ಕೊರೊನಾ ಎಫೆಕ್ಟ್! ಮುಂದಿನ ವರ್ಷ ಶಾಲಾ ಮಕ್ಕಳು ಹೆಚ್ಚು ಓದಬೇಕಿಲ್ಲ!
ಬೆಂಗಳೂರು: ಥ್ಯಾಂಕ್ಸ್ ಟು ಕೊರೊನಾ ವೈರಸ್, ಮುಂದಿನ ಶೈಕ್ಷಣಿಕ ವರ್ಷ ವಿಳಂಬವಾಗುವ ಹಿನ್ನೆಲೆ ಶಾಲಾ ಮಕ್ಕಳು ಹೆಚ್ಚು ಓದ ಬೇಕಿಲ್ಲ! ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್ ಈ ಕುರಿತು ಸುಳಿವು ನೀಡಿದ್ದಾರೆ. 15 ದಿನ, 1 ತಿಂಗಳು, ಒಂದೂವರೆ ತಿಂಗಳು ಹಾಗೂ 2 ತಿಂಗಳ ಹಂತವಾರು ಹೆಚ್ಚುವರಿ ಪಠ್ಯಗಳನ್ನ ಗುರುತಿಸಿ ಅವುಗಳನ್ನು ಕೈಬಿಡುವ ಬಗ್ಗೆ ವಿಸ್ತೃತ ವರದಿ ಸಲ್ಲಿಕೆಗೆ ಸೂಚನೆ ನೀಡಲಾಗಿದೆ. ಪಠ್ಯ ಪುಸ್ತಕ ಪ್ರವೇಶಿಸಲಿದೆ ಮಾರಕ ಕೊರೊನಾ ವೈರಸ್! 1ರಿಂದ 10ನೇ ತರಗತಿ ಹಾಗೂ ಪದವಿ […]
ಬೆಂಗಳೂರು: ಥ್ಯಾಂಕ್ಸ್ ಟು ಕೊರೊನಾ ವೈರಸ್, ಮುಂದಿನ ಶೈಕ್ಷಣಿಕ ವರ್ಷ ವಿಳಂಬವಾಗುವ ಹಿನ್ನೆಲೆ ಶಾಲಾ ಮಕ್ಕಳು ಹೆಚ್ಚು ಓದ ಬೇಕಿಲ್ಲ! ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್ ಈ ಕುರಿತು ಸುಳಿವು ನೀಡಿದ್ದಾರೆ. 15 ದಿನ, 1 ತಿಂಗಳು, ಒಂದೂವರೆ ತಿಂಗಳು ಹಾಗೂ 2 ತಿಂಗಳ ಹಂತವಾರು ಹೆಚ್ಚುವರಿ ಪಠ್ಯಗಳನ್ನ ಗುರುತಿಸಿ ಅವುಗಳನ್ನು ಕೈಬಿಡುವ ಬಗ್ಗೆ ವಿಸ್ತೃತ ವರದಿ ಸಲ್ಲಿಕೆಗೆ ಸೂಚನೆ ನೀಡಲಾಗಿದೆ.
ಪಠ್ಯ ಪುಸ್ತಕ ಪ್ರವೇಶಿಸಲಿದೆ ಮಾರಕ ಕೊರೊನಾ ವೈರಸ್! 1ರಿಂದ 10ನೇ ತರಗತಿ ಹಾಗೂ ಪದವಿ ಪೂರ್ವ ಶಿಕ್ಷಣದವರೆಗೆ 2020-21ನೇ ಸಾಲಿನ ಶಾಲಾ ಪಠ್ಯಗಳನ್ನು ಕಡಿತಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಕಡಿತಗೊಳಿಸಬಹುದಾದಂತಹ ಹೆಚ್ಚುವರಿ ಪಠ್ಯವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೈಕ್ಷಣಿಕ ವರ್ಷದಲ್ಲಿ ಕಳೆದುಕೊಳ್ಳುವ ಅವಧಿಯ ಆಧಾರದಲ್ಲಿ ಮಕ್ಕಳ ಕಲಿಕೆಗೆ ಹೊರೆಯಾಗದ ರೀತಿ ಪಠ್ಯ ಕೈಬಿಡಲು ಸೂಚನೆ ನೀಡಲಾಗಿದೆ. ಹೆಚ್ಚುವರಿ ಪಠ್ಯವನ್ನು ಗುರುತಿಸಿ ವಿಸ್ತೃತ ವರದಿ ಸಲ್ಲಿಕೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾರಕ ಕೊವಿಡ್ ಬಗ್ಗೆಯೂ ಪಠ್ಯ ಅಳವಡಿಸುವಂತೆ ಸೂಚನೆ ಸಿಕ್ಕಿದೆ. ಈ ಬಗ್ಗೆ ಕೂಡಲೇ ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ ಎಂದು ಸಚಿವ ಸುರೇಶ್‌ಕುಮಾರ್ ಹೇಳಿದ್ದಾರೆ.
Published On - 7:20 pm, Thu, 7 May 20