ರಾಮನಗರದಲ್ಲಿ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 8 ಮಕ್ಕಳು ಸೇರಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ನಡೆದಿದೆ. ಈಗಾಗಲೇ ಅಧಿಕಾರಿಗಳು ಊಟವನ್ನು ಸ್ಯಾಂಪಲ್ ತರಿಸಿಕೊಂಡಿದ್ದಾರೆ. ಕಳೆದ ಒಂದು ವಾರದಲ್ಲಿ ಇಂತಹದ್ದೇ ಮೂರನೇ ಘಟನೆ ಇದಾಗಿದೆ.

ರಾಮನಗರದಲ್ಲಿ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ
ರಾಮನಗರದಲ್ಲಿ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ ಅಸ್ವಸ್ಥ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: May 10, 2024 | 10:04 PM

ರಾಮನಗರ, ಮೇ.10: ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ರಾಮನಗರ (Ramanagara)ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ನಡೆದಿದೆ. ಸಂತೋಷ್ ಎಂಬುವವರ ಮನೆಯಲ್ಲಿ ಇಂದು(ಮೇ.10) ಗೃಹ ಪ್ರವೇಶವನ್ನು ಹಮ್ಮಿಕೊಂಡಿದ್ದರು. ಅದರಂತೆ ಮಧ್ಯಾಹ್ನ 1.30 ರ ಸಮಯದಲ್ಲಿ ಬಂದಂತಹ ಅತಿಥಿಗಳು ಊಟ‌ ಮಾಡಿದ್ದರು. ಬಳಿಕ ಹಲವರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಕೂಡಲೇ 28 ಕ್ಕೂ ಹೆಚ್ಚು ಜನರನ್ನು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರಾಣಾಪಾಯದ ತೊಂದರೆ‌ ಇಲ್ಲ ಎಂದು ವೈದ್ಯರ ಸ್ಪಷ್ಟನೆ

ಇನ್ನು ಇದರಲ್ಲಿ 8 ಮಕ್ಕಳು ಇದ್ದು, ಎಲ್ಲರಿಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಮಾತನಾಡಿದ ಜಿಲ್ಲಾಸ್ಪತ್ರೆ ವೈದ್ಯರು ಯಾವುದೇ ಪ್ರಾಣಾಪಾಯದ ತೊಂದರೆ‌ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬಿಸಿಲಿನ ಕಾರಣ ಫುಡ್ ಪಾಯಿಸನ್ ಆಗಿರುವ ಕುರಿತು ಅನುಮಾನ ಮೂಡಿದೆ. ಈಗಾಗಲೇ ಅಧಿಕಾರಿಗಳು ಊಟವನ್ನು ಸ್ಯಾಂಪಲ್ ತರಿಸಿಕೊಂಡಿದ್ದಾರೆ. ಕಳೆದ ಒಂದು ವಾರದಲ್ಲಿ ಇಂತಹದ್ದೇ ಮೂರನೇ ಘಟನೆ ಇದಾಗಿದೆ.

ಇದನ್ನೂ ಓದಿ:ಬೀಗರೂಟ ಮಾಡಿ 200ಕ್ಕೂ ಹೆಚ್ಚು ಜನ ಅಸ್ವಸ್ಥ, ವೆಜ್ ಸೇವಿಸಿ ಸಚಿವ ಬಚಾವ್

ನಾಲ್ಕು ದಿನದ ಹಿಂದೆ ಜಿಲ್ಲೆಯಲ್ಲಿ  ಐಸ್​ಕ್ರೀಂ ಸೇವಿಸಿ 80 ಜನರು ಅಸ್ವಸ್ಥ

ಇನ್ನು ಇದೇ ಮೇ.06 ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದ ಟಿಪ್ಪುನಗರದಲ್ಲಿ ನಡೆದಿದ್ದ ಮದುವೆ ಸಮಾರಂಭದಲ್ಲಿ ಐಸ್​ಕ್ರೀಂ ಸೇವಿಸಿ 80 ಜನರು ಅಸ್ವಸ್ಥಗೊಂಡಿದ್ದರು. ಮದುವೆ ಸಮಾರಂಭದಲ್ಲಿ ಊಟದ ಬಳಿಕ ಐಸ್​ಕ್ರೀಂ ತಿಂದು ತಮ್ಮ ಊರುಗಳಿಗೆ ತೆರಳುತ್ತಿದ್ದರು. ಈ ವೇಳೆ ದಾರಿ ಮಧ್ಯೆ ವಾಂತಿ, ಭೇದಿ ಶುರುವಾಗಿದ್ದು, ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಸಮಾರಂಭದಲ್ಲಿ ಅವಧಿ ಮೀರಿದ ಐಸ್​ಕ್ರೀಂ ನೀಡಿರುವ ಆರೋಪ ಕೇಳಿಬಂದಿತ್ತು. ಇದೀಗ ಮತ್ತೊಂದು ಇಂತಹ ಘಟನೆ ಬೆಳಕಿಗೆ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