AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮೇಶ್ವರಂ ಕೆಫೆ ಬಾಂಬರ್‌ ಬೆನ್ನತ್ತಿದ ಎನ್​ಐಎಗೆ ಸಿಕ್ತು ‘ಸ್ಫೋಟಕ’ ಮಾಹಿತಿ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎನಿಂದ ಸುಲೇಮಾನ್ ಮತ್ತು ಸೈಯದ್ ಸಮೀರ್ ವಿಚಾರಣೆ ಮಾಡಿದ್ದು, ಅಕ್ಟೋಬರ್ 22 ರಂದು ಬಳ್ಳಾರಿಯಲ್ಲಿ ಅಮೋನಿಯಂ ನೈಟ್ರೇಟ್ ಖರೀದಿ ಮಾಡಿರುವುದು ತಿಳಿದುಬಂದಿದೆ. ಬಳ್ಳಾರಿಯ ಕೌಲ್‌ಬಜಾರ್‌ ಸೇರಿ ಹಲವೆಡೆ NIA, ಪೊಲೀಸರಿಂದ ಶೋಧ ಮಾಡಲಾಗುತ್ತಿದೆ. 48 ಗಂಟೆಗಳಿಂದ ಎನ್‌ಐಎ ಅಧಿಕಾರಿಗಳು ಬಳ್ಳಾರಿಯಲ್ಲಿ ಬೀಡುಬಿಟ್ಟಿದ್ದಾರೆ.

ರಾಮೇಶ್ವರಂ ಕೆಫೆ ಬಾಂಬರ್‌ ಬೆನ್ನತ್ತಿದ ಎನ್​ಐಎಗೆ ಸಿಕ್ತು ‘ಸ್ಫೋಟಕ’ ಮಾಹಿತಿ
ಪ್ರಾತಿನಿಧಿಕ ಚಿತ್ರ
ವಿನಾಯಕ ಬಡಿಗೇರ್​
| Edited By: |

Updated on:Mar 08, 2024 | 4:32 PM

Share

ಬಳ್ಳಾರಿ, ಮಾರ್ಚ್​ 8: ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram Cafe) ಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎನಿಂದ ಸುಲೇಮಾನ್ ಮತ್ತು ಸೈಯದ್ ಸಮೀರ್ ವಿಚಾರಣೆ ಮಾಡಿದ್ದು, ಅಕ್ಟೋಬರ್ 22 ರಂದು ಬಳ್ಳಾರಿಯಲ್ಲಿ ಅಮೋನಿಯಂ ನೈಟ್ರೇಟ್ ಖರೀದಿ ಮಾಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಸಿಕ್ಕಿದೆ. ಸ್ಫೋಟಕ ವಸ್ತುಗಳ ತಯಾರಿಕೆಗೆ ರಸಗೊಬ್ಬರದ ಅಂಗಡಿಯಲ್ಲಿ 1 ಕೆ.ಜಿ ಅಮೋನಿಯಂ ನೈಟ್ರೇಟ್ ಖರೀದಿ ಮಾಡಿದ್ದಾರೆ. ಇವರೊಂದಿಗೆ ಮತ್ತೊಬ್ಬ ಇದ್ದನಾ ಎಂಬುದರ ಬಗ್ಗೆ ಎನ್‌ಐಎ ಹುಡುಕಾಟ ನಡೆಸಿದ್ದು, ರಸಗೊಬ್ಬರದ ಅಂಗಡಿಗೆ ಭೇಟಿ ನೀಡಿರುವ NIA ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ವಸ್ತುಗಳ ಖರೀದಿಯಲ್ಲಿ ಭಾಗಿಯಾದವರಿಗಾಗಿ ಎನ್‌ಐಎನಿಂದ ಹುಡುಕಾಟ ನಡೆದಿದ್ದು, ಸ್ಫೋಟಕ ವಸ್ತುಗಳ ತಯಾರಿಕೆ ಬಗ್ಗೆ ಶಂಕಿತ‌ ಪಕ್ಕಾ ಮಾಹಿತಿ ಹೊಂದಿದ್ನಾ? ಸುಲೇಮಾನ್ ಮತ್ತು ಸೈಯದ್ ಸಮೀರ್ ಸಹಚರನಿಂದ ಬಾಂಬ್ ಸ್ಫೋಟ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಬಳ್ಳಾರಿಯ ಕೌಲ್‌ಬಜಾರ್‌ ಸೇರಿ ಹಲವೆಡೆ NIA, ಪೊಲೀಸರಿಂದ ಶೋಧ ಮಾಡಲಾಗುತ್ತಿದೆ. 48 ಗಂಟೆಗಳಿಂದ ಎನ್‌ಐಎ ಅಧಿಕಾರಿಗಳು ಬಳ್ಳಾರಿಯಲ್ಲಿ ಬೀಡುಬಿಟ್ಟಿದ್ದಾರೆ. ಸ್ಥಳೀಯ ಪೊಲೀಸರೊಂದಿಗೆ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ಮಾಡಲಾಗುತ್ತಿದ್ದು, ಆತನ ಭಾವ ಚಿತ್ರ ಹಿಡಿದು ತನಿಖೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಬಳ್ಳಾರಿ ಜೈಲಲ್ಲೇ ಕುಳಿತು ಬೆಂಗಳೂರು ಸ್ಫೋಟಕ್ಕೆ ಸಂಚು ಹೂಡಿದ್ದ ಶಂಕಿತ ಉಗ್ರ ಎನ್​ಐಎ ವಶಕ್ಕೆ

