AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ-ಡಿಕೆಶಿ ಒಗ್ಗಟ್ಟಿನ ಮಂತ್ರ: ನನಗೂ ಕೈ ಕೈ ಹಿಡಿದುಕೊಂಡು ಕೈ ಎತ್ತಿರಲಿಲ್ಲವೇ? ಹೆಚ್ ಡಿ ಕುಮಾರಸ್ವಾಮಿ ತಿರುಗೇಟು

ನನಗೂ ಮಾಡಿಲ್ಲವೇ ಮೈತ್ರಿ ಸರ್ಕಾರ ಇದ್ದ ವೇಳೆ? ನಾನು ನೋಡಿಲ್ಲವೇ..!? ಅದಕ್ಕೆ ನಾನು ಕೈ ಎತ್ತಿಸಿಕೊಂಡು ಹಾಕಿಸಿಕೊಳ್ಳಲಿಲ್ಲವೇ? ಅವರನ್ನು ನಂಬಿ, ಜನರನ್ನು ನಂಬಿಸಲು ಇಬ್ಬರೂ ಕೈ ಎತ್ತುತ್ತಿದ್ದಾರೆ - ಹೆಚ್ ಡಿ ಕುಮಾರಸ್ವಾಮಿ

ಸಿದ್ದರಾಮಯ್ಯ-ಡಿಕೆಶಿ ಒಗ್ಗಟ್ಟಿನ ಮಂತ್ರ: ನನಗೂ ಕೈ ಕೈ ಹಿಡಿದುಕೊಂಡು ಕೈ ಎತ್ತಿರಲಿಲ್ಲವೇ? ಹೆಚ್ ಡಿ ಕುಮಾರಸ್ವಾಮಿ ತಿರುಗೇಟು
ಸಿದ್ದರಾಮಯ್ಯ-ಡಿಕೆಶಿ ಒಗ್ಗಟ್ಟಿನ ಮಂತ್ರ: ನನಗೂ ಕೈ ಕೈ ಹಿಡಿದುಕೊಂಡು ಕೈ ಎತ್ತಿರಲಿಲ್ಲವೇ? ಹೆಚ್ ಡಿ ಕುಮಾರಸ್ವಾಮಿ ತಿರುಗೇಟು
TV9 Web
| Updated By: ಸಾಧು ಶ್ರೀನಾಥ್​|

Updated on:Aug 04, 2022 | 3:14 PM

Share

ರಾಮನಗರ: ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ (Siddarotsava) ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪರಸ್ಪರ ಕೈ ಎತ್ತಿಕೊಂಡು ಒಗ್ಗಟ್ಟಿನ ಮಂತ್ರ ಜಪಿಸಿರುವ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತಿರುಗೇಟು ನೀಡಿದ್ದಾರೆ. ಒಳ್ಳೇದು ಅಲ್ಲವೇ‌! ನನಗೂ ಕೈ ಕೈ ಹಿಡಿದುಕೊಂಡು ಕೈ ಎತ್ತಿರಲಿಲ್ಲವೇ? ಕೈ ಎತ್ತೋದು, ಕೈ ಇಳಿಸೋದು ಆಯಾ ಸಂದರ್ಭಕ್ಕೆ ನಡೀತಾ ಇರುತ್ತದೆ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದಿದ್ದಾರೆ.

ನನಗೂ ಮಾಡಿಲ್ಲವೇ ಮೈತ್ರಿ ಸರ್ಕಾರ ಇದ್ದ ವೇಳೆ? ನಾನು ನೋಡಿಲ್ಲವೇ..!? ಅದಕ್ಕೆ ನಾನು ಕೈ ಎತ್ತಿಸಿಕೊಂಡು ಹಾಕಿಸಿಕೊಳ್ಳಲಿಲ್ಲವೇ? ಅವರನ್ನು ನಂಬಿ, ಜನರನ್ನು ನಂಬಿಸಲು ಇಬ್ಬರೂ ಕೈ ಎತ್ತುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾರು ಯಾರು ಬೆನ್ನಿಗೆ ಚೂರಿ ಹಾಕಿಸಿಕೊಳ್ಳುತ್ತಾರೆ ನೋಡೊಣ ಬನ್ನಿ.. ಎಂದು ತುಟಿಯಂಚಿನಲ್ಲಿ ನಗೆ ತುಂಬಿಕೊಂಡು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದರು.

