ರಾಮನಗರ: ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಹುಸೇನ್ ವಿಭಿನ್ನ ರೀತಿಯಲ್ಲಿ ಹೋರಾಟ ಮಾಡಿದ್ದಾರೆ. 2 ಬಿಂದಿಗೆಗಳಲ್ಲಿ ನೀರನ್ನು ತುಂಬಿಸಿಕೊಂಡು ಹೆಗಲ ಮೇಲೆ ಹೊತ್ತುಕೊಂಡು ಹುಸೇನ್ ಪಾದಯಾತ್ರೆಯಲ್ಲಿ ಸಾಗುತ್ತಿದ್ದಾರೆ. ಮೇಕೆದಾಟು ಕೊಳದಿಂದ ನೀರು ತುಂಬಿಸಿಕೊಂಡು ನಡೆಯುತ್ತಿದ್ದಾರೆ. ನಮಗೆ ಮುಂದಿನ ದಿನಗಳಲ್ಲಿ ಇದೇರೀತಿ ನೀರು ತುಂಬಿಸಿಕೊಂಡು ನಡೆಯಬೇಕಾದ ಪರಿಸ್ಥಿತಿ ಬರಬಹುದು ಅನ್ನೋ ಸೂಚನೆ ಇದು ಎಂದು ಹೇಳಿದ್ದಾರೆ.
ಹೈಕಮಾಂಡ್ ಜೊತೆ ಮಾತನಾಡಿ ಈ ನೀರನ್ನು ಒಂದು ಮುಖ್ಯ ಕಾರ್ಯಕ್ಕೆ ಬಳಸಿಕೊಳ್ಳುತ್ತೇನೆ. ಬಿಸಿಲಿನಲ್ಲಿ ನಾವೂ ನಡೆಯೋದೆ ಕಷ್ಟ/ ಆದ್ರೆ ನಾನು ಬಿಂದಿಗೆಗಳಲ್ಲಿ ನೀರನ್ನು ತುಂಬಿಸಿಕೊಂಡು ಹೋಗ್ತಿರೋದು ನಮ್ಮ ನೀರಿಗಾಗಿ. ಈ ಹೋರಾಟ ಎಷ್ಟೇ ಕಷ್ಟವಾದರೂ ನಿರಂತರವಾಗಿ ಸಾಗಲಿದೆ ಎಂದು ಹುಸೇನ್ ತಿಳಿಸಿದ್ದಾರೆ.
ಬಳಿಕ ಇದೀಗ ಮೇಕೆದಾಟು ಪಾದಯಾತ್ರೆಗೆ ಭೋಜನ ವಿರಾಮ ನೀಡಲಾಗಿದೆ. ಮಾಯಗಾನಹಳ್ಳಿ ತಲುಪಿದ ಮೇಕೆದಾಟು ಪಾದಯಾತ್ರೆ ಭೋಜನ ವಿರಾಮ ತೆಗೆದುಕೊಳ್ಳಲಾಗಿದೆ. ಇಲ್ಲಿಂದ ಬಿಡದಿಗೆ ಇನ್ನೂ 6-7 ಕಿಲೋ ಮೀಟರ್ ಬಾಕಿ ಇದೆ. ಕಾಂಗ್ರೆಸ್ ನಾಯಕರಾದ ರಣದೀಪ್ ಸುರ್ಜೆವಾಲಾ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಭೋಜನ ವಿಶ್ರಾಂತಿಗೆ ತೆರಳಿದ್ದಾರೆ.
ಇದನ್ನೂ ಓದಿ: Mekedatu Padayatra 2.0 Live: ಮಾಯಗಾನಹಳ್ಳಿ ತಲುಪಿದ ಮೇಕೆದಾಟು ಪಾದಯಾತ್ರೆ
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ನಟ ಪ್ರೇಮ್ ಬೆಂಬಲ; ನಗಾರಿ ಬಾರಿಸಿ ಹುರಿದುಂಬಿಸಿದ ‘ಲವ್ಲಿ ಸ್ಟಾರ್’