ಕೊರೊನಾಗೆ ತಿಲಾಂಜಲಿ! ಇನ್ನು 9 ತಿಂಗಳಲ್ಲಿ ಭಾರತದಲ್ಲೂ ಸಿಗಲಿದೆ ಕೊರೊನಾ ಲಸಿಕೆ
ಬೆಂಗಳೂರು: ಜನರಿಗೆ ನರಕ ದರ್ಶನ ಮಾಡಿಸಿದ್ದ ಮಹಾಮಾರಿ ಕೊರೊನಾಗೆ ತಿಲಾಂಜಲಿ ಇಡುವ ಸಮಯ ಬಂದಿದೆ. 2021ರ ಜುಲೈ ಅಂತ್ಯದೊಳಗೆ ಭಾರತದಲ್ಲೂ ಕೊರೊನಾ ಲಸಿಕೆ ಸಿಗಲಿದೆ. ಮುಂದಿನ 9 ತಿಂಗಳ ಅವಧಿಯಲ್ಲಿ 25 ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತೆ. ನವೆಂಬರ್ 2ರಿಂದಲೇ ವಿತರಣೆ, ಎಲ್ಲಿ? ಈಗಾಗಲೇ ನವೆಂಬರ್ 2ರಿಂದ ಆಕ್ಸ್ ಫರ್ಡ್ ವಿವಿ ಹಾಗೂ ಆಸ್ಟ್ರಾಜೆನೆಕಾ ಕಂಪನಿ ಜೊತೆಗೂಡಿ ಅಭಿವೃದ್ಧಿ ಪಡಿಸಿರುವ ಲಸಿಕೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಲಂಡನ್ನ ಪ್ರಮುಖ ಆಸ್ಪತ್ರೆಗಳಿಗೆ ಆಕ್ಸ್ ಫರ್ಡ್ ವಿವಿ ಸೂಚನೆ […]
ಬೆಂಗಳೂರು: ಜನರಿಗೆ ನರಕ ದರ್ಶನ ಮಾಡಿಸಿದ್ದ ಮಹಾಮಾರಿ ಕೊರೊನಾಗೆ ತಿಲಾಂಜಲಿ ಇಡುವ ಸಮಯ ಬಂದಿದೆ. 2021ರ ಜುಲೈ ಅಂತ್ಯದೊಳಗೆ ಭಾರತದಲ್ಲೂ ಕೊರೊನಾ ಲಸಿಕೆ ಸಿಗಲಿದೆ. ಮುಂದಿನ 9 ತಿಂಗಳ ಅವಧಿಯಲ್ಲಿ 25 ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತೆ.
ನವೆಂಬರ್ 2ರಿಂದಲೇ ವಿತರಣೆ, ಎಲ್ಲಿ? ಈಗಾಗಲೇ ನವೆಂಬರ್ 2ರಿಂದ ಆಕ್ಸ್ ಫರ್ಡ್ ವಿವಿ ಹಾಗೂ ಆಸ್ಟ್ರಾಜೆನೆಕಾ ಕಂಪನಿ ಜೊತೆಗೂಡಿ ಅಭಿವೃದ್ಧಿ ಪಡಿಸಿರುವ ಲಸಿಕೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಲಂಡನ್ನ ಪ್ರಮುಖ ಆಸ್ಪತ್ರೆಗಳಿಗೆ ಆಕ್ಸ್ ಫರ್ಡ್ ವಿವಿ ಸೂಚನೆ ನೀಡಿದೆ. ಅದರಂತೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಮುಂದಿನ ವರ್ಷ ಜುಲೈ ಒಳಗೆ 25 ಕೋಟಿ ಮಂದಿಗೆ ಎರಡು ಡೋಸ್ ನಂತೆ 50 ಕೋಟಿ ಲಸಿಕೆ ನೀಡಲು ಸರಕಾರ ಸಜ್ಜಾಗುತ್ತಿದೆ ಎಂದಿದ್ದಾರೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಜಾಗತಿಕ ವ್ಯಾಕ್ಸಿನೇಶನ್ ಕಾರ್ಯಕ್ರಮದ ಜೊತೆಗೇ ಹೊಸ ಲಸಿಕೆ ನೀಡುವಿಕೆ ನಡೆಯಲಿದೆ.
