Ramesh Jarkiholi Press Meet: ನಾನು ಅಪರಾಧಿಯಲ್ಲ, ಇಂತಹವು 10 ಬಂದರೂ ನಾನು ಎದುರಿಸಲು ಸಿದ್ಧ -ರಮೇಶ್ ಜಾರಕಿಹೊಳಿ

| Updated By: Digi Tech Desk

Updated on: Mar 09, 2021 | 10:31 AM

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ 'ನನ್ನ ಪರವಾಗಿ ನಿಂತ ಎಲ್ಲರಿಗೂ ಹೃದಯಪೂರ್ವಕ ವಂದನೆ. ನನಗೆ ಮಾನಸಿಕವಾಗಿ ಧೈರ್ಯ ತುಂಬಿದ ಸಿಎಂ ಬಿಎಸ್‌ ಯಡಿಯೂರಪ್ಪ, ಮಾಜಿ ಸಿಎಂ ಕುಮಾರಸ್ವಾಮಿಗೆ ನನ್ನ ವಂದನೆಗಳು. ನೂರಕ್ಕೆ ನೂರರಷ್ಟು ಈ CD ನಕಲಿ. ನಾನು ನಿರಪರಾಧಿ, ಅಪರಾಧಿಯಲ್ಲ' ಎಂದು ಖಡಕ್ ಆಗಿ ತಿಳಿಸಿದ್ದಾರೆ.

Ramesh Jarkiholi Press Meet: ನಾನು ಅಪರಾಧಿಯಲ್ಲ, ಇಂತಹವು 10 ಬಂದರೂ ನಾನು ಎದುರಿಸಲು ಸಿದ್ಧ -ರಮೇಶ್ ಜಾರಕಿಹೊಳಿ
ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ
Follow us on

ಬೆಂಗಳೂರು: ಸಿಡಿ ಹೊರಬಂದ ದಿನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಬಳಿಕ ನಾಪತ್ತೆಯಾಗಿದ್ದ ರಮೇಶ್ ಜಾರಕಿಹೊಳಿ ಇಂದು ಬೆಂಗಳೂರಿನ ತಮ್ಮ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಮೇಶ್ ಜಾರಕಿಹೊಳಿ ನಡೆಸುತ್ತಿರುವ ಮೊದಲ ಸುದ್ದಿಗೋಷ್ಠಿ ಇದಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ‘ನನ್ನ ಪರವಾಗಿ ನಿಂತ ಎಲ್ಲರಿಗೂ ಹೃದಯಪೂರ್ವಕ ವಂದನೆ. ನನಗೆ ಮಾನಸಿಕವಾಗಿ ಧೈರ್ಯ ತುಂಬಿದ ಸಿಎಂ ಬಿಎಸ್‌ ಯಡಿಯೂರಪ್ಪ, ಮಾಜಿ ಸಿಎಂ ಕುಮಾರಸ್ವಾಮಿಗೆ ನನ್ನ ವಂದನೆಗಳು. ನೂರಕ್ಕೆ ನೂರರಷ್ಟು ಈ CD ನಕಲಿ. ನಾನು ನಿರಪರಾಧಿ, ಅಪರಾಧಿಯಲ್ಲ’ ಎಂದು ಖಡಕ್ ಆಗಿ ತಿಳಿಸಿದ್ದಾರೆ.