Siddaramaiah ಕೈ ಹಿಡ್ದ DKS.. ಯಾರಿಗೆ ಯಾರು ಚೂರಿ ಹಾಕ್ತಾರೋ ನೋಡೋಣ ಎಂದ HDK

ಪಾಪ! ನಾನು ಯೋಗೇಶ್ವರ್ ಅವರಷ್ಟು ನೀರಾವರಿ ತಜ್ಞ ಅಲ್ಲ! -ಕುಮಾರಸ್ವಾಮಿ

ರಾಮನಗರ: ಚನ್ನಪಟ್ಟಣದಲ್ಲಿ ನೀರಾವರಿ ಯೋಜನೆ ಬಗ್ಗೆ ಕುಮಾರಸ್ವಾಮಿಗೆ ಪರಿಕಲ್ಪನೆ ಇಲ್ಲ ಎಂಬ ಸಿಪಿ ಯೋಗೇಶ್ವರ್ ಹೇಳಿಕೆಗೆ ಹೆಚ್ ಡಿ ಕೆ ತಿರುಗೇಟು ನೀಡಿದ್ದಾರೆ. ಪಾಪ! ನಾನು ಅವರಷ್ಟು ನೀರಾವರಿ ತಜ್ಞ ಅಲ್ಲ! ನೀರಾವರಿ ತಜ್ಞರಾಗಿ ಅವರೇನು ಹೊರಹೊಮ್ಮಿದ್ದಾರೆ.. ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡು ನೀರಾವರಿ ತಜ್ಞರಾಗಿದ್ದಾರೆ! ದೊಡ್ಡ ದೊಡ್ಡ ಪ್ರಾಜೆಕ್ಟ್ ಮಾಡಿಕೊಂಡು ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡಿತ್ತಿದ್ದಾರಲ್ಲ. ಮೆಗಾಸಿಟಿ ಪ್ರಾಜೆಕ್ಟ್ ಮಾಡಿಕೊಂಡು ಸಾವಿರಾರು ಜನರಿಗೆ ಮೋಸ ಮಾಡಿದ್ರಲ್ಲ. ಅವಾಗ ಅವರಿಗೆ ನೀರಾವರಿ ಯೋಜನೆ ಬಗ್ಗೆ ಕಲ್ಪನೆ ಇರಲಿಲ್ಲ! ಎಂದು ಲೇವಡಿ ಮಾಡಿದ್ದಾರೆ.

ನಿನ್ನೆ ಅವರು (ಸಿಪಿ ಯೋಗೇಶ್ವರ್) ಕೊಟ್ಟ ಹೇಳಿಕೆಗಳನ್ನು ಗಮನಿಸಿದ್ದೇನೆ. ಮಳೆಯಿಂದಾಗಿ ಅಂತಹ ದೊಡ್ಡ ಸಮಸ್ಯೆಗಳೇನೂ ಆಗಿಲ್ಲ ಅಂತಾ ಅವರೇ ಹೇಳಿದ್ದಾರೆ. ಅಭಿವೃದ್ಧಿ ಯಾರು ಮಾಡಿದ್ದಾರೆ ಎಂಬುದು ಅವರಿಗೆ ಗೊತ್ತಾಗಿದೆ. ಮಾಕಳಿ ಮೈನರ್ ಇರಿಗೇಷನ್ ಪ್ರಾಜೆಕ್ಟ್ ಬಗ್ಗೆ ಮಾತನಾಡಿದ್ದಾರೆ. ಕಾಲ್ನಡಿಗೆ ಮಾಡಿಕೊಂಡು ಹೋಗಿ ನೀರಾವರಿ ಯೋಜನೆ ಮಾಡಿದ್ದೀನಿ ಅಂತಾ ಹೇಳಿದ್ದಾರೆ. ಮಾಗಡಿ ಹಾಗೂ ರಾಮನಗರ ತಾಲ್ಲೂಕಿಗೆ ಶಾಶ್ವತ ನೀರಾವರಿ ಮಾಡಬೇಕೆಂಬ ಕಲ್ಪನೆ ಹೊಂದಿದ್ದೇನೆ. ನಮ್ಮ ಪರಿಶುದ್ದವಾದ ಮನಸ್ಸಿನಿಂದ ದೇವರಲ್ಲಿ ಪ್ರಾರ್ಥನೆ ಮಾಡಿದ್ರೆ ದೇವರು ಈಡೇರಿಸುತ್ತಾನೆ ಎಂದು ಹೆಚ್ ಡಿ ಕೆ ಹೇಳಿದರು.

Published On - 2:51 pm, Thu, 4 August 22