ಅಯೋಧ್ಯೆಯಲ್ಲಿ ವಾಲ್ಮೀಕಿ ಮಹರ್ಷಿ ಪುತ್ಥಳಿ, ದೇಗುಲ -ಪ್ರಧಾನಿ ಮೋದಿಗೆ ಸಂಸದ ನಾಯ್ಕ್ ಪತ್ರ
ದೆಹಲಿ: ಅಯೋಧ್ಯೆಯ ರಾಮ ಮಂದಿರದ ಜೊತೆಗೆ ರಾಮಾಯಣ ಮಹಾಗ್ರಂಥದ ರಚನೆಕಾರರಾದ ಆದಿಕವಿ ವಾಲ್ಮೀಕಿ ಮಹರ್ಷಿಗಳ ಗೌರವಾರ್ಥವಾಗಿ ಅಯೋಧ್ಯೆಯಲ್ಲಿ ದೇವಸ್ಥಾನವೊಂದನ್ನು ನಿರ್ಮಾಣ ಮಾಡುವಂತೆ ರಾಯಚೂರು ಸಂಸದ ರಾಜಾ ಅಮರೇಶ್ವರ್ ನಾಯ್ಕ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ವಿಜಯದಶಮಿಯ ಅಂಗವಾಗಿ ಪ್ರಧಾನಿಗೆ ಶುಭಕೋರಿ ಪತ್ರ ಬರೆದಿದ್ದ ಸಂಸದ ವಾಲ್ಮೀಕಿ ಮಹರ್ಷಿಗಳ ಸ್ವರಣಾರ್ಥ ಒಂದು ಪುತ್ಥಳಿಯನ್ನು ಸಹ ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ವಾಲ್ಮೀಕಿ ಸಮುದಾಯದ ಮಠಾಧೀಶರ ಹಾಗೂ ಸಮುದಾಯದ ಜನರಿಂದ ಈ ಕೂಗು ಕೇಳಿಬರುತ್ತಿದೆ. ಹಾಗಾಗಿ, ಅವರ ಪರವಾಗಿ […]
ದೆಹಲಿ: ಅಯೋಧ್ಯೆಯ ರಾಮ ಮಂದಿರದ ಜೊತೆಗೆ ರಾಮಾಯಣ ಮಹಾಗ್ರಂಥದ ರಚನೆಕಾರರಾದ ಆದಿಕವಿ ವಾಲ್ಮೀಕಿ ಮಹರ್ಷಿಗಳ ಗೌರವಾರ್ಥವಾಗಿ ಅಯೋಧ್ಯೆಯಲ್ಲಿ ದೇವಸ್ಥಾನವೊಂದನ್ನು ನಿರ್ಮಾಣ ಮಾಡುವಂತೆ ರಾಯಚೂರು ಸಂಸದ ರಾಜಾ ಅಮರೇಶ್ವರ್ ನಾಯ್ಕ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ವಿಜಯದಶಮಿಯ ಅಂಗವಾಗಿ ಪ್ರಧಾನಿಗೆ ಶುಭಕೋರಿ ಪತ್ರ ಬರೆದಿದ್ದ ಸಂಸದ ವಾಲ್ಮೀಕಿ ಮಹರ್ಷಿಗಳ ಸ್ವರಣಾರ್ಥ ಒಂದು ಪುತ್ಥಳಿಯನ್ನು ಸಹ ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ವಾಲ್ಮೀಕಿ ಸಮುದಾಯದ ಮಠಾಧೀಶರ ಹಾಗೂ ಸಮುದಾಯದ ಜನರಿಂದ ಈ ಕೂಗು ಕೇಳಿಬರುತ್ತಿದೆ. ಹಾಗಾಗಿ, ಅವರ ಪರವಾಗಿ ನಾನು ನಿಮಗೆ ಮನವಿ ಮಾಡುತ್ತೇನೆ ಎಂದು ಸಂಸದ ರಾಜಾ ಅಮರೇಶ್ವರ್ ನಾಯ್ಕ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.