ಅತ್ತ ಕೋರ್ಟ್​ಗೆ ಲೆಟರ್ ಬರೆದ ಸಿಡಿ ಯುವತಿ​, ಇತ್ತ ಎಸ್​ಐಟಿ ವಿಚಾರಣೆಗೆ ಹಾಜರಾದ ಎ1 ರಮೇಶ್​ ಜಾರಕಿಹೊಳಿ

ತಮ್ಮ ಆಪ್ತ, ಮಾಜಿ ಎಂಎಲ್​ಎ ನಾಗರಾಜ್ ಹಾಗೂ ವಕೀಲರ ಜೊತೆ ರಮೇಶ್ ಜಾರಕಿಹೊಳಿ ವಿಚಾರಣೆಗೆ ಆಗಮಿಸಿದ್ದಾರೆ. ಈ ಮಧ್ಯೆ, ಅತ್ತ ಸಿಡಿ ಯುವತಿ ಕೋರ್ಟ್​ಗೆ ಈ ಮೇಲ್​ ಮೂಲಕ ಲೆಟರ್ ಬರೆದು​, ತಾನು ಸಂತ್ರಸ್ತೆಯಾಗಿದ್ದು, ಪ್ರಕರಣವನ್ನು ತಮ್ಮ ನಿಗಾದಲ್ಲಿ ವಿಚಾರಣೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಅತ್ತ ಕೋರ್ಟ್​ಗೆ ಲೆಟರ್ ಬರೆದ ಸಿಡಿ ಯುವತಿ​, ಇತ್ತ ಎಸ್​ಐಟಿ ವಿಚಾರಣೆಗೆ ಹಾಜರಾದ ಎ1 ರಮೇಶ್​ ಜಾರಕಿಹೊಳಿ
ರಮೇಶ್​ ಜಾರಕಿಹೊಳಿ ಎಸ್​ಐಟಿ ವಿಚಾರಣೆಗೆ ಹಾಜರ್​
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Mar 29, 2021 | 10:43 AM

ಬೆಂಗಳೂರು: ವಾರದ ಆರಂಭ ದಿನವಾದ ಸೋಮವಾರ ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ರಮೇಶ್​ ಜಾರಕಿಹೊಳಿ ಲೈಂಗಿಕ ಸಿಡಿ ಹಗರಣದಲ್ಲಿ ನಿರೀಕ್ಷಿತವಾಗಿಯೇ ಬಿರುಸಿನ ಬೆಳವಣಿಗೆಗಳು ಆರಂಭವಾಗಿವೆ. ಪ್ರಮುಖವಾಗಿ ನಿನ್ನೆ ಸಿಡಿ ಯುವತಿ ಕೋರ್ಟ್​ಗೆ ಪತ್ರ ಮುಖೇನ ಮೊರೆಹೋಗಿದ್ದಾಳೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಎಸ್​ಐಟಿ ಪೊಲೀಸರು ಅದೇ ಸಮಯದಲ್ಲಿ ತ್ವರಿತವಾಗಿ ರಮೇಶ್​ ಜಾರಕಿಹೊಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ಪೊಲೀಸರು ಸೂಚಿಸಿದ್ದರು. ಅದರಂತೆ ರಮೇಶ್​ ಜಾರಕಿಹೊಳಿ ಇದೀಗ ವಿಚಾರಣೆಗೆ ಖುದ್ದಾಗಿ ಹಾಜರಾಗಿದ್ದಾರೆ.

ಲೈಂಗಿಕ ಸಿಡಿ ಪ್ರಕರಣದಲ್ಲಿ ಎ1 ಆಗಿರುವ ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ರಮೇಶ್​ ಜಾರಕಿಹೊಳಿ ಅವರು ಇಂದು ಪ್ರಾಂಪ್ಟ್​ ಆಗಿ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಆಡುಗೋಡಿಯಲ್ಲಿರುವ ಎಸ್‌ಐಟಿ ಟೆಕ್ನಿಕಲ್ ವಿಂಗ್ ಎದುರು ವಿಚಾರಣೆಗೆ ಸೋಮವಾರ ಬೆಳಗ್ಗೆ 10ಕ್ಕೆ ಹಾಜರಾಗುವಂತೆ ಬೆಂಗಳೂರಿನ ಕಬ್ಬನ್​ಪಾರ್ಕ್ ಠಾಣೆ ಪೊಲೀಸರು ಜಾರಕಿಹೊಳಿಗೆ ನೋಟಿಸ್ ನೀಡಿದ್ದರು.​

