‘ಡಿಕೆಶಿ, ಹೆಬ್ಬಾಳ್ಕರ್, ರಮೇಶ್ ಮಧ್ಯೆ ಜಿದ್ದಾಜಿದ್ದಿ ಇತ್ತು; ಇವರೇ ವಿಡಿಯೋ ಚಿತ್ರೀಕರಿಸಿರಬಹುದೆಂಬ ಅನುಮಾನ ಇದೆ’
ಡಿಕೆಶಿ, ಹೆಬ್ಬಾಳ್ಕರ್, ರಮೇಶ್ ನಡುವೆ ಜಿದ್ದಾಜಿದ್ದಿ ನಡೆದಿತ್ತು. ಹಾಗಾಗಿ, ರಮೇಶ್ ಜಾರಕಿಹೊಳಿ ವಿರುದ್ಧ ದೊಡ್ಡಮಟ್ಟದ ಷಡ್ಯಂತ್ರ ಮಾಡಿದರುವ ಶಂಕೆ ವ್ಯಕ್ತವಾಗಿದೆ. ಇವರೇ ವಿಡಿಯೋ ಚಿತ್ರೀಕರಿಸಿರಬಹುದೆಂಬ ಅನುಮಾನ ಇದೆ. ಇವರ ವಿರುದ್ಧ FIR ದಾಖಲಿಸಿ ತನಿಖೆ ನಡೆಸಬೇಕು ಎಂದು ಕಬ್ಬನ್ಪಾರ್ಕ್ ಠಾಣೆಗೆ ವಕೀಲ ಬ್ರಹ್ಮಾನಂದ ರೆಡ್ಡಿ ದೂರು ನೀಡಿದರು.
ಬೆಂಗಳೂರು: ದಿನೇಶ್ಗೆ ಸಿಡಿ ನೀಡಿದ್ದು ಯಾರೆಂದು ಸರಿಯಾಗಿ ಹೇಳುತ್ತಿಲ್ಲ. ದಿನೇಶ್ ಕಲ್ಲಹಳ್ಳಿ ನಡೆ ಬಗ್ಗೆ ತನಿಖೆಯಾಗಬೇಕೆಂದು ಕಬ್ಬನ್ಪಾರ್ಕ್ ಠಾಣೆಗೆ ವಕೀಲ ಬ್ರಹ್ಮಾನಂದ ರೆಡ್ಡಿ ಎಂಬುವವರು ದೂರು ಸಲ್ಲಿಸಿದರು. ತುಮಕೂರಿನಿಂದ ಬೆಂಗಳೂರಿಗೆ ಆಗಮಿಸಿದ ವಕೀಲ ರೆಡ್ಡಿ ದೂರು ಸಲ್ಲಿಸಿದರು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಕೀಲ ದೂರು ಸಲ್ಲಿಸಿದರು. ನಾಲ್ವರ ವಿರುದ್ಧ FIR ದಾಖಲಿಸಿ ತನಿಖೆಗೆ ಒತ್ತಾಯ ಸಹ ಮಾಡಿದರು.
ಬಳಿಕ ಮಾತನಾಡಿದ ವಕೀಲ ಬ್ರಹ್ಮಾನಂದ ರೆಡ್ಡಿ ವಿಚಾರಣೆ ವೇಳೆ ದಿನೇಶ್ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಸಂತ್ರಸ್ತೆ ದುಬೈನಲ್ಲಿ ಇದ್ದಾರೆಂದು ಮಾಹಿತಿ ಹೇಳಲಾಗುತ್ತಿದೆ. ಸಂತ್ರಸ್ತೆ ಬದುಕಿದ್ದಾಳಾ ಅಥವಾ ಇಲ್ಲವಾ ಎಂದು ಗೊತ್ತಾಗ್ತಿಲ್ಲ. ಆಕೆ ಬಗ್ಗೆ ತನಿಖೆ ಮಾಡಬೇಕು, ವಿಚಾರಣೆಗೆ ಒಳಪಡಿಸಬೇಕು. ಈ ವಿಡಿಯೋ ಹಿಂದಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
‘HDK, ಡಿಕೆಶಿ, ಹೆಬ್ಬಾಳ್ಕರ್, ದಿನೇಶ್ ವಿಚಾರಣೆ ನಡೆಸಬೇಕು’ ಸಂತ್ರಸ್ತೆ, ರಮೇಶ್ ಜಾರಕಿಹೊಳಿಗೆ ವೈದ್ಯಕೀಯ ಪರೀಕ್ಷೆ ನಡೆಸಬೇಕು. ಸಿಡಿ ನೈಜತೆ ಬಗ್ಗೆ ತಿಳಿಯಲು ಲ್ಯಾಬ್ಗೆ ಕಳುಹಿಸಬೇಕು. ಲ್ಯಾಬ್ ವರದಿ ಬಂದ ನಂತರ ಕಾನೂನು ಕ್ರಮಕೈಗೊಳ್ಳಬೇಕು. ಸಿಡಿ ವಿಚಾರದಲ್ಲಿ 5 ಕೋಟಿ ಡೀಲ್ ಆಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದರು. ಎಲ್ಲ ಮಾಹಿತಿ ಪೊಲೀಸರಿಗೆ ತಿಳಿಸದಿದ್ದರಿಂದ FIR ದಾಖಲಿಸಿ. HDK, ಡಿಕೆಶಿ, ಹೆಬ್ಬಾಳ್ಕರ್, ದಿನೇಶ್ ವಿಚಾರಣೆ ನಡೆಸಬೇಕು ಎಂದು ವಕೀಲ ಒತ್ತಾಯಿಸಿದರು.
