ಕುಮಾರಸ್ವಾಮಿ ಹೋಟೆಲ್​ನಲ್ಲಿ ರಾಸಲೀಲೆ ಮಾಡಿಕೊಂಡಿದ್ದ, ಇನ್ಮುಂದೆ ಹೆಚ್​ಡಿಕೆ ಬಗ್ಗೆ ಏಕವಚನದಲ್ಲಿ ಮಾತಾಡುವೆ -ಯೋಗೇಶ್ವರ್

| Updated By: ಸಾಧು ಶ್ರೀನಾಥ್​

Updated on: Mar 14, 2022 | 2:05 PM

Rasaleela: ಇನ್ನುಮುಂದೆ ಹೆಚ್​ಡಿಕೆ ಬಗ್ಗೆ ಏಕವಚನದಲ್ಲಿ ಮಾತನಾಡುತ್ತೇನೆ. ಕುಮಾರಸ್ವಾಮಿ ವಿಚಾರ ಇಡೀ ರಾಜ್ಯದ ಜನರಿಗೆ ಗೊತ್ತಿಲ್ಲ. ಕುಮಾರಸ್ವಾಮಿ ಹೇಳದೆ ಹೋದರೆ ನಾನೇ ಹೇಳುತ್ತೇನೆ. ನೇರವಾಗಿ ದಾಖಲೆ ಇಟ್ಟುಕೊಂಡು ನಾನು ಮಾತನಾಡುತ್ತೇನೆ. ನನ್ನ ಬಗ್ಗೆ ಮಾತನಾಡಿದ್ರೆ ಅಡ್ಡಹಾಕಿ ಹಿಡಿದು ಕೇಳುತ್ತೇನೆ ಚನ್ನಪಟ್ಟಣದಲ್ಲಿ ಸಿ.ಪಿ‌. ಯೋಗೇಶ್ವರ್ ಹೇಳಿಕೆ

ಕುಮಾರಸ್ವಾಮಿ ಹೋಟೆಲ್​ನಲ್ಲಿ ರಾಸಲೀಲೆ ಮಾಡಿಕೊಂಡಿದ್ದ, ಇನ್ಮುಂದೆ ಹೆಚ್​ಡಿಕೆ ಬಗ್ಗೆ ಏಕವಚನದಲ್ಲಿ ಮಾತಾಡುವೆ -ಯೋಗೇಶ್ವರ್
ಹೆಚ್​ ಡಿ ಕುಮಾರಸ್ವಾಮಿ ಹೋಟೆಲ್​ನಲ್ಲಿ ರಾಸಲೀಲೆ ಮಾಡಿಕೊಂಡಿದ್ದ, ಇನ್ನುಮುಂದೆ ಹೆಚ್​ಡಿಕೆ ಬಗ್ಗೆ ಏಕವಚನದಲ್ಲಿ ಮಾತನಾಡುತ್ತೇನೆ ಎಂದ ಸಿ.ಪಿ‌.ಯೋಗೇಶ್ವರ್
Follow us on

ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಹೋಟೆಲ್​ನಲ್ಲಿ ರಾಸಲೀಲೆ ಮಾಡಿಕೊಂಡಿದ್ದ ಎಂದು ಕುಮಾರಸ್ವಾಮಿ ವಿರುದ್ಧ ಬಿಜೆಪಿ ಎಂಎಲ್​ಸಿ ಸಿ.ಪಿ. ಯೋಗೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಸಿ.ಪಿ‌. ಯೋಗೇಶ್ವರ್ ಹೆಚ್​.ಡಿ.ಕುಮಾರಸ್ವಾಮಿ ಸಿಎಂ ಆದಾಗ ತಾಲೂಕಿಗೆ ಬರಲಿಲ್ಲ. ಆಗ ರಾಸಲೀಲೆ ಮಾಡಿಕೊಂಡಿದ್ದು ಈಗ ಜನರೆದುರು ಬಂದವ್ರೆ. ಹೋಟೆಲ್​​ನಲ್ಲಿ 14 ತಿಂಗಳು ಇದ್ದರಲ್ಲ, ಹೆಚ್​ಡಿಕೆ ಬಗ್ಗೆ ಗೊತ್ತಿದೆ. ಮುಖ್ಯಮಂತ್ರಿ ಆದಾಗ ಹೋಟೆಲ್​ನಲ್ಲಿ ವೈಯಕ್ತಿಕ ಜೀವನ ಮಾಡುತ್ತಿದ್ದರು. ನೇರವಾಗಿ ದಾಖಲೆ ಇಟ್ಟುಕೊಂಡು ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಇನ್ನುಮುಂದೆ ಹೆಚ್​ಡಿಕೆ ಬಗ್ಗೆ ಏಕವಚನದಲ್ಲಿ ಮಾತನಾಡುತ್ತೇನೆ
ಇನ್ನುಮುಂದೆ ಹೆಚ್​ಡಿಕೆ ಬಗ್ಗೆ ಏಕವಚನದಲ್ಲಿ ಮಾತನಾಡುತ್ತೇನೆ. ಕುಮಾರಸ್ವಾಮಿ ವಿಚಾರ ಇಡೀ ರಾಜ್ಯದ ಜನರಿಗೆ ಗೊತ್ತಿಲ್ಲ. ಕುಮಾರಸ್ವಾಮಿ ಹೇಳದೆ ಹೋದರೆ ನಾನೇ ಹೇಳುತ್ತೇನೆ. ನೇರವಾಗಿ ದಾಖಲೆ ಇಟ್ಟುಕೊಂಡು ನಾನು ಮಾತನಾಡುತ್ತೇನೆ. ನನ್ನ ಬಗ್ಗೆ ಮಾತನಾಡಿದ್ರೆ ಅಡ್ಡಹಾಕಿ ಹಿಡಿದು ಕೇಳುತ್ತೇನೆ. ನಮ್ಮ ಪಾರ್ಟಿಯವರೇ ಅಲ್ಲಲ್ಲಿ ಹೆಚ್​ಡಿ ಕುಮಾರಸ್ವಾಮಿಯನ್ನ ಹೊಗಳಿದ್ದಾರೆ. ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ಬೆಂಬಲಿಸುತ್ತಿದ್ದಾರೆ ಎಂದೂ ಚನ್ನಪಟ್ಟಣದಲ್ಲಿ ಸಿ.ಪಿ‌. ಯೋಗೇಶ್ವರ್ ಹೇಳಿದರು.

ಕುಮಾರಸ್ವಾಮಿ 4 ವರ್ಷದ ಸಾಧನೆ… ಬೂಟಾಟಿಕೆ ಮಾತು, ಕೆಲಸ ಶೂನ್ಯ!
2023ಕ್ಕೆ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ರನ್ನ ಚನ್ನಪಟ್ಟಣದಿಂದ ಎದುರಿಸುತ್ತೇನೆ. ತಾಲೂಕಿನಲ್ಲಿ ಜನರ ಮುಂದೆ ಹೋಗುತ್ತಿದ್ದೇನೆ. ಕುಮಾರಸ್ವಾಮಿ ಅವರ ನಾಲ್ಕು ವರ್ಷದ ಸಾಧನೆ ಏನು? ಬೂಟಾಟಿಕೆ ಮಾತು, ಕೆಲಸ ಶೂನ್ಯ! ಸಿಎಂ ಆದಾಗ ತಾಲೂಕಿಗೆ ಬರಲಿಲ್ಲ. ಈ ಕಡೆ ಗಮನಕೊಟ್ಟಿದ್ದರೇ ಕೆಲಸ ಅಗುತ್ತಿತ್ತು. ಆಗ ರಾಸಲೀಲೆ ಮಾಡಿಕೊಂಡು, ಇದೀಗ ಜನರ ಮುಂದೆ ಬಂದು ಕಣ್ಣು ತಿರುಗಿಸಿದರೆ ಶೋಭೆ ಅಲ್ಲ ಎಂದು ಮಾಜಿ ಸಚಿವ ಸಿ.ಪಿ‌ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಹೇಳಿದರು.

