Rekha Kadiresh: ರೇಖಾಳ ಸೇಫ್ಟಿಗಾಗಿ ರಿವಾಲ್ವರ್ ಖರೀದಿಸಿದ್ದ ಕದಿರೇಶ್.. ಇದನ್ನ ಮರಿತದ್ದೆ ದೊಡ್ಡ ಅನಾಹುತವಾಯ್ತು

ರೇಖಾ ಕದಿರೇಶ್ ಲೋಡೆಡ್ ರಿವಾಲ್ವರ್ ