ರಾಮನಗರ: ಒನ್ ವೇನಲ್ಲಿ ಶಾಲಾವಾಹನ ಚಲಾಯಿಸಿದ್ದ ಚಾಲಕನ ಬಂಧನ
ಬೆಂಗಳೂರು- ಮೈಸೂರು ಎಕ್ಸಪ್ರೇಸ್ ವೇನಲ್ಲಿ ನಿನ್ನೆ(ಸೆ. 13) ಒನ್ ವೇಯಲ್ಲಿ ಶಾಲಾವಾಹನ ಚಲಾಯಿಸಿ ದುಸ್ಸಾಹಸ ಮೆರೆದಿದ್ದ ಚಾಲಕನನ್ನು ಗುರುವಾರ ಬಂಧಿಸಲಾಗಿದೆ. ಎಡಿಜಿಪಿ ಅಲೋಕ್ ಕುಮಾರ್ ಆದೇಶ ಬೆನ್ನೆಲೆ ಕುಂಬಳಗೋಡು ಪೊಲೀಸರು ಹುಡುಕಾಟ ನಡೆಸಿ, ಕೊನೆಗೂ ಶಾಲಾವಾಹನ ಚಾಲಕ ಮತ್ತು ಬಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಮನಗರ, ಸೆಪ್ಟೆಂಬರ್ 14: ಬೆಂಗಳೂರು- ಮೈಸೂರು ಎಕ್ಸಪ್ರೇಸ್ ವೇನಲ್ಲಿ ನಿನ್ನೆ(ಸೆ. 13) ಒನ್ ವೇಯಲ್ಲಿ ಶಾಲಾವಾಹನ ಚಲಾಯಿಸಿ ದುಸ್ಸಾಹಸ ಮೆರೆದಿದ್ದ ಚಾಲಕ (driver) ನನ್ನು ಗುರುವಾರ ಬಂಧಿಸಲಾಗಿದೆ. ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ನಿನ್ನೆ ಬೆಳಗ್ಗೆ ಎಡಿಜಿಪಿ ಅಲೋಕ್ ಕುಮಾರ್ರಿಂದ ಆದೇಶ ನೀಡಲಾಗಿತ್ತು. ಆದೇಶ ಬೆನ್ನೆಲೆ ಕುಂಬಳಗೋಡು ಪೊಲೀಸರು ಹುಡುಕಾಟ ನಡೆಸಿ, ಕೊನೆಗೂ ಶಾಲಾವಾಹನ ಚಾಲಕ ಮತ್ತು ಬಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹನ್ನೆರಕ್ಕೂ ಹೆಚ್ಚು ಮಕ್ಕಳ ಪ್ರಾಣದ ಜತೆ ಚೆಲ್ಲಾಟವಾಡಿದ ಚಾಲಕನ ದುಸ್ಸಾಹಸ ಇತರೆ ಕಾರಿನ ಮುಂಭಾಗದ ಕ್ಯಾಮೆರಾದಲ್ಲಿ ವಿಡಿಯೋ ಸೆರೆ ಆಗಿತ್ತು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೂಡ ಡೇಂಜರ್ ಡ್ರೈವ್ ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ: Video: ಒನ್ ವೇಯಲ್ಲಿ ನುಗ್ಗಿದ ಶಾಲಾವಾಹನ: 12 ಮಕ್ಕಳ ಪ್ರಾಣದ ಜತೆ ಚಾಲಕ ಚೆಲ್ಲಾಟ
ಘಟನೆ ನಡೆದ ತಕ್ಷಣ ಶಾಲಾ ಮಂಡಳಿ ಕ್ರಮ ಕೈಗೊಂಡಿದ್ದು, ಎರಡು ತಿಂಗಳ ಹಿಂದೆಯೇ ಚಾಲಕನನ್ನು ಕೆಲಸದಿಂದ ತೆಗೆಯಲಾಗಿತ್ತು. ಆದರೆ ವಿಡಿಯೋ ವೈರಲ್ ಆದ ಬಳಿಕ ಚಾಲಕ ಮತ್ತು ವಾಹನವನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಕುಂಬಳಗೋಡು ಪೊಲೀಸರ ಕಾರ್ಯಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಹೀಗಿದೆ
It’s an old video as the driver has been removed two months back itself However, FIR was registered yesterday and today the bus has been seized and the driver in question apprehended
Ramanagara Police under the leadership of SP has taken swift action
Kudos to the team pic.twitter.com/Vu7LuKGfTN
— alok kumar (@alokkumar6994) September 14, 2023
ಘಟನೆ ಕುರಿತಾಗಿ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದು, ವೈರಲ್ ಆದ ವಿಡಿಯೋ ಹಳೆಯದು. ಘಟನೆ ನಡೆದ ತಕ್ಷಣ ಶಾಲಾ ಮಂಡಳಿ ಚಾಲಕನ ವಿರುದ್ದ ಕ್ರಮಕೈಗೊಂಡಿದ್ದು, ಎರಡು ತಿಂಗಳ ಹಿಂದೆಯೇ ಕೆಲಸದಿಂದ ತೆಗೆದು ಹಾಕಲಾಗಿದೆ. ಆದರೂ ನಿನ್ನೆ ಎಫ್ಐಆರ್ ದಾಖಲಾಗಿದ್ದು, ಇಂದು ಬಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಚಾಲಕನನ್ನು ಬಂಧಿಸಲಾಗಿದೆ. ಎಸ್ಪಿ ನೇತೃತ್ವದಲ್ಲಿ ರಾಮನಗರ ಪೊಲೀಸರು ಅತ್ಯಂತ ಕ್ಷಿಪ್ರವಾಗಿ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.