ಲ್ಯಾಬ್​ನಲ್ಲಿ ಟೆಸ್ಟ್ ಆದರೆ ವಿಡಿಯೋದ ಸತ್ಯಾಸತ್ಯತೆ ತಿಳಿಯಲಿದೆ; ಬಾಲಚಂದ್ರ ಜಾರಕಿಹೊಳಿ

Ramesh Jarkiholi CD Controversy: ‘ದಿನೇಶ್ ಕಲ್ಲಹಳ್ಳಿ ಬಗ್ಗೆ ಸಾಫ್ಟ್​ ಕಾರ್ನರ್​ನಿಂದ ಮಾತಾಡ್ತಿಲ್ಲ. ಜನರಿಗೆ ತೊಂದರೆ ಆಗಬಾರದು ಅಂತ ಗೋಕಾಕ ಭಾಗದಲ್ಲಿ ಹೋರಾಟ ನಿಲ್ಲಿಸಲು ಮನವಿ ಮಾಡಿದ್ದೇನೆ ಅಷ್ಟೇ.‘ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಲ್ಯಾಬ್​ನಲ್ಲಿ ಟೆಸ್ಟ್ ಆದರೆ ವಿಡಿಯೋದ ಸತ್ಯಾಸತ್ಯತೆ ತಿಳಿಯಲಿದೆ; ಬಾಲಚಂದ್ರ ಜಾರಕಿಹೊಳಿ
ದಿನೇಶ್ ಕಲ್ಲಹಳ್ಳಿ (ಎಡ), ಬಾಲಚಂದ್ರ ಜಾರಕಿಹೊಳಿ
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 07, 2021 | 5:46 PM

ಬೆಂಗಳೂರು: ‘ಇದು ಫೇಕ್ ವಿಡಿಯೊ, ಲ್ಯಾಬ್​ನಲ್ಲಿ ಟೆಸ್ಟ್ ಆದ್ರೆ ನಿಜ ಏನು ಅಂತ ಗೊತ್ತಾಗುತ್ತದೆ. ಒಂದು ವಾರ ಅಥವಾ ಹತ್ತು ದಿನಗಳಲ್ಲಿ ವಿಡಿಯೋ ನಿಜವೋ ಅಲ್ಲವೋ ಎಂಬುದು ತಿಳಿಯಲಿದೆ. ₹ 15  ಕೋಟಿ ಖರ್ಚು ಮಾಡಿ ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ತೆಗೆಯಬೇಕು ಎಂಬ ಒಂದೇ ಉದ್ದೇಶಕ್ಕೆ ಹೀಗೆ ಮಾಡಿದ್ದಾರೆ. ಈ ಕುರಿತು ತನಿಖೆ ಆಗಬೇಕು ಎಂಬುದು ನಾನು ಪ್ರಬಲವಾಗಿ ಒತ್ತಾಯಿಸುತ್ತೇನೆ. ದಯವಿಟ್ಟು ಆ ಮಹಿಳೆಯನ್ನು ಸಂತ್ರಸ್ತ ಮಹಿಳೆ ಎನ್ನಬೇಡಿ. ರಷ್ಯಾದಲ್ಲಿ ಸರ್ವರ್ ಬುಕ್ ಮಾಡಿ ಯೂಟ್ಯೂಬ್​ನಲ್ಲಿ ನಕಲಿ ಸಿಡಿ ಬಿಡುಗಡೆ ಮಾಡಲಾಗಿತ್ತು. ದಿನೇಶ್ ಕಲ್ಲಹಳ್ಳಿಯೂ ಇದರಲ್ಲಿ ಮಿಸ್​ಗೈಡ್ ಆಗಿರಬಹುದು. ಅವರಿಗೆ ಸಂಪೂರ್ಣ ಮಾಹಿತಿ ಕೊಡದೇ ದಾರಿತಪ್ಪಿಸಿದ್ದಾರೆ ಆಂತ ನನಗೆ ಅನ್ನಿಸುತ್ತೆ. ದಿನೇಶ್ ಕಲ್ಲಹಳ್ಳಿಯನ್ನು ನಮ್ಮ ಮೇಲೆ ಕಣ್ಣಿಟ್ಟಿರುವ ಹಲವರು ತಮ್ಮ ಉದ್ದೇಶಕ್ಕೆ ಬಳಸಿಕೊಂಡಿರಬಹುದು’ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಕುಮಾರಸ್ವಾಮಿ ಹೇಳಿದಂತೆ ಈ ಪ್ರಕರಣ ಮುಚ್ಚಿಹಾಕಲು ಪ್ರಕರಣವೇ ದಾಖಲಾಗಿಲ್ಲ. ಮಹಿಳೆ ಪೊಲೀಸರ ಮುಂದೆ ಬಂದಿಲ್ಲ. ಹೀಗಾಗಿ ಪ್ರಕರಣವೇ ನಿಂತಿರಲಿಲ್ಲ, ಇನ್ನು ಮುಚ್ಚಿ ಹೋಗುವುದು ಎಲ್ಲಿಂದ ಎಂದು ಬಾಲಚಂದ್ರ ಜಾರಕಿಹೊಳಿ ವಾದಿಸಿದರು.

