ರಾಮನಗರ ಚಾಮುಂಡೇಶ್ವರಿ ಕರಗಕ್ಕೆ ಸಿದ್ಧತೆ; ಡಿಸಿಎಂ ಸಿಎಂ ಆಗಲಿ ಎಂದು ಶಕ್ತಿ ದೇವತೆಗೆ ಶಾಸಕನ ಹರಕೆ

ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ನಾಡಹಬ್ಬದಂತೆ ರಾಮನಗರದಲ್ಲಿ ಚಾಮುಂಡೇಶ್ವರಿ ಕರಗ ಮಾಡಲು ಮುಂದಾಗಿದ್ದು ಭರ್ಜರಿ ಸಿದ್ಧತೆ ನಡೆದಿದೆ. ಇನ್ನು ಡಿಸಿಎಂ ಸಾಹೇಬ್ರು ಆದಷ್ಟು ಬೇಗ ಸಿಎಂ ಆಗಲಿ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಶಕ್ತಿ ದೇವತೆಗೆ ಹರಕೆ ಕಟ್ಟಿದ್ದಾರೆ.

ರಾಮನಗರ ಚಾಮುಂಡೇಶ್ವರಿ ಕರಗಕ್ಕೆ ಸಿದ್ಧತೆ; ಡಿಸಿಎಂ ಸಿಎಂ ಆಗಲಿ ಎಂದು ಶಕ್ತಿ ದೇವತೆಗೆ ಶಾಸಕನ ಹರಕೆ
12 ದೇವಸ್ಥಾನಕ್ಕೆ ಶಾಸಕ ಇಕ್ಬಾಲ್ ಹುಸೇನ್ ಮಡಿಲಕ್ಕಿ ಸಮರ್ಪಣೆ
Follow us
| Updated By: ಆಯೇಷಾ ಬಾನು

Updated on: Jul 22, 2024 | 10:14 AM

ರಾಮನಗರ, ಜುಲೈ.22: ಕಾಂಗ್ರೆಸ್ ಮುಸ್ಲಿಂ ಶಾಸಕ ಇಕ್ಬಾಲ್ ಹುಸೇನ್ (H. A. Iqbal Hussain) ಅವರಿಂದ ರಾಮನಗರದಲ್ಲಿ ಅದ್ದೂರಿ ಚಾಮುಂಡೇಶ್ವರಿ ಕರಗ (Ramanagara Chamundeshwari Karaga) ಮಹೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಇಡೀ ರಾಮನಗರ ಮದುವಣಗಿತ್ತಿಯಂತೆ‌ ಸಿಂಗಾರಗೊಂಡಿದೆ. 12 ದೇವಸ್ಥಾನಕ್ಕೆ ಶಾಸಕ ಇಕ್ಬಾಲ್ ಹುಸೇನ್ ಮಡಿಲಕ್ಕಿ ಸಮರ್ಪಣೆ ಮಾಡುವ ಮುಖಾಂತರ ಕರಗಕ್ಕೆ ಚಾಲನೆ ನೀಡಿದ್ದಾರೆ. ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಬಹುಬೇಗ ಸಿಎಂ ಆಗುವಂತೆ ಶಕ್ತಿ ದೇವತೆ ಬಳಿ ಶಾಸಕ ಇಕ್ಬಾಲ್ ಹುಸೇನ್ ಹರಕೆಯೂ ಹೊತ್ತಿದ್ದಾರೆ.

ಇನ್ನು ಈ ವೇಳೆ ಮಾತನಾಡಿದ ಇಕ್ಬಾಲ್ ಹುಸೇನ್, ರಾಮನಗರದಲ್ಲಿ ಶಕ್ತಿದೇವತೆಯ ಆರಾಧನೆ ನಡೆದಿದೆ. ಇದು ಎಲ್ಲಾ ಧರ್ಮಗಳಿಗೂ ಶಾಂತಿ ಸಂದೇಶ ಸಾರುವ ಹಬ್ಬ. ಸರ್ವ ಧರ್ಮದವರು ಸೇರಿ ಕರಗ ಮಹೋತ್ಸವವನ್ನು ಮಾಡ್ತೇವೆ. ಈ ಮೂಲಕ ನಾವು ಒಂದೇ ಎಂದು ಸಂದೇಶ ಕೊಟ್ಟಿದ್ದೇವೆ. ಇಲ್ಲಿ ಹಿಂದೂ ಮುಸ್ಲಿಂ ಅನ್ನೋದೇ ಇಲ್ಲ ಎಂದರು.

ಮತ್ತೊಂದೆಡೆ ರಾಮನಗರ ಕರಗಕ್ಕೆ ಕೋಟ್ಯಾಂತರ ಖರ್ಚು ಮಾಡಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಶಾಸಕ ಇಕ್ಬಾಲ್ ಹುಸೇನ್, ಬೇರೆಯವರ ರೀತಿ ಮಾಡೋದಕ್ಕೆ ಆಗಲ್ಲ. ಭಗವಂತ‌ ನನಗೆ ಅವಕಾಶ ಕೊಟ್ಟಿದ್ದಾನೆ. ಅದಕ್ಕೆ ಭಕ್ತಿ ಪೂರ್ವಕ ಕೆಲಸ ಮಾಡ್ತೇನೆ. ಪೂಜೆ, ಅಲಂಕಾರ, ಸಂಪ್ರದಾಯದಂತೆ ಎಲ್ಲವನ್ನೂ ಪಾಲನೆ ಮಾಡ್ತೇನೆ ಎಂದರು.

ಹಾಗೂ ಡಿಸಿಎಂ ಸಾಹೇಬ್ರು ಬಹುಬೇಗ ಸಿಎಂ‌ ಆಗುವ ಕೋರಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಶಾಸಕರು, ಅವರು ಪಕ್ಷ ಕಟ್ಟಿದ್ದಾರೆ, ಸಂಘಟನೆ ಮಾಡಿದ್ದಾರೆ. ಹೋರಾಟ ಮಾಡಿದ್ದಾರೆ, ಆ ನಿಟ್ಟಿನಲ್ಲಿ ನನಗೆ ಆಸೆ ಇರಲ್ವಾ? ಆಸೆ ಇದೆ ನನಗೆ, ನಾನು ದೇವರ ಬಳಿ ಕೋರಿಕೆ ಇಟ್ಟಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: Bengaluru Karaga 2024: ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ ಸಂಪನ್ನ, ಫೋಟೋಸ್​ ಇಲ್ಲಿವೆ

ಮೈಸೂರಿಗೆ ದಸರಾ ಹಬ್ಬವಿದ್ದಂತೆ, ರಾಮನಗರಕ್ಕೆ ಚಾಮುಂಡೇಶ್ವರಿ ಅಮ್ಮನವರ ಕರಗ ಹೆಚ್ಚು ಪ್ರಸಿದ್ಧಿ. ಭಕ್ತರ ಸಂರಕ್ಷಣಾರ್ಥ ನಗರದಲ್ಲಿ ನೆಲೆಸಿರುವ ಶಕ್ತಿದೇವತೆ ಚಾಮುಂಡೇಶ್ವರಿ ಅಮ್ಮನವರ ಕರಗ ಸೇರಿದಂತೆ ಅಷ್ಟ ನಾಡದೇವತೆಗಳ ಕರಗ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ನಡೆಯುತ್ತಿದೆ. ನಾಳೆಯಿಂದ ಚಾಮುಂಡೇಶ್ವರಿ ಕರಗ ಮಹೋತ್ಸವ ಆರಂಭವಾಗಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