ಜೈಲಿನಲ್ಲಿರುವ ಮಗನಿಗೆ ಖಾಸಗಿ ಭಾಗದಲ್ಲಿ ಮೊಬೈಲ್ ಕೊಂಡೊಯ್ದು ಸಿಕ್ಕಿಬಿದ್ದ ತಾಯಿ
ಜೈಲಿನಲ್ಲಿರುವ ಮಗನ ಭೇಟಿಗೆ ಬಂದಿದ್ದ ತಾಯಿ ತಮ್ಮ ಖಾಸಗಿ ಭಾಗದಲ್ಲಿ ಮೊಬೈಲ್ ಇಟ್ಟಿಕೊಂಡು ಬಂದು ಸಿಕ್ಕಿಬಿದ್ದಿರುವಂತಹ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ. ಸದ್ಯ ಜೈಲಿನೊಳಗೆ ಮೊಬೈಲ್ ಕೊಂಡೊಯ್ತಿದ್ದ ತಾಯಿ ವಿರುದ್ಧ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು, ಜನವರಿ 12: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ಇತ್ತೀಚೆಗೆ ಪರಿಶೀಲನೆ ನಡೆಸಿದ್ದಾಗ ಮೊಬೈಲ್ (Mobile) ಹಾಗೂ ಸಿಮ್ ಕಾರ್ಡ್ಗಳು ಪತ್ತೆಯಾಗಿದ್ದವು. ಆದರೆ ಇದೀಗ ವಿಚಿತ್ರ ಘಟನೆಯೊಂದು ನಡೆದಿದೆ. ಜೈಲಿನಲ್ಲಿರುವ ಮಗನ ಭೇಟಿಗೆ ಬಂದಿದ್ದ ತಾಯಿ ತಮ್ಮ ಖಾಸಗಿ ಭಾಗದಲ್ಲಿ ಮೊಬೈಲ್ ಕೊಂಡೊಯ್ದು ಸಿಕ್ಕಿಬಿದಿದ್ದಾರೆ. ಸದ್ಯ ತಾಯಿ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜೈಲಿನಲ್ಲಿರುವ ಮಗ ಭರತ್ನನ್ನು ನೋಡಲು ತಾಯಿ ಲಕ್ಷ್ಮೀ ನರಸಮ್ಮ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದರು. ವಿಸಿಟರ್ ಪಾಸ್ ಪಡೆದುಕೊಂಡು ಬಂದಿದ್ದ ಲಕ್ಷ್ಮೀ ನರಸಮ್ಮರನ್ನು ತಪಾಸಣೆ ಮಾಡಿದಾಗ ಗುಪ್ತಾಂಗದಲ್ಲಿ ಮೊಬೈಲ್ ಇಟ್ಕೊಂಡು ಬಂದಿದ್ದು ಪತ್ತೆ ಆಗಿದೆ.
ಎಫ್ಐಆರ್ನಲ್ಲಿ ಏನಿದೆ?
ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಪರಮೇಶ್ ಹೆಚ್.ಎ ಅವರ ತಮ್ಮ ಸಂಸ್ಥೆಯ ಸಿಬ್ಬಂದಿ ಕು. ವಸಂತಮ್ಮ ವೀಕ್ಷಕಿ ಮುಖ್ಯ ವೀಕ್ಷಕರು ಮುಖಾಂತರ ಕಳುಹಿಸಿದ ದೂರಿನ ಸಾರಾಂಶವೇನೆಂದರೆ ಕೇಂದ್ರ ಕಾರಾಗೃಹದ ಮುಖ್ಯದ್ವಾರದ ಹೊರಗೆ ಎಡಭಾಗದಲ್ಲಿರುವ ತಪಾಸಣಾ ವಿಭಾಗ-01 (ಸಾಮಾನ್ಯ ಸಂದರ್ಶನ ವಿಭಾಗ) ಬಂದಿಗಳ ಸಂದರ್ಶನಕ್ಕೆ ಬರುವ ಸಾರ್ವಜನಿಕರನ್ನು ಮತ್ತು ಅವರು ತರುವಂತಹ ವಸ್ತುಗಳನ್ನು ತಪಾಸಣೆ ಮಾಡಲು ಸಾಮಾನ್ಯ ಕರ್ತವ್ಯಕ್ಕೆ ಕೆಎಸ್ಐಎಸ್ಎಫ್ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಅಕ್ರಮ ತಡೆಗೆ ಅಲೋಕ್ ಕುಮಾರ್ ಮಾಸ್ಟರ್ ಪ್ಲ್ಯಾನ್: ಇಲ್ಲಿದೆ ಮಾಹಿತಿ
ಜನವರಿ 02ರಂದು ಸಮಯ ಸುಮಾರು ಮಧ್ಯಾಹ್ನ 12:10 ಗಂಟೆಗೆ ಸಾಮಾನ್ಯ ಸಂದರ್ಶನಕ್ಕೆ ಲಕ್ಷ್ಮೀ ನರಸಮ್ಮ (38) ಅವರು ವಿಸಿಟರ್ ಪಾಸ್ ಪಡೆದುಕೊಂಡು 9689/2205 ವಿಚಾರಣಾಧೀನಾ ಸಂಖ್ಯೆ ಹೊಂದಿರುವ ಭರತ್ ಎಂಬ ಕಾರಾಗೃಹ ಬಂದಿಯ ಸಂದರ್ಶನಕ್ಕೆ ಬಂದ ಸಂದರ್ಭದಲ್ಲಿ ತಪಾಸಣಾ ಕರ್ತವ್ಯದಲ್ಲಿದ್ದ ಆಶಾರಾಣಿ ವೈ ಎನ್, ತಪಾಸಣಾ ಕೊಠಡಿಗೆ ಕರೆದುಕೊಂಡು ಹೋಗಿ ಭೌತಿಕವಾಗಿ ತಪಾಸಣೆ ನಡೆಸಿದಾಗ, ಖಾಸಗಿ ಭಾಗದೊಳಗೆ ಒಂದು ಸಂಖ್ಯೆಯ ಬೇಸಿಕ್ ಕಂಪನಿಯ ನೀಲಿ ಬಣ್ಣದ ಮೊಬೈಲ್ (ಸಿಮ್ ಸಹಿತ) ಪತ್ತೆ ಆಗಿದೆ.
ಇದನ್ನೂ ಓದಿ: ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ಅಲೋಕ್ ಕುಮಾರ್ : ದಾಸನ ಬಗ್ಗೆ ಹೇಳಿದ್ದಿಷ್ಟು
ಮಹಿಳೆಯು ಕಾರಾಗೃಹದ ನಿಯಮ ಉಲ್ಲಂಘನೆ ಮಾಡಿ ಕೆಎಸ್ಐಎಸ್ಎಫ್ ಸಿಬ್ಬಂದಿಯವರ ಕಣ್ಣಪ್ಪಿಸಿ ಕಾರಾಗೃಹದ ಒಳಗಡೆ ನಿಷೇಧಿತ ವಸ್ತು, ಸಾಗಿಸಲು ಪ್ರಯತ್ನಿಸಿರುವುದರಿಂದ ಲಕ್ಷ್ಮೀ ನರಸಮ್ಮ ಮತ್ತು ವಿಚಾರಣಾ ಬಂದಿ ಭರತ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.