Kumbh Mela Covid 19: ಕುಂಭಮೇಳ ಕೊವಿಡ್ 19 ನಕಲಿ ತಪಾಸಣೆ ಹಗರಣ; ಲ್ಯಾಬೋರೇಟರಿ ಅಧಿಕಾರಿಗಳಿಗೆ ಶಾಕ್ ಕೊಟ್ಟ ಇ.ಡಿ.
Kumbh Mela: ಈ ಬಾರಿ ಕೊವಿಡ್ 19 ಮಧ್ಯೆಯೂ ಕುಂಭಮೇಳ ನಡೆದಿತ್ತು. ಅದಾದ ಬಳಿಕ ಕೊವಿಡ್ ಪ್ರಕರಣಗಳು ಹೆಚ್ಚಿದ್ದವು. ನಂತರ ಕುಂಭಮೇಳದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಕೊವಿಡ್ 19 ತಪಾಸಣೆ ಮಾಡಲು ಡಯಾಗ್ನೋಸ್ಟಿಕ್ ಸಂಸ್ಥೆಗಳಿಗೆ ಉತ್ತರಾಖಂಡ ಸರ್ಕಾರವೇ ಗುತ್ತಿಗೆ ನೀಡಿತ್ತು.
ಉತ್ತರಾಖಂಡ್: ಇಲ್ಲಿ ಕುಂಭಮೇಳ (Kumbh Mela)ದ ಸಮಯದಲ್ಲಿ ನಡೆದಿದೆ ಎನ್ನಲಾದ ನಕಲಿ ಕೊವಿಡ್ 19 ಪರೀಕ್ಷೆ (Covid 19 Test Scam) ಹಗರಣಕ್ಕೆ ಸಂಬಂಧಪಟ್ಟಂತೆ ಐದು ಡಯಾಗ್ನೋಸ್ಟಿಕ್ಸ್ (ರೋಗನಿರ್ಣಯ) ಸಂಸ್ಥೆಗಳ ಉನ್ನತ ಕಾರ್ಯನಿರ್ವಾಹಕರ ಮನೆಗಳು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲ ಯ(Enforcement Directorate) ಶುಕ್ರವಾರ ಶೋಧಕಾರ್ಯ ನಡೆಸಿದೆ.
ಈ ಬಾರಿ ಕೊವಿಡ್ 19 ಮಧ್ಯೆಯೂ ಕುಂಭಮೇಳ ನಡೆದಿತ್ತು. ಅದಾದ ಬಳಿಕ ಕೊವಿಡ್ ಪ್ರಕರಣಗಳು ಹೆಚ್ಚಿದ್ದವು. ನಂತರ ಕುಂಭಮೇಳದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಕೊವಿಡ್ 19 ತಪಾಸಣೆ ಮಾಡಲು ಡಯಾಗ್ನೋಸ್ಟಿಕ್ ಸಂಸ್ಥೆಗಳಿಗೆ ಉತ್ತರಾಖಂಡ ಸರ್ಕಾರವೇ ಗುತ್ತಿಗೆ ನೀಡಿತ್ತು. ಅದರ ಅನ್ವಯ ಈ ಲ್ಯಾಬೋರೇಟರಿಗಳು ಜನರಿಗೆ ಕೊರೊನಾ ಱಪಿಡ್ ಆ್ಯಂಟಿಜೆನ್ ಟೆಸ್ಟ್ ಮತ್ತು ಆರ್ಟಿ-ಪಿಸಿಆರ್ ಟೆಸ್ಟ್ಗಳನ್ನು ಮಾಡಿ ರಿಪೋರ್ಟ್ ನೀಡಬೇಕಿತ್ತು. ಆದರೆ ಲ್ಯಾಬೋರೇಟರಿಗಳು ಕೊಟ್ಟ ಕೆಲಸವನ್ನು ಸರಿಯಾಗಿ ನಡೆಸದೆ, ಅದೆಷ್ಟೋ ಜನರಿಗೆ ಕೊರೊನಾ ತಪಾಸಣೆಯನ್ನೇ ಮಾಡದೆ ವರದಿ ನೀಡಿದ್ದವು. ಅದಕ್ಕಾಗಿ ಹಣ ಪಡೆದಿದ್ದಲ್ಲದೆ, ಸರ್ಕಾರಕ್ಕೆ ತೋರಿಸಲು ನಕಲಿ ಬಿಲ್ಗಳನ್ನೂ ಸೃಷ್ಟಿಸಿದ್ದವು. ಹಗರಣ ಬೆಳಕಿಗೆ ಬರುತ್ತಿದ್ದಂತೆ ಉತ್ತಾರಖಂಡ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದರು.
ಈ ಲ್ಯಾಬೋರೇಟರಿಗಳು ಹೇಗೆ ಜನರನ್ನು ವಂಚಿಸಿವೆ ಎಂಬುದನ್ನು ಇಡಿ ವಿವರಿಸಿದೆ. ಒಬ್ಬರ ಸ್ಯಾಂಪಲ್ ತಪಾಸಣೆಯ ವರದಿಯನ್ನೇ ಹಲವರಿಗೆ ನೀಡಿದ್ದಾಗಿ ತಿಳಿಸಿದೆ. ಅದೆಷ್ಟರ ಮಟ್ಟಿಗೆ ಎಡವಟ್ಟು ಮಾಡಿಕೊಂಡಿವೆ ಎಂದರೆ, ಕುಂಭಮೇಳದಲ್ಲಿ ಪಾಲ್ಗೊಳ್ಳದೆ, ಕೊವಿಡ್ ತಪಾಸಣೆಗೆ ಒಳಗಾಗದೆ ಇರುವವರ ಮೊಬೈಲ್ಗೂ ನೆಗೆಟಿವ್ ರಿಪೋರ್ಟ್ ಹೋಗಿದೆ ಎಂದು ಇಡಿ ಮಾಹಿತಿ ನೀಡಿದೆ. ಸದ್ಯ ತನಿಖೆ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯ ಐದು ಲ್ಯಾಬೋರೇಟರಿಗಳ ಉನ್ನತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೇರಿದ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದೆ. ಸದ್ಯ ಈ ಲ್ಯಾಬೋರೇಟರಿಗಳ ಲೈಸೆನ್ಸ್ ರದ್ದುಗೊಳಿಸಲಾಗಿದ್ದು, ಯಾವುದೇ ರೋಗ ತಪಾಸಣೆ ಮಾಡುವಂತಿಲ್ಲ ಎಂದು ಆದೇಶ ನೀಡಲಾಗಿದೆ.
ಇದನ್ನೂ ಓದಿ: ಮಾಜಿ ಗೃಹ ಸಚಿವರಿಗೆ ಹಾರ ಹಾಕಿ ಜನ್ಮದಿನ ಶುಭಾಶಯ ಕೋರಿದ ರೌಡಿ ಶೀಟರ್, ನೆಲಮಂಗಲದ ಕಡೆ ಹೆಜ್ಜೆ ಹಾಕಿದರಾ ಪರಮೇಶ್ವರ್?
ಉಡುಪಿಯಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: 65 ವರ್ಷ ಪ್ರಾಯದ ವ್ಯಕ್ತಿ ಬಂಧನ
Published On - 9:42 am, Sat, 7 August 21