ಡಿಕೆಶಿ, ಹೆಬ್ಬಾಳ್ಕರ್, ರಮೇಶ್ ನಡುವೆ ಜಿದ್ದಾಜಿದ್ದಿ ನಡೆದಿತ್ತು. ಹಾಗಾಗಿ, ರಮೇಶ್ ಜಾರಕಿಹೊಳಿ ವಿರುದ್ಧ ದೊಡ್ಡಮಟ್ಟದ ಷಡ್ಯಂತ್ರ ಮಾಡಿದರುವ ಶಂಕೆ ವ್ಯಕ್ತವಾಗಿದೆ. ಇವರೇ ವಿಡಿಯೋ ಚಿತ್ರೀಕರಿಸಿರಬಹುದೆಂಬ ಅನುಮಾನ ಇದೆ. ಇವರ ವಿರುದ್ಧ FIR ದಾಖಲಿಸಿ ತನಿಖೆ ನಡೆಸಬೇಕು ಎಂದು ಕಬ್ಬನ್ಪಾರ್ಕ್ ಠಾಣೆಗೆ ವಕೀಲ ಬ್ರಹ್ಮಾನಂದ ರೆಡ್ಡಿ ದೂರು ನೀಡಿದರು.
‘ಇದು ಸಮ್ಮತಿ ಸೆಕ್ಸ್ ಅನ್ನೋದು ಖಚಿತವಾಗಬೇಕು’ ಇತ್ತ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ನಕಲಿಯೋ, ಅಸಲಿಯೋ ಎಂದು ಗೊತ್ತಾಗಬೇಕು. ಅಥವಾ ಇದು ಸಮ್ಮತಿ ಸೆಕ್ಸ್ ಅನ್ನೋದು ಖಚಿತವಾಗಬೇಕು ಎಂದು ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು. ಕೇಸ್ ಹಿಂಪಡೆಯಲು ದಿನೇಶ್ ಹಲವು ಕಾರಣ ನೀಡಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಬೆನ್ನಲ್ಲೇ ದೂರು ವಾಪಸ್ ಪಡೆಯಲು ನಿರ್ಧಾರ ಕೈಗೊಂಡಿದ್ದಾರೆ. ರಮೇಶ್ ವಿರುದ್ಧ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ ಅಂತಾ ಮಹೇಶ್ ಕುಮಟಳ್ಳಿ ಹೇಳಿದರು.
ಇದು ಭಾರತೀಯ ಜನತಾ ಪಕ್ಷಕ್ಕೆ ಮುಜುಗರ ತರುವ ಕೆಲಸ. ರಮೇಶ್ ಹೊರಬಂದು ಜನ ಸೇವೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ಮಹೇಶ್ ಕುಮಟಳ್ಳಿ ಒತ್ತಾಯಿಸಿದರು.
ಇದನ್ನೂ ಓದಿ: ಮಾಲೂರಿನಲ್ಲಿ ‘ಸಲಗ ಕಪ್’ ಹವಾ: ಅಭಿಮಾನಿಗಳೊಟ್ಟಿಗೆ ಕ್ರಿಕೆಟ್ ಆಡಿದ ದುನಿಯಾ ವಿಜಿ!
Published On - 7:19 pm, Sun, 7 March 21