ಆಕ್ರಮವಾಗಿ 15 ಇ ಖಾತೆ ಮಾಡಿಕೊಟ್ಟ ಆರೋಪ, ಕನಕಪುರದ ಕಾಂಗ್ರೆಸ್ ಮುಖಂಡನ ಮನೆಯ ಮೇಲೆ ಪೊಲೀಸರ ದಾಳಿ

ಆಕ್ರಮವಾಗಿ 15 ಇ ಖಾತೆ ಮಾಡಿಕೊಟ್ಟ ಆರೋಪ, ಕನಕಪುರದ ಕಾಂಗ್ರೆಸ್ ಮುಖಂಡನ ಮನೆಯ ಮೇಲೆ ಪೊಲೀಸರ ದಾಳಿ
ಆಕ್ರಮವಾಗಿ 15 ಇ ಖಾತೆ ಆರೋಪ, ಕನಕಪುರದ ಕಾಂಗ್ರೆಸ್ ಮುಖಂಡನ ಮನೆಯ ಮೇಲೆ ಪೊಲೀಸರ ದಾಳಿ

ಭ್ರಷ್ಟಾಚಾರ ಮತ್ತು ಆಕ್ರಮ ಖಾತೆ ವಿಚಾರವಾಗಿ ರಾಮನಗರ ‌ಜಿಲ್ಲೆಯ ಕನಕಪುರ ನಗರಸಭೆ ಮತ್ತು ಮಾಗಡಿ ಪುರಸಭೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಮನಗರ ಎಸಿಬಿ ಡಿವೈಎಸ್ ಪಿ ಗೋಪಾಲ್ ಜೋಗಿನ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆದಿದೆ.

TV9kannada Web Team

| Edited By: sadhu srinath

May 10, 2022 | 3:40 PM

ರಾಮನಗರ: ಆಕ್ರಮವಾಗಿ ಡಿಜಿಟಲ್ ಕೀ ಬಳಸಿ 15 ಇ ಖಾತೆಗಳನ್ನು (Illegal E Khatha) ಮಾಡಿಕೊಟ್ಟಿರುವ ಆರೋಪದ ಮೇಲೆ ಕನಕಪುರ ನಗರಸಭೆ ಉಪಾಧ್ಯಕ್ಷ ರಾಮು (Kanakapura city municipal council deputy chairman) ಮನೆ ಹಾಗೂ ಆತನಿಗೆ ಸೇರಿದ ದುರ್ಗಾ ಸೈಬರ್ ಸೆಂಟರ್ ಮೇಲೆ ರಾಮನಗರ ಸಿಇಎನ್ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ (CEN police raid). ಕನಕಪುರ‌ದ ಬೂದಿಗೆರೆ ನಗರದಲ್ಲಿ ಇರುವ ಸೈಬರ್ ಸೆಂಟರ್ ಮತ್ತು ಮಹದೇಶ್ವರ ಬಡಾವಣೆಯಲ್ಲಿರೋ ಮನೆಯ ಮೇಲೆ ಈ ದಾಳಿ ನಡೆದಿದೆ. ಡಿಜಿಟಲ್ ಕೀ ಬಳಸಿ ಆಕ್ರಮ ಇ ಖಾತೆ ಕೊಟ್ಟ ಆರೋಪದ ಹಿನ್ನೆಲೆ ದಾಳಿ ನಡೆಸಿದಾಗ ಸೈಬರ್ ಸೆಂಟರ್ ನಲ್ಲಿ ಸಾವಿರಾರು ಖಾತೆಗಳನ್ನ ಮಾಡಿಕೊಟ್ಟರೊ ಶಂಕೆ ವ್ಯಕ್ತವಾಗಿದೆ.

ಕನಕಪುರದ ಕಾಂಗ್ರೆಸ್ ಮುಖಂಡ, ಹಾಲಿ ನಗರಸಭೆ ಉಪಾಧ್ಯಕ್ಷ ರಾಮು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಆಪ್ತ ಎಂದು ತಿಳಿದುಬಂದಿದೆ. ದಾಳಿ ನಡೆದ ಎರಡೂ ಕಡೆಗಳಲ್ಲಿ ಸಿಇಎನ್ ಠಾಣೆ ಪೊಲೀಸರು ಕಂಪ್ಯೂಟರ್ ಗಳ ಪರಿಶೀಲನೆ ನಡೆಸುತ್ತಿದ್ದಾರೆ. ಸೈಬರ್ ರಾಮು ಸದ್ಯ ತಲೆ ಮರೆಸಿಕೊಂಡಿದ್ದಾರೆ. ಮಂಚನಾಯನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 15 ಇ ಖಾತೆಗಳನ್ನ ನಕಲಿ‌ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸಿಇಎನ್ ಠಾಣೆಯಲ್ಲಿ ರಾಮು ವಿರುದ್ದ ಪ್ರಕರಣ ದಾಖಲಾಗಿತ್ತು.

ಎಸಿಬಿ ಅಧಿಕಾರಿಗಳಿಂದ ದಾಳಿ: ಭ್ರಷ್ಟಾಚಾರ ಮತ್ತು ಆಕ್ರಮ ಖಾತೆ ವಿಚಾರವಾಗಿ ರಾಮನಗರ ‌ಜಿಲ್ಲೆಯ ಕನಕಪುರ ನಗರಸಭೆ ಮತ್ತು ಮಾಗಡಿ ಪುರಸಭೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಮನಗರ ಎಸಿಬಿ ಡಿವೈಎಸ್ ಪಿ ಗೋಪಾಲ್ ಜೋಗಿನ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆದಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada