‘ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೂ ಬೇಡ ರಾಜೀವ್ ಗಾಂಧಿ ಹೆಸರು’- ಅಭಿಯಾನ ಶುರುಮಾಡಿದ ಕೊಡಗು ನಿವಾಸಿಗಳು
ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇಷ್ಟುದಿನ ಕ್ರೀಡಾಸಾಧಕರಿಗೆ ನೀಡುವ ಖೇಲ್ರತ್ನ ಪ್ರಶಸ್ತಿಗೆ ಇದ್ದ ರಾಜೀವ್ ಗಾಂಧಿ ಹೆಸರನ್ನು ತೆಗೆದಿದ್ದಾರೆ. ಅದರ ಬೆನ್ನಲ್ಲೇ ಕೊಡಗು ನಿವಾಸಿಗಳ ಅಭಿಯಾನವೂ ಶುರುವಾಗಿದೆ.
ನಾಗರಹೊಳೆ ನ್ಯಾಶನಲ್ ಪಾರ್ಕ್(Nagarahole National Park)ಗೆ ರಾಜೀವ್ ಗಾಂಧಿ ನ್ಯಾಶನಲ್ ಪಾರ್ಕ್ (Rajeev Gandhi National Park) ಎಂದೂ ಸಹ ಕರೆಯಲಾಗುತ್ತದೆ. ಆದರೆ ಈ ಹೆಸರನ್ನು ಬದಲಿಸಬೇಕು..ರಾಜೀವ್ ಗಾಂಧಿ ಎಂಬ ಹೆಸರು ಬೇಡ ಎಂದು ಕೊಡಗು ನಿವಾಸಿಗಳು ಆನ್ಲೈನ್ಲ್ಲಿ ಸಹಿ ಸಂಗ್ರಹ (Online Petition) ಅಭಿಯಾನ ಶುರು ಮಾಡಿದ್ದಾರೆ. ರಾಜೀವ್ ಗಾಂಧಿ ನ್ಯಾಶನಲ್ ಪಾರ್ಕ್ ಹೆಸರು ಬದಲಿಸುವ ಬಗ್ಗೆ ಅವರು ತಮ್ಮ ವಿಚಾರವನ್ನು ಹಂಚಿಕೊಂಡಿದ್ದಾರೆ. ಹಾಗೇ, ಅದಕ್ಕೆ ಒಪ್ಪಿಗೆ ಇದ್ದವರು ಬೆಂಬಲಿಸಿ ಎಂದೂ ಕೇಳಿಕೊಂಡಿದ್ದಾರೆ.
ಈ ಸಂಬಂಧ ಪ್ರಧಾನಿ ಮೋದಿ, ಅಮಿತ್ ಶಾ, ಅರಣ್ಯ ಸಚಿವ ಭೂಪೇಂದರ್ ಸಿಂಗ್ ಯಾದವ್ ಮತ್ತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಒಂದು ನಿರ್ಧಿಷ್ಟ ಕುಟುಂಬ, ಪಕ್ಷವನ್ನು ಸಮಾಧಾನಪಡಿಸಲು, ಓಲೈಸಲು ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ರಾಜೀವ್ ಗಾಂಧಿ ನ್ಯಾಶನಲ್ ಪಾರ್ಕ್ ಎಂದು ಹೆಸರಿಡಲಾಗಿದೆ ಎಂದು ನಾಗರಿಕರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಫೀಲ್ಡ್ ಮಾರ್ಷಲ್ ಕಾರಿಯಪ್ಪ, ಜನರಲ್ ತಿಮ್ಮಯ್ಯ ಹೆಸರಿಡಿ.. ಇದೀಗ ಕೊಡಗು ನಿವಾಸಿಗಳು ಪ್ರಾರಂಭಿಸಿರುವ ಆನ್ಲೈನ್ ಅಭಿಯಾನಕ್ಕೆ ಅಪಾರ ಜನಬೆಂಬಲ ವ್ಯಕ್ತವಾಗಿದೆ. ಅದರಲ್ಲಿ ಹೆಚ್ಚಿನವರು ನ್ಯಾಶನಲ್ ಪಾರ್ಕ್ಗೆ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅಥವಾ ಜನರಲ್ ತಿಮ್ಮಯ್ಯನವರ ಹೆಸರಿಡಿ ಎಂದೇ ಒತ್ತಾಯಿಸುತ್ತಿದ್ದಾರೆ. ಇವರಿಬ್ಬರೂ ಕೊಡಗಿನವರೇ ಆಗಿದ್ದು, ದೇಶಸೇವೆ ಮಾಡಿದ್ದಾರೆ. ಇವರಲ್ಲಿ ಯಾರ ಹೆಸರಿಟ್ಟರೂ ಅಡ್ಡಿಯಿಲ್ಲ ಎನ್ನುತ್ತಿದ್ದಾರೆ.
ಪ್ರಶಸ್ತಿ ಹೆಸರು ಬದಲಾದ ಬೆನ್ನಲ್ಲೇ ಒತ್ತಾಯ ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇಷ್ಟುದಿನ ಕ್ರೀಡಾಸಾಧಕರಿಗೆ ನೀಡುವ ಖೇಲ್ರತ್ನ ಪ್ರಶಸ್ತಿಗೆ ಇದ್ದ ರಾಜೀವ್ ಗಾಂಧಿ ಹೆಸರನ್ನು ತೆಗೆದು, ಅದಕ್ಕೆ ಭಾರತದ ಹಾಕಿ ಮಾಂತ್ರಿಕ ಧ್ಯಾನ್ ಚಂದ ನಾಮಕರಣ ಮಾಡಿದ್ದಾರೆ. ಇದರ ಬೆನ್ನಲ್ಲೇ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಇಡಲಾದ ರಾಜೀವ್ ಗಾಂಧಿ ಹೆಸರನ್ನೂ ಬದಲಿಸಿ ಎಂಬ ಒತ್ತಾಯ ಕೇಳಿಬರುತ್ತಿದೆ.
SSLC Result 2021: ಎಸ್ಎಸ್ಎಲ್ಸಿ ಫಲಿತಾಂಶ ಕೊಂಚ ವಿಳಂಬ; ಮರುಮೌಲ್ಯಮಾಪನಕ್ಕೆ ಅವಕಾಶ ಇದೆಯಾ?