ದಿನೇಶ್ ಕಲ್ಲಹಳ್ಳಿ ಬಗ್ಗೆ ಸಾಫ್ಟ್​ ಕಾರ್ನರ್​ ಇಲ್ಲ ‘ದಿನೇಶ್ ಕಲ್ಲಹಳ್ಳಿ ಬಗ್ಗೆ ಸಾಫ್ಟ್​ ಕಾರ್ನರ್​ನಿಂದ ಮಾತಾಡ್ತಿಲ್ಲ. ಜನರಿಗೆ ತೊಂದರೆ ಆಗಬಾರದು ಅಂತ ಗೋಕಾಕ ಭಾಗದಲ್ಲಿ ಹೋರಾಟ ನಿಲ್ಲಿಸಲು ಮನವಿ ಮಾಡಿದ್ದೇನೆ ಅಷ್ಟೇ. ಇವತ್ತು ನಾನೇ ರಮೇಶ್​ ಜಾರಕಿಹೊಳಿಯನ್ನು ಭೇಟಿ ಮಾಡ್ತೀನಿ. ಧೈರ್ಯವಾಗಿ ಹೊರಗೆ ಬರಲು ಮನವೊಲಿಸ್ತೀನಿ. ದಿನೇಶ್ ಕಲ್ಲಹಳ್ಳಿ ವಿರುದ್ಧ ಕಾನೂನು ಹೋರಾಟ ನಡೆಸುವ ಬಗ್ಗೆ ನಂತರ ಯೋಚಿಸ್ತೀವಿ. ಲಾಯರ್ ಜೊತೆಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತಗೊಳ್ತೀವಿ ಎಂದು ಬಾಲಚಂದ್ರ ಜಾರಕಿಹೊಳಿ ಮುಂದಿನ ತಮ್ಮ ನಡೆಗಳ ಬಗ್ಗೆ ಸುಳಿವು ನೀಡಿದರು.

ಮಹಿಳೆಗೆ ‘ನೀನು ಹೆದರಬೇಡ, ನಿನಗೆ ₹ 50 ಲಕ್ಷ ಹಣ, ದುಬೈನಲ್ಲಿ ಕೆಲಸ ಕೊಡಿಸ್ತೀವಿ’ ಅಂತ ಭರವಸೆ ಕೊಟ್ಟು ಈ ಕೆಲಸ ಮಾಡಿಸಿದ್ದಾರೆ ಆಂತ ನಮ್ಮ ಸೋರ್ಸ್​ ಹೇಳುತ್ತದೆ. ನಾಳೆ ಒಂದು ದಿನ ಬಿಟ್ಟು ನಮ್ಮ ಸೋರ್ಸ್​ ಮೂಲಕ ನಾವು ಕೆಲಸ ಮಾಡ್ತೀವಿ. ಮರ್ಯಾದೆ ಗೌರವ ಹೋದರೆ ಕಷ್ಟವಾಗುತ್ತೆ. ನಾವೂ ಈ ಕೇಸ್​ ಫಾಲೊ ಮಾಡ್ತೀವಿ. ನಮ್ಮ ಸೋರ್ಸ್ ಮೂಲಕ ಕೆಲಸ ಮಾಡುತ್ತೇವೆ. ಇದು ಹನಿಟ್ರ್ಯಾಪ್ ಆಗಿದೆ. ಪ್ರಶ್ನೆಗಳನ್ನು ಯಾರೋ ಬರೆದುಕೊಟ್ಟಿದ್ದಾರೆ. ಅದನ್ನು ಆಕೆ ಕೇಳಿದ್ದಾಳೆ. ಐದು ರಾಜ್ಯಗಳಲ್ಲಿ ಚುನಾವಣೆ ನಡೀತಿದೆ. ನಮ್ಮ ಪಕ್ಷಕ್ಕೆ ಕೆಟ್ಟ ಹೆಸರು ತರಲು ಈ ಕೆಲಸ ಮಾಡಿದ್ದಾರೆ’ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: Ramesh Jarkiholi CD Controversy: ರಮೇಶ್ ಜಾರಕಿಹೊಳಿ ವಿರುದ್ಧದ ದೂರು ಹಿಂಪಡೆಯಲು ದಿನೇಶ್ ಕಲ್ಲಹಳ್ಳಿ ನಿರ್ಧಾರ

ರಾಜಕೀಯ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ ಮುಂದಿರುವ ಮೂರು ಆಯ್ಕೆಗಳು

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