New Pontiff: ಶೀಘ್ರ ಬಂಡೇಮಠಕ್ಕೆ ಹೊಸ ಮಠಾಧೀಶರ ನೇಮಕ, ಸಚ್ಚಾರಿತ್ರ್ಯ-ವಿದ್ಯಾವಂತ-ಆಧ್ಯಾತ್ಮಿಕ ಜ್ಞಾನ ಇರುವವರ ಹುಡುಕಲಾಗುವುದು -ಪರಮಶಿವಯ್ಯ ಹೇಳಿಕೆ

| Updated By: ಸಾಧು ಶ್ರೀನಾಥ್​

Updated on: Nov 03, 2022 | 1:46 PM

ಬಸವಲಿಂಗ ಶ್ರೀಗಳ ಆತ್ಮಹತ್ಯೆ ವಿಷಾದನೀಯ. ಬಂಧನ ಆಗಿರೋ ಕಣ್ಣೂರು ಶ್ರೀ ನಡೆ ಹಿಂದಿನಿಂದಲೂ ಸರಿ ಇಲ್ಲ. ಬಸವಲಿಂಗ ಶ್ರೀಗೆ ಇವರು ಅನ್ಯಾಯ ಮಾಡಿದ್ದಾರೆ. ಬಂಧನ ಆಗಿರುವವರು ಜೀವನ ಪೂರ್ತಿ ಜೈಲಿನಲ್ಲಿರಬೇಕು. ಕಾನೂನಿನ ಪ್ರಕಾರ ತಕ್ಕ ಶಿಕ್ಷೆ ನೀಡಬೇಕು -ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷ ಬಿ ಎಸ್ ಪರಮಶಿವಯ್ಯ

New Pontiff: ಶೀಘ್ರ ಬಂಡೇಮಠಕ್ಕೆ ಹೊಸ ಮಠಾಧೀಶರ ನೇಮಕ, ಸಚ್ಚಾರಿತ್ರ್ಯ-ವಿದ್ಯಾವಂತ-ಆಧ್ಯಾತ್ಮಿಕ ಜ್ಞಾನ ಇರುವವರ ಹುಡುಕಲಾಗುವುದು -ಪರಮಶಿವಯ್ಯ ಹೇಳಿಕೆ
ಶೀಘ್ರ ಬಂಡೇಮಠಕ್ಕೆ ಹೊಸ ಮಠಾಧೀಶರ ನೇಮಕ - ಪರಮಶಿವಯ್ಯ ಹೇಳಿಕೆ
Follow us on

ರಾಮನಗರ/ತುಮಕೂರು: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಬಗ್ಗೆ ಬಂಡೆಮಠದಲ್ಲಿ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದ್ದಾರೆ. ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್ ಸಂಬಂಧ ತನಿಖೆ ಆಗುತ್ತಿದೆ. ಘಟನೆ ಬಗ್ಗೆ ನಮಗೆ ಯಾವುದೇ ವಿಚಾರ ಗೊತ್ತಿಲ್ಲ. ಮೊದಲೇ ಗೊತ್ತಿದ್ದರೆ ಬಸವಲಿಂಗಶ್ರೀ ನನ್ನ ಬಳಿ ಹೇಳಿಕೊಳ್ಳುತ್ತಿದ್ದರು. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸ್ವಾಮೀಜಿಯ 11ನೇ ದಿನ ಕಾರ್ಯಕ್ರಮ ಮಾಡಲಾಗುತ್ತಿದೆ. ಯಾವುದೇ ವೇದಿಕೆ ಕಾರ್ಯಕ್ರಮವಿಲ್ಲ. ನಮ್ಮ ಆಚಾರ ವಿಚಾರದಂತೆ ಕಾರ್ಯಕ್ರಮ ‌ಮಾಡಲಾಗುತ್ತಿದೆ. ನಮ್ಮ ಮುಂದಿನ ಪ್ರಶ್ನೆ ಇರೋದು ಮಠದ ವ್ಯವಸ್ಥೆ ಬಗ್ಗೆ ಎಂದು ಹೇಳಿದ್ದಾರೆ.

