ಬೆಂಗಳೂರು: ಹಲವಾರು ಪಾತಕ ಕೃತ್ಯಗಳಿಂದಾಗಿ ಭಾರತಕ್ಕೆ ತಲೆನೋವಾಗಿದ್ದ ರವಿ ಪೂಜಾರಿಯ ಬಂಧನವಾಗಿದೆ. ಅಲ್ಲದೆ ಹೆಚ್ಚಿನ ವಿಚಾರಣೆಗಾಗಿ ರವಿ ಪೂಜಾರಿಯನ್ನು ನಮ್ಮ ವಶಕ್ಕೆ ನೀಡಬೇಕೆಂದು ಮುಂಬೈ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ಆದರೆ ತನ್ನನ್ನು ಮುಂಬೈ ಪೊಲೀಸರ ವಶಕ್ಕೆ ನೀಡದಂತೆ ಹೈಕೋರ್ಟ್ಗೆ ಪಾತಕಿ ರವಿ ಪೂಜಾರಿಯಿಂದ ರಿಟ್ ಅರ್ಜಿ ಸಲ್ಲಿಸಲಾಗಿದೆ.
ಪಾತಕಿ ರವಿ ಪೂಜಾರಿಯನ್ನು ವಿಚಾರಣೆಗಾಗಿ ನಮಗೆ ಒಪ್ಪಿಸಬೇಕೆಂದು ಮುಂಬೈ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದರಿಂದ ಹೆದರಿರುವ ಪಾತಕಿ ರವಿ ಪೂಜಾರಿ ಕರ್ನಾಟಕದ ಕೇಸ್ಗಾಗಿ ಮಾತ್ರವೇ ತನ್ನನ್ನು ಹಸ್ತಾಂತರಿಸಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ತನಿಖೆಗೆ ಅವಕಾಶವಿದೆ. ಆದರೂ ಬೆಂಗಳೂರಿನ ಕೋರ್ಟ್ ರಿಮಾಂಡ್ ನೀಡಿದೆ. ಅಲ್ಲದೆ ವಿರೋಧಿಗಳು, ಶತೃಗಳಿಂದ ತನಗೆ ಜೀವಭಯವಿದೆ. ಹೀಗಾಗಿ ಮುಂಬೈ ಪೊಲೀಸರ ವಶಕ್ಕೆ ನೀಡದಂತೆ ಸೆಷನ್ಸ್ ಕೋರ್ಟ್ ಆದೇಶ ರದ್ದುಪಡಿಸುವಂತೆ ಪಾತಕಿ ರವಿ ಪೂಜರಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾನೆ.