ಪಾದರಾಯನಪುರ ಅಟ್ಟಹಾಸ: ಪುಂಡಾಟ ನಡೆಸಿದ್ದವನ ಪತ್ನಿಗೂ ಅಂಟಿಕೊಂಡ ಕೊರೊನಾ!

|

Updated on: May 08, 2020 | 10:10 AM

ಬೆಂಗಳೂರು: ಕೊರೊನಾ ತವರೂರೇ ಆಗಿರುವ ಪಾದರಾಯನಪುರದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಱಂಡಮ್‌ ಟೆಸ್ಟ್‌ನಲ್ಲಿ ಮತ್ತೋರ್ವ ಮಹಿಳೆಗೆ ಸೋಂಕು ಇರುವುದು ಪತ್ತೆಯಾಗಿದೆ. ಱಂಡಮ್ ಟೆಸ್ಟ್‌ನಲ್ಲಿ ನಿನ್ನೆ ಇಬ್ಬರಿಗೆ ಸೋಂಕು ಪತ್ತೆಯಾಗಿತ್ತು. ಇಂದು 35 ವರ್ಷದ ಮತ್ತೋರ್ವ ಮಹಿಳೆಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. 49 ಜನರ ಱಂಡಮ್‌ ಟೆಸ್ಟ್‌ನಲ್ಲಿ ಒಟ್ಟು ಮೂವರಿಗೆ ಕೊರೊನಾ ತಗುಲಿದ್ದು, ಮೂವರಲ್ಲಿ ಇಬ್ಬರು ಮಹಿಳೆಯರು, ಓರ್ವ ಯುವಕ ಸೇರಿದ್ದಾರೆ. ತಬ್ಲೀಗಿ ನಂಟನ್ನು ಹೊಂದಿರುವ ಪಾದರಾಯನಪುರದಲ್ಲಿ ಸೋಂಕಿತ ಸಂಖ್ಯೆ ಬೆಳೆಯುತ್ತಲೇ ಹೋಗುತ್ತಿದೆ. ಸದ್ಯ ಬಾಪೂಜಿನಗರ ಸೀಲ್ ಡೌನ್​ನಿಂದ […]

ಪಾದರಾಯನಪುರ ಅಟ್ಟಹಾಸ: ಪುಂಡಾಟ ನಡೆಸಿದ್ದವನ ಪತ್ನಿಗೂ ಅಂಟಿಕೊಂಡ ಕೊರೊನಾ!
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ತವರೂರೇ ಆಗಿರುವ ಪಾದರಾಯನಪುರದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಱಂಡಮ್‌ ಟೆಸ್ಟ್‌ನಲ್ಲಿ ಮತ್ತೋರ್ವ ಮಹಿಳೆಗೆ ಸೋಂಕು ಇರುವುದು ಪತ್ತೆಯಾಗಿದೆ. ಱಂಡಮ್ ಟೆಸ್ಟ್‌ನಲ್ಲಿ ನಿನ್ನೆ ಇಬ್ಬರಿಗೆ ಸೋಂಕು ಪತ್ತೆಯಾಗಿತ್ತು. ಇಂದು 35 ವರ್ಷದ ಮತ್ತೋರ್ವ ಮಹಿಳೆಗೆ ಕೊರೊನಾ ಸೋಂಕಿರುವುದು ದೃಢವಾಗಿದೆ.

49 ಜನರ ಱಂಡಮ್‌ ಟೆಸ್ಟ್‌ನಲ್ಲಿ ಒಟ್ಟು ಮೂವರಿಗೆ ಕೊರೊನಾ ತಗುಲಿದ್ದು, ಮೂವರಲ್ಲಿ ಇಬ್ಬರು ಮಹಿಳೆಯರು, ಓರ್ವ ಯುವಕ ಸೇರಿದ್ದಾರೆ. ತಬ್ಲೀಗಿ ನಂಟನ್ನು ಹೊಂದಿರುವ ಪಾದರಾಯನಪುರದಲ್ಲಿ ಸೋಂಕಿತ ಸಂಖ್ಯೆ ಬೆಳೆಯುತ್ತಲೇ ಹೋಗುತ್ತಿದೆ. ಸದ್ಯ ಬಾಪೂಜಿನಗರ ಸೀಲ್ ಡೌನ್​ನಿಂದ ಮುಕ್ತವಾದ್ರೆ. ಪಾದರಾಯನಪುರಕ್ಕೆ ಸೀಲ್ ಡೌನ್ ರಿಲೀಫ್ ಸಿಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ.

Published On - 8:39 am, Fri, 8 May 20