ಕೆಫೆ ಬಾಂಬರ್‌ನ ಪತ್ತೆಗಾಗಿ 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗಿದೆ. 10 ಲಕ್ಷ ಬಹುಮಾನ ಘೋಷಿಸಲಾಗಿದೆ. ಶಂಕಿತನ ರೇಖಾಚಿತ್ರ ಸಿದ್ಧಪಡಿಸಲಾಗಿದೆ. ಸಿಸಿಬಿ ಟೀಂ, ಎನ್ಐಎ ಅಧಿಕಾರಿಗಳು ಹಲವು ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಸಿರೋ ಸಿಸಿಟಿವಿ ದೃಶ್ಯಗಳೂ ಸಿಕ್ಕಿವೆ. ಆದರೆ ಬಾಂಬರ್‌ನ ಖಚಿತವಾದ ಹೆಜ್ಜೆಜಾಡು ಈವರೆಗೂ ಲಭ್ಯವಾಗಿಲ್ಲ.

ಇದನ್ನೂ ಓದಿ: ಬೆಂಗಳೂರು: ಸ್ಫೋಟ ಸಂಭವಿಸಿ ವಾರದ ನಂತರ ರಾಮೇಶ್ವರಂ ಕೆಫೆ ಪುನರಾರಂಭ

ಖತರ್ನಾಕ್ ಬಾಂಬರ್ ಬೆಂಗಳೂರಿನ ಹೂಡಿಯಲ್ಲಿ ಬಟ್ಟೆ ಬದಲಿಸಿ ಅಲ್ಲಿಂದ ಸಾರಿಗೆ ಬಸ್‌ನಲ್ಲಿ ತುಮಕೂರಿಗೆ ತೆರಳಿದ್ದಾನೆ. ಅಲ್ಲಿಂದ ಹುಮ್ನಾಬಾದ್‌ಗೆ ಹೋಗಿ, ನಂತರ ಬಳ್ಳಾರಿ ತಲುಪಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಎನ್ಐಎ ತಂಡ ಬಳ್ಳಾರಿಯಲ್ಲೂ ಬೀಡು ಬಿಟ್ಟಿದೆ. ಸಿಸಿ ಕ್ಯಾಮಾರಗಳ ಸೂಕ್ಷ್ಮ ಪರಿಶೀಲನೆಯಲ್ಲಿ ತೊಡಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:25 pm, Fri, 8 March 24