ಈ ಮಧ್ಯೆ, ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಬಗ್ಗೆ ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷ ಬಿ ಎಸ್ ಪರಮಶಿವಯ್ಯ ಮಾತನಾಡಿದ್ದಾರೆ. ಬಸವಲಿಂಗ ಶ್ರೀಗಳ ಆತ್ಮಹತ್ಯೆ ವಿಷಾದನೀಯ. ಇಂದು ಪುಣ್ಯಾರಾಧನೆ ಕಾರ್ಯಕ್ರಮ ನಡೆಸಲಾಗಿದೆ. ಪ್ರಕರಣದಲ್ಲಿ ಬಂಧನ ಆಗಿರೋ ಕಣ್ಣೂರು ಶ್ರೀ ನಡೆ ಹಿಂದಿನಿಂದಲೂ ಸರಿ ಇಲ್ಲ. ಸಾಕಷ್ಟು ಹಗರಣ ಮಾಡಿದ್ದ ಇವರನ್ನು ಇತರೆ ಮಠದವರು ದೂರ ಇಟ್ಟಿದ್ರು. ಆದರೆ ಬಸವಲಿಂಗ ಶ್ರೀಗೆ ಇವರು ಅನ್ಯಾಯ ಮಾಡಿದ್ದಾರೆ. ಈಗ ಮೃತ್ಯುಂಜಯ ಸ್ವಾಮಿಜಿ ಬಂಧನ ಆಗಿದ್ದಾರೆ. ಬಂಧನ ಆಗಿರುವವರು ಜೀವನ ಪೂರ್ತಿ ಜೈಲಿನಲ್ಲಿರಬೇಕು. ಕಾನೂನಿನ ಪ್ರಕಾರ ತಕ್ಕ ಶಿಕ್ಷೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಹೋದರ ಸಚ್ಚಿದಾನಂದ ಮೂರ್ತಿ ನಮ್ಮ ಮಧ್ಯೆ ಮಾತುಕತೆ ಇಲ್ಲ:

ಇನ್ನು ಶೀಘ್ರದಲ್ಲೇ ಬಂಡೇಮಠಕ್ಕೆ ನೂತನ ಮಠಾಧೀಶರ ನೇಮಕ ಮಾಡಲಾಗುವುದು. ಸಿದ್ದಗಂಗಾ ಶ್ರೀಗಳ ನಿರ್ಣಯದಂತೆ ಹೊಸ ಸ್ವಾಮೀಜಿ ನೇಮಕ ಆಗುತ್ತೆ. ಸಚ್ಚಾರಿತ್ರ್ಯ, ವಿದ್ಯಾವಂತ, ಆಧ್ಯಾತ್ಮಿಕ ಜ್ಞಾನ ಇರುವವರ ಹುಡುಕಲಾಗುವುದು. ಡೆತ್ ನೋಟ್ ನಲ್ಲಿ ಸಹೋದರ ಸಚ್ಚಿದಾನಂದ ಮೂರ್ತಿ ಹೆಸರು ಉಲ್ಲೇಖ ವಿಚಾರವಾಗಿ ಸಚ್ಚಿದಾನಂದ ಮೂರ್ತಿ ಹಾಗೂ ನನಗೂ ಸಂಪರ್ಕ ಇಲ್ಲ. ತುಂಬಾ ವರ್ಷಗಳಿಂದ ನನ್ನಿಂದ ದೂರ ಇದ್ದು ನಮ್ಮ ಮಧ್ಯೆ ಮಾತುಕತೆ ಇಲ್ಲ. ಮೊದಲಿನಿಂದಲೂ ಆತ ಹಾಗೆ. ಕೆಲ ಸಚಿವರ ಪಿಎ ಆಗಿದ್ದ. ಆ‌ ಅಹಮ್ಮು ಇದೆ. ಈ ಘಟನೆಯಿಂದ ಮಠಾಧೀಶರ ಮೇಲಿನ‌ ಗೌರವ ಹೋಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವ ನಾಲ್ಕು ದಿನದ ಮೊದಲು ಬಸವಲಿಂಗ ಶ್ರೀ ಅವರನ್ನು ಭೇಟಿ ಮಾಡಿದ್ದೆ. ನಮ್ಮ ಬಳಿ ಯಾವುದನ್ನೂ ಹೇಳಿಕೊಂಡಿಲ್ಲ ಎಂದು ಟಿವಿ 9 ಪ್ರತಿನಿಧಿ ಪ್ರಶಾಂತ್ ಜೊತೆ ಮಾತುಕತೆ ನಡೆಸುತ್ತಾ ಪರಮಶಿವಯ್ಯ ತಿಳಿಸಿದ್ದಾರೆ.

