ಸಿಡಿ ಪ್ರಕರಣ: ಸೂತ್ರಧಾರಿಗಳ ಹೆಸರು ಬಹಿರಂಗವಾಗುವ ಸಾಧ್ಯತೆ, ನಾಳೆ ಪ್ರತ್ಯಕ್ಷವಾಗಲಿದ್ದಾರಾ ಯುವತಿ ಪೋಷಕರು?

| Updated By: ಸಾಧು ಶ್ರೀನಾಥ್​

Updated on: Mar 19, 2021 | 5:11 PM

ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ಹಣೆಪಟ್ಟಿ ಹೊತ್ತಿರುವ ನರೇಶ್, ಭವಿತ್ ಹೇಳಿಕೆಗೆ ಪ್ರತ್ಯುತ್ತರವಾಗಿ ಯುವತಿ ಪೋಷಕರು ಯಾವುದಾದರೂ ಮಹತ್ವದ ಮಾಹಿತಿ ಹೊರಹಾಕುವ ಸಾಧ್ಯತೆ ಇದ್ದು, ದಾಖಲೆ ಸಮೇತವಾಗಿ ರಾಜಕೀಯ ನಾಯಕರ ಹೆಸರು ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗುತ್ತಿದೆ.

ಸಿಡಿ ಪ್ರಕರಣ: ಸೂತ್ರಧಾರಿಗಳ ಹೆಸರು ಬಹಿರಂಗವಾಗುವ ಸಾಧ್ಯತೆ, ನಾಳೆ ಪ್ರತ್ಯಕ್ಷವಾಗಲಿದ್ದಾರಾ ಯುವತಿ ಪೋಷಕರು?
ಸಿಡಿಯಲ್ಲಿದ್ದ ಯುವತಿ ಮತ್ತು ಆಕೆಯ ಪೋಷಕರು
Follow us on

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿ ಬಿಡುಗಡೆ ಹಿಂದೆ ‘ಮಹಾನಾಯಕ’ನ ಕೈವಾಡ ಇದೆ ಎಂಬ ಹೇಳಿಕೆ ಹೊರಬಿದ್ದ ನಂತರವಂತೂ ರಾಜ್ಯ ರಾಜಕಾರಣದಲ್ಲಿ ಅನುಮಾನದ ಗಾಳಿ ಮೂರು ಪಕ್ಷಗಳನ್ನೂ ಅಲುಗಾಡಿಸಿದೆ. ಸದ್ಯ ಎಸ್​ಐಟಿ ಅಧಿಕಾರಿಗಳೂ ಈ ವಿಚಾರವಾಗಿ ತನಿಖೆಯನ್ನು ಚುರುಕುಗೊಳಿಸಿರುವ ಕಾರಣ ಅತೀ ಶೀಘ್ರದಲ್ಲೇ ಸಿಡಿ ಹಿಂದಿನ ಹೆಸರುಗಳು ಹೊರಬೀಳುವ ಸಾಧ್ಯತೆ ಇದೆ. ಯುವತಿಯೊಂದಿಗೆ ಸಂಪರ್ಕದಲ್ಲಿದ್ದವರ ಹೆಸರು ಬಹಿರಂಗವಾಗುವ ಕಾಲ ಸನ್ನಿಹಿತವಾಗಿದೆ ಎನ್ನಲಾಗುತ್ತಿದ್ದು, ಯುವತಿ ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿ ಮೂರು ದಿನ ಕಳೆದರೂ ತನಿಖೆಯಲ್ಲಿ ಯಾವುದೇ ಬೆಳವಣಿಗೆ ಕಂಡುಬರದ ಕಾರಣ ಇಂದು ಸಂಜೆಯ ತನಕ ಕಾದು ನಾಳೆಯಷ್ಟರಲ್ಲಿ ಯುವತಿ ಪೋಷಕರು ಹೊಸ ಮಾರ್ಗ ಅನುಸರಿಸುವ ಸಾಧ್ಯತೆ ಇದೆ.

