ಇಷ್ಟು ದಿನ ನಿಮಗೆ ಹಣಕಾಸಿನ ನೆರವು ಕೊಟ್ಟಿದ್ಯಾರು? ಸಿಡಿ ಸಂತ್ರಸ್ತೆಗೆ ಎಸ್ಐಟಿ ಅಧಿಕಾರಿಗಳ ನೇರ ಪ್ರಶ್ನೆ
ಹಣಕಾಸಿನ ವಿಚಾರದ ಬಗ್ಗೆ ಕೆದಕಿರುವ ಎಸ್ಐಟಿ ಅಧಿಕಾರಿಗಳು, ಇಷ್ಟು ದಿನಗಳ ಕಾಲ ಹಣಕಾಸಿನ ನೆರವನ್ನು ಯಾರು ನೋಡಿಕೊಂಡರು? ಬೆಂಗಳೂರಿನಿಂದ ಹೊರಟ ಬಳಿಕ ಬೇರೆ ಬೇರೆ ಕಡೆಗಳಲ್ಲಿ ಉಳಿದುಕೊಳ್ಳಲು ಯಾರು ಸಹಾಯ ಮಾಡಿದರು? ಅಷ್ಟು ದಿನ ಅಜ್ಙಾತ ಸ್ಥಳದಲ್ಲಿ ಉಳಿದುಕೊಂಡಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಒಳಪಟ್ಟಿರುವ ಸಂತ್ರಸ್ತ ಯುವತಿಗೆ ಎಸ್ಐಟಿ ಅಧಿಕಾರಿಗಳು ಕೆಲ ನೇರ ಪ್ರಶ್ನೆಗಳನ್ನಿಟ್ಟು ಉತ್ತರ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಆಡುಗೋಡಿ ಟೆಕ್ನಿಕಲ್ ಸೆಲ್ನಲ್ಲಿ ಸಂತ್ರಸ್ತೆಯ ವಿಚಾರಣೆ ನಡೆಯುತ್ತಿದ್ದು, ಆಕೆಗೆ ಹಣಕಾಸಿನ ನೆರವು ನೀಡಿದ್ದು ಯಾರು? ಯಾರ ಬೆಂಬಲವಿತ್ತು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸದ್ಯ ಎಸ್ಐಟಿ ಅಧಿಕಾರಿಗಳ ನಿರಂತರ ಪ್ರಶ್ನಾವಳಿಗಳಿಂದ ಯುವತಿ ಸಂಪೂರ್ಣ ಕುಗ್ಗಿ ಹೋಗಿದ್ದಾರೆ ಎನ್ನಲಾಗುತ್ತಿದೆ.
ಸಂತ್ರಸ್ತ ಯುವತಿಗೆ ನೇರಾನೇರವಾಗಿ ಪ್ರಶ್ನೆಗಳನ್ನಿಟ್ಟಿರುವ ಎಸ್ಐಟಿ ಅಧಿಕಾರಿಗಳು ನೀವು ಕಿಡ್ನಾಪ್ ಆಗಿದ್ರಾ? ನಿಮ್ಮನ್ನು ಕಿಡ್ನಾಪ್ ಮಾಡಲಾಗಿತ್ತಾ? ಯಾರಾದ್ರು ನಿಮ್ಮನ್ನು ಬಂಧನದಲ್ಲಿ ಇರಿಸಿದ್ರಾ? ಒತ್ತಡ ಹಾಕಿ ನಿಮಗೇನಾದ್ರು ವಿಡಿಯೋ ಮಾಡಿಸಿದ್ರಾ? ಬೆಂಗಳೂರು ಬಿಟ್ಟ ನಂತರ ನೀವು ಎಲ್ಲಿಗೆ ಹೋಗಿದ್ರಿ? ನಿಮ್ಮನ್ನು ಇಲ್ಲಿಂದ ಕರೆದುಕೊಂಡು ಹೋದವರು ಯಾರು? ನಿಮ್ಮ ಜೊತೆಯಲ್ಲಿ ಯಾರಿದ್ರು? ಎಂಬೆಲ್ಲಾ ಪ್ರಶ್ನೆಗಳನ್ನು ಆಕೆಯ ಮುಂದಿಟ್ಟು ಸತ್ಯಾಂಶ ಹೊರಗೆಳೆಯುವ ಪ್ರಯತ್ನ ಮಾಡಿದ್ದಾರೆ.
