ಮಾತನಾಡೋರು ಮಾತನಾಡಲಿ, 2023ರ ಚುನಾವಣೆಯಲ್ಲಿ ನಾವು ಏನೆಂದು ತೋರಿಸುತ್ತೇವೆ; ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ಪರೋಕ್ಷ ವಾಗ್ದಾಳಿ
ಮಾತನಾಡೋರು ಮಾತನಾಡಲಿ, ನಮ್ಮ ಶಕ್ತಿ ತೋರಿಸುತ್ತೇವೆ. JDSನಿಂದಲೇ ಬೆಳೆದು ಹೋದವರೊಬ್ಬರು ನಮ್ಮ ಪಕ್ಷದ ಕುರಿತು ಕೇವಲವಾಗಿ ಮಾತನಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.
ರಾಮನಗರ: ಮೊಮ್ಮಗನ ಆಗಮನದ ಖುಷಿಯಲ್ಲಿರುವ ಹೆಚ್.ಡಿ. ಕುಮಾರಸ್ವಾಮಿ 2023ರ ಚುನಾವಣೆಯಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ರಣತಂತ್ರ ಹೆಣೆಯುತ್ತಿದ್ದಾರೆ. ಈಗಿಂದಲೇ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. 2023ರ ಚುನಾವಣೆಯಲ್ಲಿ ನಾವು ಏನೆಂದು ತೋರಿಸುತ್ತೇವೆ ಎಂದು ಜೆಡಿಎಸ್ ಕಾರ್ಯಾಗಾರದಲ್ಲಿ H.D.ಕುಮಾರಸ್ವಾಮಿ ಖಡಕ್ ಆಗಿ ನುಡಿದಿದ್ದಾರೆ.
ರಾಮನಗರ ಜಿಲ್ಲೆ ಕೇತಗಾನಹಳ್ಳಿಯಲ್ಲಿ ನಡೆದ JDS ಕಾರ್ಯಾಗಾರದಲ್ಲಿ ಮಾತನಾಡಿದ H.D.ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ‘ಮಾತನಾಡೋರು ಮಾತನಾಡಲಿ, ನಮ್ಮ ಶಕ್ತಿ ತೋರಿಸುತ್ತೇವೆ. JDSನಿಂದಲೇ ಬೆಳೆದು ಹೋದವರೊಬ್ಬರು ನಮ್ಮ ಪಕ್ಷದ ಕುರಿತು ಕೇವಲವಾಗಿ ಮಾತನಾಡುತ್ತಿದ್ದಾರೆ’ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಆಕ್ಟಿವಿಟೀಸ್ ಇರಲಿಲ್ಲ. ಇಂದಿನಿಂದ ನಾಲ್ಕು ದಿನಗಳ ಕಾಲ ಕಾರ್ಯಗಾರ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳು ಯಾವ ರೀತಿ ಜನರನ್ನು ತಲುಪಬೇಕು ಎಂಬುದು ನಾಯಕತ್ವ, ಶಿಸ್ತು ಬೆಳೆಸಲು ತರಬೇತಿ ನೀಡಲಾಗುತ್ತದೆ. ಅವರು ನಮ್ಮ ನಿರೀಕ್ಷೆಯಂತೆ ಕೆಲಸ ಮಾಡಬೇಕು. ಆತ್ಮೀಯತೆ ವ್ಯಾಮೋಹ ಅವರ ಮೇಲೆ ಇಲ್ಲ. ಅವರು ಕಾರ್ಯದಕ್ಷತೆಯಿಂದ ಇರಬೇಕು. ಇಲ್ಲದೇ ಹೋದ್ರೆ ಅಭ್ಯರ್ಥಿಗಳನ್ನು ಬದಲಾವಣೆ ಮಾಡುವ ಕೆಲಸವನ್ನೂ ಮಾಡ್ತೀವಿ. ನಮ್ಮ ಪಕ್ಷದಿಂದಲೇ ಬೆಳೆದು ಹೋದವರೊಬ್ಬರು ಲಘುವಾಗಿ ಮಾತನ್ನಾಡುತ್ತಿದ್ದಾರೆ. ನಮ್ಮ ಪಕ್ಷ ಕುರಿತು ಕೇವಲವಾಗಿ ಮಾತನ್ನಾಡುತ್ತಿದ್ದಾರೆ. 2023ರ ಚುನಾವಣೆಯಲ್ಲಿ ನಾವು ಏನು ಅನ್ನೋದನ್ನ ತೋರಿಸುತ್ತೇವೆ. ಮಾತನ್ನಾಡೋರು ಮಾತನ್ನಾಡಲಿ. ನಮ್ಮ ಶಕ್ತಿ ತೋರಿಸುತ್ತೇವೆ ಎಂದು ವಾಗ್ದಾಳಿ ನಡೆಸಿದ್ರು.
JDS ಕಾರ್ಯಕ್ರಮದಲ್ಲಿ ದೊಡ್ಡ ಮಟ್ಟದಲ್ಲಿ ಜನರು ಸೇರುತ್ತಾರೆ. ಆದ್ರೆ ಅದು ಮತವಾಗಿ ಬದಲಾವಣೆ ಆಗುತ್ತಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿವೆ. ರಾಜ್ಯದಲ್ಲಿ ಕನ್ನಡಿಗರಿಗೋಸ್ಕರ ಇರುವ ಪಕ್ಷ ನಮ್ಮದು. ಬಡವರ ಹಲವು ಸಮಸ್ಯೆ ಮುಂದಿಟ್ಟುಕೊಂಡು ಹೊರಟಿದ್ದೇವೆ. 2023ರಿಂದ ಹೊಸ ಯುಗ ಆರಂಭವಾಗಲಿದೆ ಎಂದರು.
ಇದನ್ನೂ ಓದಿ: ಶಾಲೆಯ ತರಗತಿಯಲ್ಲಿ ಹಿಂದಿ ಹಾಡಿಗೆ ಭರ್ಜರಿ ಕುಣಿದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಶಿಕ್ಷಕಿಯರು ಅಮಾನತು