ಸ್ಥಳ ಮಹಜರು -ಸಿದ್ದಗಂಗಾ ಮಠಕ್ಕೆ ಆರೋಪಿ ಮೃತ್ಯುಂಜಯ ಸ್ವಾಮಿಜಿ:

ಬಂಡೇ ಮಠದ ಶ್ರೀಗಳ ಆತ್ಮಹತ್ಯೆ ಪ್ರಕರಣದಲ್ಲಿ ಎ1 ಆರೋಪಿ ಕಣ್ಣೂರು ಶ್ರೀ ಮೃತ್ಯುಂಜಯ ಸ್ವಾಮಿಜಿಯನ್ನ ಸ್ಥಳ ಮಹಜರಿಗೆ ಸಿದ್ದಗಂಗಾ ಮಠಕ್ಕೆ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಹಳೇ ಮಠದಲ್ಲಿರುವ ಕಣ್ಣೂರು ಸ್ವಾಮಿಜಿ ವಾಸ್ತವ್ಯದ ಕೊಠಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಣ್ಣೂರು ಶ್ರೀ ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಪೊಲೀಸರೊಂದಿಗೆ ಸಹಕರಿಸುತ್ತಿದ್ದಾರೆ. ಇಂದು ಗುರುವಾರ ಬೆಳಗ್ಗೆ ಕಣ್ಣೂರು ಮಠದಲ್ಲಿಯೂ ಪೊಲೀಸರು ಸ್ಥಳ ಮಹಜರು ನಡೆಸಿದರು.

ಕಣ್ಣೂರು ಮಠಕ್ಕೆ ರಾಮನಗರ ಸೈಬರ್ ಕ್ರೈಮ್ ಇನ್ಸ್​​ಪೆಕ್ಟರ್​​​ ಭೇಟಿ, ಪರಿಶೀಲನೆ:

ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಸಂಬಂಧ ಸೈಬರ್ ಕ್ರೈಂ ಇನ್ಸ್​​ಪೆಕ್ಟರ್ (ಸಿಪಿಐ) ಗೋವಿಂದ್ ಅವರು . ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಣ್ಣೂರು ಮಠದಲ್ಲಿ ಪರಿಶೀಲನೆ ನಡೆಸಿದ್ದಾರೆ. ಹಲವು ಮಹತ್ವದ ಮಾಹಿತಿ ಕಲೆ ಹಾಕುತ್ತಿರುವ ಸಿಪಿಐ ಗೋವಿಂದ್ ಅವರು ಕಣ್ಣೂರು ಮಠದ ಇತಿಹಾಸ, ಮಠದ ಆಸ್ತಿ ಸೇರಿ ಹಲವಾರು ಮಾಹಿತಿಯನ್ನು ಸ್ಥಳೀಯರಿಂದಲೂ ಹಾಕುತ್ತಿದ್ದಾರೆ. ಮಠದಲ್ಲಿ ಸಿ.ಡಿ. ಏನಾದರೂ ಇಟ್ಟಿದ್ದರಾ, ಮೃತ್ಯುಂಜಯ ಸ್ವಾಮೀಜಿ ಯಾವಾಗ ಮಠಕ್ಕೆ ಬರುತ್ತಿದ್ದರು, ಯಾವಾಗ ವಾಪಸ್ ಹೋಗ್ತಿದ್ದರು? ಅಂತಾ ಸಿಪಿಐ ಹಲವು ಮಾಹಿತಿ ಪಡೆಯುತ್ತಿದ್ದಾರೆ.

ಪೊಲೀಸರ ಮಹಜರು ವೇಳೆ ಬಂಡೆಮಠದ ನಕಲಿ ಸೀಲ್ ಪತ್ತೆ:

ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪೊಲೀಸರಿಂದ 15 ನಿಮಿಷದಲ್ಲಿ ಸ್ಥಳ ಮಹಜರು ಮುಕ್ತಾಯಗೊಂಡಿದೆ. ಡಾ. ಮೃತ್ಯುಂಜಯಶ್ರೀ ಕರೆತಂದು ಮಹಜರು ಮಾಡಿದ ಪೊಲೀಸರಿಗೆ ಮಹಜರು ವೇಳೆ ಬಂಡೆಮಠದ ನಕಲಿ ಸೀಲ್ ಪತ್ತೆಯಾಗಿದೆ.

ಈ ವೇಳೆ, ಮಠದಲ್ಲಿದ್ದ ಭಕ್ತಾದಿಗಳಿಂದ ಕಣ್ಣೂರು ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮಹಜರು ಮುಗಿಸಿ ವಾಪಸ್ ಹೋಗುತ್ತಿದ್ದಂತೆ ಹಲ್ಕಾ ಕೆಲಸ ಮಾಡುವ ನಿನಗೆ ನಾಚಿಕೆ ಆಗಲ್ವಾ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.