ಎಸ್ಐಟಿ ಪೊಲೀಸರಿಂದ ಯುವತಿಗೆ ಪ್ರಶ್ನೆಗಳೋ ಪ್ರಶ್ನೆಗಳು.. ಎಲ್ಲಕ್ಕೂ ಮಿಗಿಲಾಗಿ ಹಣಕಾಸಿನ ವಿಚಾರದ ಬಗ್ಗೆ ಕೆದಕಿರುವ ಎಸ್ಐಟಿ ಅಧಿಕಾರಿಗಳು, ಇಷ್ಟು ದಿನಗಳ ಕಾಲ ಹಣಕಾಸಿನ ನೆರವನ್ನು ಯಾರು ನೋಡಿಕೊಂಡರು? ಬೆಂಗಳೂರಿನಿಂದ ಹೊರಟ ಬಳಿಕ ಬೇರೆ ಬೇರೆ ಕಡೆಗಳಲ್ಲಿ ಉಳಿದುಕೊಳ್ಳಲು ಯಾರು ಸಹಾಯ ಮಾಡಿದರು? ಅಷ್ಟು ದಿನ ಅಜ್ಙಾತ ಸ್ಥಳದಲ್ಲಿ ಉಳಿದುಕೊಂಡಿದ್ದೇಕೆ? ಇಷ್ಟು ದಿನ ಯಾಕೆ ನೀವು ಎಲ್ಲಿಯೂ ಕಾಣಿಸಿಕೊಂಡಿಲ್ಲವೇಕೆ? ಕೋರ್ಟ್ ಹಾಲ್ ಬಳಿ 164 ಹೇಳಿಕೆ ದಾಖಲು ಮಾಡಿದ್ದ ದಿನ ಕರೆತಂದವರು ಯಾರು? ಎನ್ನುವುದನ್ನೂ ಕೇಳಿದ್ದಾರೆ.
ನಿಮ್ಮ ಪೋಷಕರೇ ನಮ್ಮ ಮಗಳನ್ನು ಕಿಡ್ನಾಪ್ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ಅಸಲಿ ಸಂಗತಿ ಏನು? ಒತ್ತಡಕ್ಕೆ ಒಳಗಾಗದೇ ಏನಾಗಿದೆ ಅನ್ನೋ ನಿಜ ಸಂಗತಿ ಹೇಳಿ. ನೀವು ಕೇವಲ ವಿಡಿಯೋ ಮಾತ್ರ ರೆಕಾರ್ಡ್ ಮಾಡ್ತಾ ಇದ್ರಿ. ಹಾಗಾದರೆ, ರೆಕಾರ್ಡ್ ಮಾಡ್ತಾ ಇದ್ದಿದ್ದು ಯಾರು? ನೀವೀಗ ದೆಹಲಿಯಿಂದ ಬಂದಿರೋದಾಗಿ ಮಾಹಿತಿ ಇದೆ. ದೆಹಲಿಗೆ ಹೋಗಿದ್ದೇಕೆ? ಸಿಡಿ ಬಿಡುಗಡೆ ಬಳಿಕ ಎಲ್ಲೆಲ್ಲಿ ಸುತ್ತಾಡಿದ್ರಿ? ನಿಮ್ಮ ಜೊತೆಯಲ್ಲಿ ಇದ್ದವರು ಯಾರು? ಎಂಬ ಸರಣಿ ಪ್ರಶ್ನೆಗಳನ್ನೂ ಯುವತಿಯ ಎದುರು ಇಟ್ಟಿದ್ದಾರೆ.
ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ ಈ ಪ್ರಶ್ನೆಗಳಿಗೆ ಉತ್ತರಿಸಿರುವ ಯುವತಿ, ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ, ನಾನಾಗಿಯೇ ಹೋಗಿದ್ದು ಎಂದು ಹೇಳಿದ್ದಾರೆ ಎನ್ನಲಾಗಿದೆ. ಸಿಡಿ ಬಿಡುಗಡೆಯಿಂದ ಮನಸ್ಸಿಗೆ ತುಂಬಾನೇ ನೋವಾಯ್ತು. ಆದ ಕಾರಣ ಯಾರ ಕಣ್ಣಿಗೂ ಬಿದ್ದಿಲ್ಲ. ನನ್ನ ಮೇಲೆಯೇ ಆರೋಪ ಬಂದ ಕಾರಣಕ್ಕೆ ನಾನು ವಿಡಿಯೋ ಮಾಡಬೇಕಾಯ್ತು ಎಂದು ತನಿಖಾಧಿಕಾರಿಗಳ ಪ್ರಶ್ನೆಗೆ ಸಂತ್ರಸ್ತ ಯುವತಿ ಉತ್ತರಿಸಿದ್ದಾಗಿ ತಿಳಿದುಬಂದಿದೆ. ಆದರೆ, ಯುವತಿಯಲ್ಲಿ ಮೊದಲ ದಿನ ಇದ್ದ ಬೋಲ್ಡ್ನೆಸ್ ಈಗ ಕಡಿಮಾಯಾಗಿದ್ದು, ನಿರಂತರ ವಿಚಾರಣೆಯಿಂದ ಕುಗ್ಗಿ ಹೋಗಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಪ್ರಕರಣ: ರಾಜ್ಯ ಕಾಂಗ್ರೆಸ್ ಒಂದು ‘ಕುಡುಕರ ಬಾರ್’ ಇದ್ದಂತೆ
ಪೂರ್ವಯೋಜಿತ ರಾಜಕೀಯ ಷಡ್ಯಂತ್ರ ಎಂದು ನಿರೂಪಿಸಲು ಬಲವಾದ ಸಾಕ್ಷ್ಯದ ಬೇಟೆಯಲ್ಲಿ ರಮೇಶ್ ಜಾರಕಿಹೊಳಿ?