ಅದರಂತೆ ತಮ್ಮ ಆಪ್ತ, ಮಾಜಿ ಎಂಎಲ್​ಎ ನಾಗರಾಜ್ ಹಾಗೂ ವಕೀಲರ ಜೊತೆ ರಮೇಶ್ ಜಾರಕಿಹೊಳಿ ವಿಚಾರಣೆಗೆ ಆಗಮಿಸಿದ್ದಾರೆ. ಈ ಮಧ್ಯೆ, ಅತ್ತ ಸಿಡಿ ಯುವತಿ ಕೋರ್ಟ್​ಗೆ ಈ ಮೇಲ್​ ಮೂಲಕ ಲೆಟರ್ ಬರೆದು​, ತಾನು ಸಂತ್ರಸ್ತೆಯಾಗಿದ್ದು, ಪ್ರಕರಣವನ್ನು ತಮ್ಮ ನಿಗಾದಲ್ಲಿ ವಿಚಾರಣೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನಿರ್ಭಯಾ ಪ್ರಕರಣದ ನಂತರ ಭಾರತೀಯ ದಂಡ ಸಂಹಿತೆ ಕಾನೂನಿಗೆ (ಐಪಿಸಿ) ತಿದ್ದುಪಡಿ ತರಲಾಗಿದ್ದು, ಸಂತ್ರಸ್ತೆಯು ಸಿಆರ್‌ಪಿಸಿ 164 ಅಡಿ ಹೇಳಿಕೆ ಕಡ್ಡಾಯವಾಗಿರುತ್ತದೆ. ಹಾಗಾಗಿ, ಹಾಲಿ ಸಿಡಿ ಪ್ರಕರಣದಲ್ಲಿ ವಕೀಲ ಜಗದೀಶ್ ಅವರು ಸಂತ್ರಸ್ತೆಯನ್ನು ಖುದ್ದಾಗಿ ಹಾಜರುಪಡಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ಯುವತಿ ಕೋರ್ಟ್​ಗೆ ಹಾಜರಾದಲ್ಲಿ ತನಿಖಾಧಿಕಾರಿ ಸಮ್ಮುಖದಲ್ಲಿ ಮ್ಯಾಜಿಸ್ಟ್ರೇಟ್ ಹೇಳಿಕೆ ದಾಖಲು ಮಾಡಿಕೊಳ್ಳುವ ಸಾಧ್ಯತೆಯಿದೆ.

ಆಡುಗೋಡಿ ಎಸ್​ಐಟಿ ಟೆಕ್ನಿಕಲ್ ಸೆಲ್ ಮುಂಭಾಗ ಭದ್ರತೆ ಬಿಗಿ
ಇದೀಗತಾನೆ, ಮಾಜಿ ಸಚಿವರ ಎಂಟ್ರಿ ಬೆನ್ನಲ್ಲೇ ಆಡುಗೋಡಿ ಟೆಕ್ನಿಕಲ್ ಸೆಲ್ ಮುಂಭಾಗ ಭದ್ರತೆ ಹೆಚ್ಚಿಸಲಾಗಿದೆ. ಓರ್ವ ಇನ್ಸ್​ಪೆಕ್ಟರ್ ನೇತೃತ್ವದಲ್ಲಿ ಭದ್ರತಾ ಏರ್ಪಾಟು ಮಾಡಲಾಗಿದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಚಾರಣೆ ಆರಂಭವಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮಾರುತಿ ಅವರಿಂದ ರಮೇಶ್ ಜಾರಕಿಹೊಳಿ ವಿಚಾರಣೆ ನಡೆದಿದೆ. ಕ್ಯಾಮರಾ ಮುಂದೆ ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ತನಿಖಾಧಿಕಾರಿ ದಾಖಲಿಸಿಕೊಳ್ಳಲಿದ್ದಾರೆ. ಎಸ್​ಐಟಿಯ ಹಿರಿಯ ಅಧಿಕಾರಿ, ಸಿಸಿಬಿ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು ಆಡುಗೊಡಿ ಟೆಕ್ನಿಕಲ್ ಸೆಲ್​ನಲ್ಲಿ ಉಪಸ್ಥಿತರಿದ್ದಾರೆ.

ಇದೇ ವೇಳೆ, ಜಾರಕಿಹೊಳಿ ಸಿಡಿ ಕೇಸ್​ನಲ್ಲಿ ಮಾಜಿ ಪತ್ರಕರ್ತ ನರೇಶ್ ಗೌಡ ಪತ್ನಿ ಇಂದು ಬಸವನಗುಡಿಯ ಮಹಿಳಾ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ಮಾಸ್ಟರ್‌ ಮೈಂಡ್ ನರೇಶ್‌ ಪತ್ನಿಗೆ ಕಳೆದ ವಾರವೇ ನೋಟಿಸ್ ನೀಡಲಾಗಿತ್ತು. ಇನ್ನು, ಶ್ರವಣ್ ಸಹೋದರ ಚೇತನ್‌ಗೂ ನೊಟೀಸ್ ನೀಡಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.

Published On - 10:12 am, Mon, 29 March 21

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us