ನೀವೇ ಕುಮಾರಸ್ವಾಮಿ ಅವರಿಗೆ ಹೇಳಿ, ಹೋಟೆಲ್ ನಲ್ಲಿ 14 ತಿಂಗಳು ಇದ್ದರಲ್ಲ. ಕುಮಾರಸ್ವಾಮಿ ಬಗ್ಗೆ ಗೊತ್ತಿದೆ. ಇನ್ನ ಮೇಲೆ ಕುಮಾರಸ್ವಾಮಿಯನ್ನ ಏಕವಚನದಲ್ಲಿ ಮಾತನಾಡುತ್ತೇನೆ. ಸಿಎಂ ಆದಾಗ ಜನಾಭಿಪ್ರಾಯ ಬಿಟ್ಟು ಹೋಟಲ್ ನಲ್ಲಿ ವೈಯಕ್ತಿಕ ಜೀವನ ಮಾಡುತ್ತಿದ್ದರು. ಇದು ಅವರ ಮೇಲಿನ ಗಂಭೀರ ಆರೋಪ. ಯಾರನ್ನೂ ಅವರು ಭೇಟಿ ಮಾಡುತ್ತಿರಲ್ಲ. ನನ್ನದು ಹಿಟ್ ಅಂಡ್ ಕೇಸ್ ಇಲ್ಲ. ನೇರವಾಗಿ ಹೇಳುತ್ತೇನೆ. ಕುಮಾರಸ್ವಾಮಿ ವಿಚಾರ ಇಡೀ ರಾಜ್ಯದ ಜನಕ್ಕೆ ಗೊತ್ತಿಲ್ಲ ಎಂದು ಯೋಗೇಶ್ವರ್ ಹೇಳಿದರು.

ಚನ್ನಪಟ್ಟಣಕ್ಕೆ ಕುಮಾರಸ್ವಾಮಿ ಆಕಸ್ಮಿಕ ಅತಿಥಿ:
ಕುಮಾರಸ್ವಾಮಿ ನಮ್ಮ ತಾಲೂಕಿಗೆ ಆಕಸ್ಮಿಕ ಅತಿಥಿ. ತಾಲೂಕಿನಲ್ಲಿ ನಾನು ಸುದೀರ್ಘ 25 ವರ್ಷದಿಂದ ರಾಜಕಾರಣ ಮಾಡುತ್ತಿದ್ದೇನೆ. ಜನಸಾಮಾನ್ಯರ ಅಸ್ತಿ ಹೊಡೆಯುವ ಅನಿರ್ವಾಯತೆ ನನಗೆ ಇಲ್ಲ. ತಾಲೂಕಿನಲ್ಲಿ ಆಸ್ತಿ ಹೊಡೆಯುವ ಕೆಲಸ ಮಾಡಿಲ್ಲ. ಆದರೆ ಕುಮಾರಸ್ವಾಮಿ ಮೇಲೆ ಆಪಾದನೆ ಇದೆ. ಬಿಡದಿಯಲ್ಲಿ ದಲಿತ ಜಮೀನು ಕಿತ್ತುಕೊಂಡ. ಬಿಡದಿಯಲ್ಲಿ ಏನು ಬಂಗಲೆ ಕಟ್ಟಿಕೊಂಡಿದ್ದಾನೆ ಅದು ದಲಿತರ ಜಮೀನು ಎಂಬ ಆಪಾದನೆ ಇದೆ. ನಾಲಿಗೆ ಬಿಗಿ ಹಿಡಿದು ಮಾತನಾಡು, ನಿಂದು ಅತೀ ಆಯ್ತು ಎಂದೂ ಹೇಳಿದ್ದೇನೆ. ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಬರಲಿ. ಅಭಿವೃದ್ಧಿ ವಿಚಾರವಾಗಿ ಚರ್ಚೆಗೆ ಬರಲಿ ಎಂದು ಯೋಗೇಶ್ವರ್ ಸವಾಲು ಹಾಕಿದರು.

