
ಇದೇ ಅಕ್ಟೋಬರ್ ತಿಂಗಳಲ್ಲಿ ಹಿಂದೂಗಳಿಗೆ ಸಾಲುಸಾಲು ಹಬ್ಬಗಳು. ನವರಾತ್ರಿ ಮತ್ತು ದಸರಾ ಮಗಿದಿದೆಯಾದರೂ ಈ ತಿಂಗಳು ಇನ್ನೊಂದು ವಿಶೇಷ ಇದೆ. ಕೊರೋನಾ ನೀಡುತ್ತಿರುವ ವಿಷಾದದ ಮಧ್ಯೆ ನಾವು ಆವೊಂದು ಪ್ರಕೃತಿ ವಿಸ್ಮಯವನ್ನು ಮರೆತೇ ಬಿಟ್ಟಿದ್ದೇವೆ. ಆ ವಿಶೇಷ ನಡೆಯುವುದು ಆಕಾಶದಲ್ಲಿ.
ಮುಂಬೈನ ನೆಹರೂ ಖಗೋಳಾಲಯದ ನಿರ್ದೇಶಕ ಅರವಿಂದ ಪರಾಂಜಪೆ ಹೇಳುವ ಪ್ರಕಾರ, ಒಂದೇ ತಿಂಗಳಿನಲ್ಲಿ ಎರಡು ಹುಣ್ಣಿಮೆ ಬಂದರೆ ಎರಡನೆಯದನ್ನು ನೀಲಿ ಚಂದ್ರ ಎಂದು ಗುರುತಿಸುವುದು ವಾಡಿಕೆಯಂತೆ. ಖಗೋಳ ಶಾಸ್ತ್ರದ ಪ್ರಕಾರ ಒಂದು ಚಾಂದ್ರಮಾನ ತಿಂಗಳು ಎಂದರೆ, 29.531 ದಿನ ಅಥವಾ 29 ದಿನ, 12 ತಾಸು 44 ನಿಮಿಷ ಮತ್ತು 38 ಸೆಕೆಂಡುಗಳು.
ಪರಾಂಜಪೆ ಅವರ ಪ್ರಕಾರ, ಯಾವುದಾದರೂ ತಿಂಗಳಿನ ಒಂದನೇ ಅಥವಾ ಎರಡನೇ ತಾರೀಖಿನಂದು ಮೊದಲನೇ ಹುಣ್ಣಿಮೆ ಬಂದರೆ ತಿಂಗಳ ಕೊನೆಯ ದಿನ ಸಹ ನೀಲಿ ಚಂದ್ರ ಬರುವ ಸಾಧ್ಯತೆ ಇರುತ್ತದೆ. ಇನ್ನು ಮುಂದಿನ ಬಾರಿ ನೀಲಿ ಚಂದ್ರ ಬರಲು ನಾವು ಮೂರು ವರ್ಷ ಕಾಯಬೇಕು ಅಂದರೆ ಆಗಸ್ಟ್ 31, 2023 ರಂದು ಅಂತಹ ದಿನ ಮತ್ತೆ ಬರುತ್ತದೆ. ಕುತೂಹಲದ ಸಂಗತಿಯೆಂದ್ರೆ, ಈ ಖಗೋಳ ಸೌಂದರ್ಯದ ಕುರಿತು ಹಿಂದೂ ಪಂಚಾಂಗ ಪದ್ಧತಿಯಲ್ಲಿ ಯಾವುದೇ ಮಾನ್ಯತೆ ಇಲ್ಲ.