ಈ ಪ್ರಕ್ರಿಯೆಗೆ ಆಧಾರ್ ಅನ್ನು ಜೋಡಿಸಲಾಗುತ್ತದೆ. ಆರಂಭದಲ್ಲಿ ಲಸಿಕೆ ನೀಡಬೇಕಾದ 25 ಕೋಟಿ ಮಂದಿಯನ್ನು ಗುರುತಿಸುವ ಉಪಕ್ರಮ ನಡೆದಿದೆ. ಈ ಸಂಬಂಧ, ನಾಲ್ಕು ವರ್ಗೀಕರಣಗಳನ್ನು ಸರಕಾರ ಮಾಡಿಕೊಂಡಿದೆ:
ಮೊದಲ ಹಂತದಲ್ಲಿ.. ಸುಮಾರು ಒಂದು ಕೋಟಿಯಷ್ಟು ಆರೋಗ್ಯ ಸೇವಾ ಸಿಬ್ಬಂದಿ, ಆಶಾ ಕಾರ್ಯಕರ್ತರಿಗೆ. ಎರಡನೇ ಹಂತದಲ್ಲಿ.. ಪೊಲೀಸ್, ಸೈನ್ಯ, ಮುನ್ಸಿಪಲ್ ಸಿಬ್ಬಂದಿ ಸೇರಿದಂತೆ ಮುಂಚೂಣಿ ಸಿಬ್ಬಂದಿಗೆ. ಮೂರನೇ ಹಂತದಲ್ಲಿ.. ಸುಮಾರು 26 ಕೋಟಿಯಷ್ಟಿರುವ 50 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ನಾಲ್ಕನೇ ಹಂತದಲ್ಲಿ.. 50 ವರ್ಷ ಕೆಳಗಿನ ಆದರೆ ಗಂಭೀರ ಆರೋಗ್ಯ ಸಮಸ್ಯೆಗಳಿರುವವರಿಗೆ ಹೀಗೆ ಆದ್ಯತೆಯ ಮೇರೆಗೆ 4 ಹಂತಗಳನ್ನು ಮಾಡಿಕೊಂಡು, ನೀಡಲಾಗುತ್ತೆ.
ಇನ್ನು ಈ ಬಗ್ಗೆ ಟಿವಿ9ಜೊತೆ ಮಾತನಾಡಿದ ಆರೋಗ್ಯ ಖಾತೆ ಸಚಿವ ಡಾ. ಸುಧಾಕರ್, ಇಂದು ಅಧಿಕಾರಿಗಳ ಜತೆ ಸಭೆ ನಡೆಸುತ್ತೇನೆ. ಈಗಾಗಲೇ ಕೇಂದ್ರ ಆರೋಗ್ಯ ಸಚಿವರೂ ಈ ಬಗ್ಗೆ ಸೂಚಿಸಿದ್ದಾರೆ. ವ್ಯಾಕ್ಸಿನ್ ಬಂದ ಕೂಡಲೇ ಹೇಗೆ ವಿತರಣೆ ಮಾಡಬೇಕು. ಯಾವ ಪ್ರಮಾಣದಲ್ಲಿ ಇರಬೇಕು. ಮೊದಲು ಯಾರಿಗೆ ವ್ಯಾಕ್ಸಿನ್ ನೀಡಬೇಕೆಂದು ಚರ್ಚಿಸುತ್ತಿದ್ದೇವೆ ಎಂದಿದ್ದಾರೆ. ಜೊತೆಗೆ ಕೊರೊನಾ ವಾರಿಯರ್ಸ್, 65 ವರ್ಷಕ್ಕಿಂತ ಮೇಲ್ಪಟ್ಟವರು, ಹೃದಯ ಸಂಬಂಧಿ ಕಾಯಿಲೆ, ಶುಗರ್, ಕಿಡ್ನಿ, ಅಸ್ತಮಾ ಸೇರಿ ಇತರೆ ಕಾಯಿಲೆ ಇರುವವರಿಗೆ ಲಸಿಕೆ ಮೊದಲ ಆದ್ಯತೆಯಲ್ಲಿ ನೀಡಲಾಗುತ್ತೆ ಎಂದು ಹೇಳಿದ್ರು.
ಇದನ್ನೂ ಓದಿ: ಕೊರೊನಾ ಸಂಹಾರಕ್ಕೆ ಸಿದ್ಧವಾಯ್ತು ಅಸ್ತ್ರ, ನವೆಂಬರ್ 2ರಿಂದ ಇಂಗ್ಲೆಂಡ್ ಆಸ್ಪತ್ರೆ ಸಿಬ್ಬಂದಿಗೆ ಔಷಧಿ
Published On - 12:22 pm, Tue, 27 October 20