ಕುಮಾರಸ್ವಾಮಿ ಒಬ್ಬ ನಯವಂಚಕ… ದಿನೇ ದಿನೆ ಕೀಳು ಮಟ್ಟಕ್ಕೆ ಬರುತ್ತಿದ್ದಾನೆ:
2023ಕ್ಕೆ ನಾನು ನೀನು ಚುನಾವಣೆಯಲ್ಲಿ ಮುಖಾಮುಖಿ ಆಗುತ್ತಿದ್ದೇವೆ. ನಿನ್ನ ಹೆಂಡತಿ ‌ಮೇಲೆ ಒಂದು ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ನಿನ್ನ ವಿರುದ್ಧ ಚುನಾವಣೆ ಮಾಡಲು ಸಿದ್ದವಿದ್ದೇನೆ. ಚನ್ನಪಟ್ಟಣ ನನ್ನ ತಾಲೂಕು, ನನ್ನ ಜನ್ಮಭೂಮಿ. ಇಲ್ಲಿ ನನ್ನ ಮೇಲೆ ಆರೋಪ ಮಾಡುವುದು ಕುಮಾರಸ್ವಾಮಿ ಹತಾಶೆ ಮನೊಭಾವನೆ ತೋರಿಸುತ್ತದೆ. ರಾಜಕೀಯ ಅಸ್ತಿತ್ವ ದಿನದಿಂದ ದಿನಕ್ಕೆ ಕಳೆದುಕೊಳ್ಳುತ್ತಿದ್ದಾನೆ. ಬಣ್ಣದ ಮಾತು, ಬೂಟಾಟಿಕೆಯಿಂದ ಜನರನ್ನ ಯಮಾರಿಸುವ ಕಾಲ ಹೋಯಿತು. ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ನೇರವಾಗಿ ನಿನ್ನನ್ನ ಹಿಡಿದು ಕೇಳುತ್ತೇನೆ. ಎಚ್ಚರಿಕೆ ಕೊಡುತ್ತಿದ್ದೇನೆ. ಕುಮಾರಸ್ವಾಮಿ ದಿನೇ ದಿನೆ ಕೀಳು ಮಟ್ಟಕ್ಕೆ ಬರುತ್ತಿದ್ದಾನೆ. ಕುಮಾರಸ್ವಾಮಿ ಒಬ್ಬ ನಯವಂಚಕ. ನನ್ನ ಬಗ್ಗೆ ಮಾತನಾಡಿದ್ರೆ ಅಡ್ಡಹಾಕಿ ಹಿಡಿದು ಕೇಳುತ್ತೇನೆ. 25 ವರ್ಷದಿಂದ ನನಗೂ ಅವನಿಗೂ ರಾಜಕೀಯ ವಿರೋಧವಿದೆ ಎಂದು ಯೋಗೇಶ್ವರ್ ಹೇಳಿದರು.

Also Read:
ಪಂಚ ರಾಜ್ಯಗಳ ಚುನಾವಣೆ ಸೋಲಿಗೆ ಸೋನಿಯಾರನ್ನು ದೂರಿ ಪ್ರಯೋಜನವಿಲ್ಲ: ಮಲ್ಲಿಕಾರ್ಜುನ ಖರ್ಗೆ

Also Read:
Rohit Shetty: ತೆರೆಯ ಮೇಲೆ ಕಾರುಗಳನ್ನು ಪುಡಿ-ಪುಡಿ ಮಾಡಿಸುವ ರೋಹಿತ್ ಶೆಟ್ಟಿ ಬಳಿ ಇದೆ ದುಬಾರಿ ಬೆಲೆಯ ಕಾರುಗಳು! ನಿರ್ದೇಶಕನ ಒಟ್ಟು ಆಸ್ತಿ ಎಷ್ಟು?

Published On - 1:39 pm, Mon, 14 March 22