ಈ CD ಬಗ್ಗೆ ನಾಲ್ಕು ತಿಂಗಳ ಮೊದಲೇ ಗೊತ್ತಿತ್ತು. 26 ಗಂಟೆ ಮೊದಲೇ ಹೈಕಮಾಂಡ್ ನನಗೆ CD ಬಿಡುಗಡೆ ಬಗ್ಗೆ ನನಗೆ ಮಾಹಿತಿ ನೀಡಿದ್ದರು. ನಾನು ಧೈರ್ಯದಿಂದ ಕಾನೂನು ಹೋರಾಟಕ್ಕೆ ಹೋಗಲಿಲ್ಲ. ಯಾವುದಕ್ಕೂ ಹೆದರದೆ ಸಭೆ ಮುಗಿಸಿ ಮನೆಗೆ ಬಂದಿದ್ದೆ. ನನಗೆ ಭಯ ಇದ್ದಿದ್ದರೆ ದೇವರ ದರ್ಶನಕ್ಕೆ ಹೋಗುತ್ತಿರಲಿಲ್ಲ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿ ದರ್ಶನ ಪಡೆದಿದ್ದೆ. ಅಂದು ವಚನಾನಂದಶ್ರೀ ಜತೆಯೂ ಮಾತುಕತೆ ನಡೆಸಿದ್ದೆ. ‘ನಾನು ಬಹಳ ದುಃಖದಲ್ಲಿದ್ದೇನೆ’. ದಯವಿಟ್ಟು ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. 2020ರ ಫೆಬ್ರವರಿ 26ರಂದು ನಾನು ಸಚಿವನಾದೆ. 4-5 ದಿನದಿಂದ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿದ್ದೇನೆ. ರಾಜೀನಾಮೆ ನೀಡಿರುವುದು ನನ್ನ ವೈಯಕ್ತಿಕ ನಿರ್ಧಾರ ಎಂದು ರಮೇಶ್ ಜಾರಕಿಹೊಳಿ ದುಃಖಿತರಾದ್ರು.

ಬೆಂಗಳೂರಿನ 2 ಕಡೆ ಷಡ್ಯಂತ್ರ ನಡೆದಿದೆ
CD ಬಿಡುಗಡೆಯಾದ ಒಂದು ದಿನ ರಾತ್ರಿ ಕಾದು ನಂತರ ರಾಜೀನಾಮೆ ನೀಡಿದೆ. ಏನೇನು ಆಗುತ್ತೆ ಎಂದು ತಿಳಿಯೋಣ ಎಂದು ಸುಮ್ಮನಿದ್ದೆ. ನಾನು ರಾಜೀನಾಮೆ ಕೊಟ್ಟು ನೇರವಾಗಿ ಊರಿಗೆ ಹೋಗಿದ್ದೆ. ನಂತರ ಏನು ಬೆಳವಣಿಗೆ ನಡೆದಿದೆ ಎಂದು ನನಗೆ ಗೊತ್ತಿಲ್ಲ. ಒಬ್ಬ ಮಹಾನ್ ನಾಯಕನಿಂದ ಇದೆಲ್ಲಾ ಆಗಿದೆ. ಅವರ ಬಗ್ಗೆ ಈಗ ಹೇಳುವುದಕ್ಕೆ ಆಗುವುದಿಲ್ಲ. ಇದೊಂದು ಬಹಳ ಸೂಕ್ಷ್ಮವಾದ ವಿಚಾರವಾಗಿದೆ. ಇದನ್ನು ರಾಜಕೀಯ ಮಾಡುವುದಕ್ಕೆ ಹೋಗಬಾರದು. ಯಶವಂತಪುರ, ಹುಳಿಮಾವು ಸೇರಿ ಬೆಂಗಳೂರಿನ 2 ಕಡೆ ಷಡ್ಯಂತ್ರ ನಡೆದಿದೆ. ಯಶವಂತಪುರದ 4, 5ನೇ ಮಹಡಿಯಲ್ಲಿ ಷಡ್ಯಂತ್ರ ನಡೆದಿದೆ. ಅವರನ್ನು ಜೈಲಿಗೆ ಹಾಕದೆ ಸುಮ್ಮನೆ ಬಿಡುವುದಿಲ್ಲ. ನಾನು ಸುಮ್ಮನೆ ಇದರಲ್ಲಿ ರಾಜಕೀಯ ಮಾಡಲು ಹೋಗಲ್ಲ. ಮುಂದಿನ ದಿನಗಳಲ್ಲಿ ಎಲ್ಲ ವಿಷಯಗಳನ್ನು ಹೇಳುತ್ತೇನೆ ಎಂದರು.

ಯುವತಿಗೆ 50 ಲಕ್ಷವಲ್ಲ, 5 ಕೋಟಿ ನೀಡಿರುವ ಮಾಹಿತಿ ಇದೆ
ನನಗೆ ಎಲ್ಲ ಪಕ್ಷದವರ ಮೇಲೆ ಗೌರವ ಇದೆ. ನನಗೆ ರಾಜಕಾರಣ ಬೇಕಿಲ್ಲ, ಕುಟುಂಬದ ಗೌರವ ಮುಖ್ಯ. ನಾವು ಈವರೆಗೆ ಯಾರ ವಿರುದ್ಧವೂ ಆರೋಪ ಮಾಡಿಲ್ಲ. ಹೆಚ್.ಡಿ.ಕುಮಾರಸ್ವಾಮಿ ನನ್ನ ಪರವಾಗಿ ಮಾತನಾಡಿದ್ದಾರೆ. ಮೊದಲು ಹೆಚ್.ಡಿ.ಕುಮಾರಸ್ವಾಮಿ, ರೇವಣ್ಣ ಮಾತನಾಡಿದ್ದರು. ಸಿಡಿಯಲ್ಲಿದ್ದ ಯುವತಿಗೆ 50 ಲಕ್ಷವಲ್ಲ, 5 ಕೋಟಿ ನೀಡಿರುವ ಮಾಹಿತಿ ಇದೆ. ಜೊತೆಗೆ ಆಕೆಗೆ ವಿದೇಶದಲ್ಲಿ 2 ಫ್ಲ್ಯಾಟ್‌ಗಳನ್ನು ನೀಡಿರುವ ಬಗ್ಗೆ ಮಾಹಿತಿ ಇದೆ. ಬೇರೆ ಸೆಕ್ಸ್ ಹಗರಣಗಳಲ್ಲಿ ₹15, 20 ಕೋಟಿ ಖರ್ಚು
ಆದರೆ ನನ್ನನ್ನು ಮುಗಿಸಲು ನೂರಾರು ಕೋಟಿ ಖರ್ಚು ಮಾಡಿದ್ದಾರೆ. ರಾಜಕೀಯವಾಗಿ ಮುಗಿಸಲು ದೊಡ್ಡ ಷಡ್ಯಂತ್ರ ನಡೆದಿದೆ. ಇದರ ವಿರುದ್ಧ ನಾನೇಕೆ ದೂರು ನೀಡುವುದಕ್ಕೆ ಹೋಗಲಿ. ಆರೋಪವನ್ನು ನಾನು ಧೈರ್ಯವಾಗಿ ಎದುರಿಸುತ್ತೇನೆ. ನನ್ನ ವಿರೋಧಿಗಳಿಗೆ ಇದೊಂದು ದೊಡ್ಡ ಅಸ್ತ್ರವಾಗಿದೆ. ಇಂತಹವು 10 ದೂರು ಬಂದರೂ ನಾನು ಎದುರಿಸಲು ಸಿದ್ಧನಿದ್ದೇನೆ. ನನಗೆ ಖಾತೆ ಬೇಕೆಂದು ನಾನು ಕೇಳುವುದಕ್ಕೆ ಹೋಗಲ್ಲ. ನನಗೆ ನನ್ನ ಕುಟುಂಬದ ಗೌರವವೇ ಮುಖ್ಯ ಎಂದು ರಮೇಶ್ ಜಾರಕಿಹೊಳಿ ಬಿಡುಗಡೆಯಾದ ಸಿಡಿಯಲ್ಲಿರುವುದು ನಾನಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿ.ಡಿ ಬಹಿರಂಗ ಪ್ರಕರಣ: ದಿನೇಶ್ ಕಲ್ಲಹಳ್ಳಿ ಪರ ವಕೀಲರು ನೀಡಿದ್ದ ಅರ್ಜಿ ತಿರಸ್ಕರಿಸಿದ ಕಬ್ಬನ್​ಪಾರ್ಕ್ ಠಾಣೆ ಪೊಲೀಸರು

Published On - 9:54 am, Tue, 9 March 21