AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುನಿರತ್ನರನ್ನ ಗೆಲ್ಸಿದ್ರೆ ಸಚಿವರಾಗಿ ಬಂದು ಕ್ಷೇತ್ರದ ಅಭಿವೃದ್ಧಿ ಮಾಡ್ತಾರೆ: ಸಚಿವ ನಾರಾಯಣಗೌಡ

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನರನ್ನ ಗೆಲ್ಸಿದ್ರೆ ಸಚಿವರಾಗಿ ಬಂದು ಅವರು ಕ್ಷೇತ್ರದ ಅಭಿವೃದ್ಧಿ ಮಾಡ್ತಾರೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ. BJP ಸರ್ಕಾರವನ್ನ 25 ವರ್ಷ ಯಾರೂ ಅಲ್ಲಾಡಿಸಲು ಆಗಲ್ಲ ಉಪಚುನಾವಣೆ ಬಳಿಕ ಮುನಿರತ್ನ ಸಚಿವರಾಗಿ ಬರುತ್ತಾರೆ. ಈ ಸರ್ಕಾರವನ್ನು 25 ವರ್ಷ ಯಾರೂ ಅಲ್ಲಾಡಿಸಲು ಆಗಲ್ಲ ಎಂದು ಪ್ರಚಾರದ ವೇಳೆ ಸಚಿವ ನಾರಾಯಣಗೌಡ ಹೇಳಿದ್ದಾರೆ. ನವೆಂಬರ್ 3ರಂದು ಆರ್.ಆರ್.ನಗರ ಅಸೆಂಬ್ಲಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ R.R. ನಗರ ಬಿಜೆಪಿ […]

ಮುನಿರತ್ನರನ್ನ ಗೆಲ್ಸಿದ್ರೆ ಸಚಿವರಾಗಿ ಬಂದು ಕ್ಷೇತ್ರದ ಅಭಿವೃದ್ಧಿ ಮಾಡ್ತಾರೆ: ಸಚಿವ ನಾರಾಯಣಗೌಡ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Oct 27, 2020 | 1:00 PM

Share

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನರನ್ನ ಗೆಲ್ಸಿದ್ರೆ ಸಚಿವರಾಗಿ ಬಂದು ಅವರು ಕ್ಷೇತ್ರದ ಅಭಿವೃದ್ಧಿ ಮಾಡ್ತಾರೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.

BJP ಸರ್ಕಾರವನ್ನ 25 ವರ್ಷ ಯಾರೂ ಅಲ್ಲಾಡಿಸಲು ಆಗಲ್ಲ ಉಪಚುನಾವಣೆ ಬಳಿಕ ಮುನಿರತ್ನ ಸಚಿವರಾಗಿ ಬರುತ್ತಾರೆ. ಈ ಸರ್ಕಾರವನ್ನು 25 ವರ್ಷ ಯಾರೂ ಅಲ್ಲಾಡಿಸಲು ಆಗಲ್ಲ ಎಂದು ಪ್ರಚಾರದ ವೇಳೆ ಸಚಿವ ನಾರಾಯಣಗೌಡ ಹೇಳಿದ್ದಾರೆ.

ನವೆಂಬರ್ 3ರಂದು ಆರ್.ಆರ್.ನಗರ ಅಸೆಂಬ್ಲಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ R.R. ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಸಚಿವ ನಾರಾಯಣಗೌಡ ಪ್ರಚಾರ ಇಂದು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಈ ಹಿಂದೆ.. ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಕೆಲಸಗಳು ಆಗುತ್ತಿರಲಿಲ್ಲ. ಹೀಗಾಗಿ ನಾವೆಲ್ಲಾ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದೆವು. ಈಗ ಮುನಿರತ್ನ ಸ್ಪರ್ಧಿಸಲು ಕೋರ್ಟ್ ಅವಕಾಶ ನೀಡಿದೆ. ಮುನಿರತ್ನರನ್ನು ಗೆಲ್ಲಿಸಿದ್ರೆ ಅವರು ಸಚಿವರಾಗಿ ಬರುತ್ತಾರೆ ಕ್ಷೇತ್ರದ ಅಭಿವೃದ್ಧಿಗೆ ಮುನಿರತ್ನ ಕೆಲಸ ಮಾಡುತ್ತಾರೆ ಎಂದು ಪ್ರಚಾರ ಮಾಡುತ್ತಾ ಸಚಿವ ನಾರಾಯಣಗೌಡ ಹೇಳಿದರು.

Published On - 12:59 pm, Tue, 27 October 20

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು