Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ವಕೀಲರೊಂದಿಗೆ ರಮೇಶ್ ಜಾರಕಿಹೊಳಿ ಚರ್ಚೆ: ಮಾನನಷ್ಟ, ಐಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲು ಚಿಂತನೆ

ಲೈಂಗಿಕ ಸಂಬಂಧದ ಆರೋಪದಲ್ಲಿ ರಾಜೀನಾಮೆ ಕೊಟ್ಟರುವ ರಮೇಶ್​ ಜಾರಕಿಹೊಳಿ ಅವರು ದೆಹಲಿಯ ವಕೀಲರನ್ನು ಸಂಪರ್ಕಿಸಿ ಮುಂದಿನ ಹೆಜ್ಜೆ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ವಕೀಲರೊಂದಿಗೆ ರಮೇಶ್ ಜಾರಕಿಹೊಳಿ ಚರ್ಚೆ: ಮಾನನಷ್ಟ, ಐಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲು ಚಿಂತನೆ
ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ
Follow us
ಡಾ. ಭಾಸ್ಕರ ಹೆಗಡೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 09, 2021 | 7:51 PM

ತನ್ನ ಮೇಲಿನ ಸಿಡಿ ಹೊರಬಿದ್ದಾಗಿನಿಂದ ಮರೆಯಾಗಿದ್ದ ಮಾಜಿ ಮಂತ್ರಿ ರಮೇಶ್​ ಜಾರಕಿಹೊಳಿ ಇಂದು ಹೊರಬಿದ್ದು ಪತ್ರಿಕಾಗೋಷ್ಠಿ ಮಾಡಿ ಮಾತನಾಡಿದರು. ತನ್ನ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದವರ ವಿರುದ್ಧ ಹಗೆ ತೀರಿಸಿಕೊಳ್ಳುತ್ತೇನೆ ಎಂದು ತೊಡೆ ತಟ್ಟಿರುವ ಜಾರಕಿಹೊಳಿ ಈಗ ಮುಂದಿನ ಹೆಜ್ಜೆ ಇಡಲು ಮುಂದಾಗಿದ್ದಾರೆ.  ಮೂಲಗಳ ಪ್ರಕಾರ ಜಾರಕಿಹೊಳಿ ದೆಹಲಿಯ ಪ್ರಮುಖ ವಕೀಲರನ್ನು ಸಂಪರ್ಕಿಸುತ್ತಿದ್ದಾರೆ.

ದೆಹಲಿ ವಕೀಲರು ಯಾಕೆ? ಬೆಂಗಳೂರಿನಲ್ಲಿರುವ ತುಂಬಾ ಯಶಸ್ವಿ ವಕೀಲರು ಜಾರಕಿಹೊಳಿ ಕೇಸನ್ನು ನಡೆಸಲು ಸಿಗಬಹುದಿತ್ತು. ಏನು ತೊಂದರೆ ಆಗದು ಎಂಬ ವಿಚಾರ ಬರಬಹುದು. ಆದರೆ ಜಾರಕಿಹೊಳಿ ಅವರ ಲೆಕ್ಕಾಚಾರವೇ ಬೇರೆ. ತಮ್ಮ ನಡೆ ಹೇಗಿರಬೇಕು, ಕೇಸನ್ನು ಹೋರಾಟ ಮಾಡುವಾಗ ಯಾವ ರೀತಿ ಮುಂದುವರಿಯಬೇಕು, ಯಾವ ಥರದ ಕೇಸನ್ನು ಹಾಕಿದರೆ ಸೂಕ್ತ? ಇವೆಲ್ಲ ವಿಚಾರಗಳು ಯಾವುದೇ ಕಾರಣಕ್ಕೂ ಹೊರಬರಬಾರದು. ತಮ್ಮ ಮುಂದಿನ ನಡೆಯ ಮಾಹಿತಿ  ಇಲ್ಲಿನ ವಕೀಲರ ಮೂಲಗಳಿಂದ ರಾಜಕೀಯ ವಿರೋಧಗಳಿಗೆ ಮತ್ತು ಈ ಸಿಡಿ ಮಾಡಿಸಿದವರಿಗೆ ಸಿಗಬಹುದು. ಆದ್ದರಿಂದ ದೆಹಲಿಯ ವಕೀಲರನ್ನು ರಮೇಶ್ ಜಾರಕಿಹೊಳಿ ಸಂಪರ್ಕಿಸಿ ಈ ವಿಚಾರಗಳನ್ನು ಚರ್ಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾನನಷ್ಟ ಮೊಕದ್ದಮೆ  ಅಥವಾ ಐಟಿ ಕಾಯ್ದೆಯಡಿ ಕೇಸು? ಮೂಲಗಳು ಹೇಳುವ ಪ್ರಕಾರ ರಮೇಶ್ ಜಾರಕಿಹೊಳಿ ಮಾನನಷ್ಟ ಮೊಕದ್ದಮೆ ಹಾಕುವ ಹಂಬಲ ವ್ಯಕ್ತಪಡಿಸಿದ್ದಾರೆ. ಆ ಕುರಿತು ಚರ್ಚೆ ನಡೆಯುತ್ತಿದೆ. ಆದರೆ. ಇನ್ನೊಂದು ವರದಿ ಪ್ರಕಾರ ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ ಕಾಯ್ದೆ) ಪ್ರಕಾರ ಕೇಸು ದಾಖಲಿಸಿದರೆ, ಆಗ ಪೊಲೀಸರು ಇಡೀ ಜಾಲವನ್ನು ಭೇದಿಸಲೇಬೇಕಾಗುತ್ತದೆ. ಮಾನನಷ್ಟ ಮೊಕದ್ದಮೆ ಹಾಕಿದರೆ, ಪೊಲೀಸರ ಕೆಲಸ ಏನೂ ಇರುವುದಿಲ್ಲ. ಒಮ್ಮೆ ಕೇಸಿನ ಅವಧಿ ಹೆಚ್ಚು ಲಂಬಿಸಿದರೆ, ಜಾರಕಿಹೊಳಿ ಅವರಿಗೆ ನಷ್ಟ ಜಾಸ್ತಿ.

