲಿ ಎಂಟ್ರಿ ಕೊಟ್ಟಿದ್ದ ಶಶೀರ್, ಪೊಲೀಸರ ಬಳಿ ನಾನು ಐಎಎಸ್ ಅಧಿಕಾರಿಯೆಂದು ಹೇಳಿಕೊಂಡಿದ್ದ. ಅಲ್ಲದೇ ರವಿಶಂಕರ್ ಗುರೂಜಿ ಆಶ್ರಮಕ್ಕೂ ಭೇಟಿ ಕೊಟ್ಟು ಐಎಎಸ್ ಅಧಿಕಾರಿಯೆಂದು ಪರಿಚಯ ಮಾಡಿಕೊಂಡಿದ್ದ. ವಿವಾದ ಬಗೆಹರಿಸಿಕೊಡುವುದಾಗಿ ಹೇಳಿ ಗುರೂಜಿ ಪರ ಬ್ಯಾಟಿಂಗ್ ಮಾಡಿದ್ದ. ಈ ರೀತಿ ಸುಳ್ಳು ಹೇಳಿ ಕೊಂಡವನನ್ನು ಈಗ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಮಹಾರಾಷ್ಟ್ರದವನಾದ ಶಶೀರ್ ಕಳೆದ ಮೂರು ವರ್ಷದಿಂದ ಕಗ್ಗಲಿಪುರದಲ್ಲಿ ವಾಸವಾಗಿದ್ದ. ಶಶೀರ್ ನಡುವಳಿಕೆಯಿಂದ ಅನುಮಾನ ಬಂದು ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿಯತ್ತು ಬಯಲಾಗಿದೆ. ಡಿಪ್ಲೋಮಾ ವ್ಯಾಸಂಗ ಮಾಡುತ್ತಿರುವ ಶಶೀರ್ ವಿಚಾರಣೆ ವೇಳೆ IAS ಅಧಿಕಾರಿ ಅಲ್ಲವೆಂಬುದು ಸಾಬೀತಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ತಹಶೀಲ್ದಾರ್ ಸಮಯ ಪ್ರಜ್ಞೆಯಿಂದ ನಕಲಿ ಐಎಎಸ್‌ ಅಧಿಕಾರಿ ಪೊಲೀಸರ ಅತಿಥಿ

Kumbh Mela Covid 19: ಕುಂಭಮೇಳ ಕೊವಿಡ್ 19 ನಕಲಿ ತಪಾಸಣೆ ಹಗರಣ; ಲ್ಯಾಬೋರೇಟರಿ ಅಧಿಕಾರಿಗಳಿಗೆ ಶಾಕ್ ಕೊಟ್ಟ ಇ.ಡಿ.

Published On - 10:24 am, Wed, 8 September 21