ಯುವತಿಯ ಬಗ್ಗೆ ಯಾವುದೇ ಸುಳಿವು ಸಿಗದಿದ್ದರೆ, ಆಕೆಯ ಪೋಷಕರು ದಿಢೀರನೆ ಪ್ರತ್ಯಕ್ಷವಾಗಿ ದಾಖಲೆ ಸಮೇತ ನಾಯಕರ ಹೆಸರು ಬಿಡುಗಡೆ ಮಾಡಬಹುದು ಎಂಬ ಊಹೆ ವ್ಯಕ್ತವಾಗುತ್ತಿದೆ. ಪ್ರಕರಣ ವರ್ಗಾವಣೆ ಆಗಿದ್ದರೂ ಯುವತಿ ಬಗ್ಗೆ ಮಾಹಿತಿ ಮಾತ್ರ ಸಿಗುತ್ತಿಲ್ಲವಾದ್ದರಿಂದ ಯುವತಿ ಪೋಷಕರು ಆಕೆಯ ಸಂಪರ್ಕದಲ್ಲಿದ್ದ ಕೆಲ ರಾಜಕೀಯ ನಾಯಕರು ಹಾಗೂ ಸಿಡಿ ಜಾಲದಲ್ಲಿ ಸಿಲುಕಿರುವವರ ಹೆಸರನ್ನು ಬಹಿರಂಗ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂದುವೇಳೆ ಹೇಳಿಕೆ ನೀಡದಿದ್ದರೂ ನಾಳೆ ಇನ್ನೊಂದು ದೂರು ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ಹಣೆಪಟ್ಟಿ ಹೊತ್ತಿರುವ ನರೇಶ್, ಭವಿತ್ ಹೇಳಿಕೆಗೆ ಪ್ರತ್ಯುತ್ತರವಾಗಿ ಯುವತಿ ಪೋಷಕರು ಯಾವುದಾದರೂ ಮಹತ್ವದ ಮಾಹಿತಿ ಹೊರಹಾಕುವ ಸಾಧ್ಯತೆ ಇದ್ದು, ದಾಖಲೆ ಸಮೇತವಾಗಿ ರಾಜಕೀಯ ನಾಯಕರ ಹೆಸರು ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಇಂದು ರಾತ್ರಿಯ ತನಕ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಬೆಳವಣಿಗೆ ಆಗದಿದ್ದಲ್ಲಿ, ದೂರು ಕೊಟ್ಟ ಬಳಿಕ ನಾಪತ್ತೆಯಾಗಿರುವ ಯುವತಿ ಪೋಷಕರು ನಾಳೆ ಬೆಳಗ್ಗೆ ಏಕಾಏಕಿ ಪ್ರತ್ಯಕ್ಷರಾಗಿ ಪ್ರಕರಣಕ್ಕೆ ಹೊಸ ತಿರುವು ನೀಡಿದರೂ ಅಚ್ಚರಿಯಿಲ್ಲ ಎನ್ನುವ ಚರ್ಚೆ ಸದ್ಯ ಕಾವು ಪಡೆದುಕೊಂಡಿದೆ.

ಇದನ್ನೂ ಓದಿ:
ಸಿಡಿ ಬಗ್ಗೆ ಮೊದ್ಲೇ ಗೊತ್ತಿತ್ತು, 5 ಕೋಟಿ ರೂ ವ್ಯವಹಾರ ಆಗಿದೆ ಎಂದಿದ್ದ ಹೆಚ್​​ಡಿಕೆ- ರಮೇಶ್ ಜಾರಕಿಹೊಳಿ ವಿರುದ್ಧ ಎಸಿಬಿಗೆ ದೂರು 

ಗೃಹ ಸಚಿವರಿಗೆ ಸಿಡಿ ಕೊಟ್ಟಿದ್ದೆ ಎಂದ ರೇವಣ್ಣ | ಅದ್ಯಾವ್​ ಸಿಡಿ ರೀ ಹೊಸದು ಎಂದ ಸ್ಪೀಕರ್ ಕಾಗೇರಿ