ಹೆಸರು ಹೇಳಲಿಚ್ಚಿಸದ ವಕೀಲರೊಬ್ಬರ ಪ್ರಕಾರ, ರಮೇಶ್​ ಜಾರಕಿಹೊಳಿ, ಮಾನನಷ್ಟ ಮೊಕದ್ದಮೆ  ಮತ್ತು ಐಟಿ ಕಾಯ್ದೆ; ಹೀಗೆ ಎರಡೂ ನಿಯಮಗಳಡಿ ಪ್ರಕರಣ ದಾಖಲಿಸಬಹುದಾಗಿದೆ. ಕಾನೂನಿನಲ್ಲಿ ಇದಕ್ಕೆ ಯಾವ ಅಡ್ಡಿ ಇಲ್ಲ. ಹಾಗಾಗಿ, ಮಾನನಷ್ಟ ಮೊಕದ್ದಮೆಯನ್ನು ಗೋಕಾಕಿನಲ್ಲಿಯೂ ಮತ್ತು ಐಟಿ ಕಾಯ್ದೆಯಡಿ ಕೇಸನ್ನು ಬೆಂಗಳೂರಿನಲ್ಲಿಯೂ ಅವರು ಮಾಡುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ. ಒಂದೊಮ್ಮೆ ರಮೇಶ್​ ಜಾರಕಿಹೊಳಿ ಸಿಬಿಐ ತನಿಖೆಗೆ ಒತ್ತಾಯಿಸಿ, ಅದನ್ನು ರಾಜ್ಯ ಸರಕಾರ ಒಪ್ಪಿಕೊಂಡರೆ ಆಗ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟವರಿಗೆ ಹಿನ್ನಡೆ ಆಗಬಹುದು ಎಂಬ ಚರ್ಚೆ ಕೂಡ ನಡೆಯುತ್ತಿದೆ.

ಇದನ್ನೂ ಓದಿ:

ವಿಧಾನಸೌಧದ ಮೊಗಸಾಲೆಯಲ್ಲಿ ಡಿ.ಕೆ.ಶಿವಕುಮಾರ್​ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಗುಪ್ತ ಚರ್ಚೆ; ರಮೇಶ್​ ಜಾರಕಿಹೊಳಿ ಸಿಡಿ ಬಗ್ಗೆ ಮಾತುಕತೆ?

‘ಡಿಕೆಶಿ, ಹೆಬ್ಬಾಳ್ಕರ್, ರಮೇಶ್​ ಮಧ್ಯೆ ಜಿದ್ದಾಜಿದ್ದಿ ಇತ್ತು; ಇವರೇ ವಿಡಿಯೋ ಚಿತ್ರೀಕರಿಸಿರಬಹುದೆಂಬ ಅನುಮಾನ ಇದೆ’

Published On - 7:47 pm, Tue, 9 March 21

Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್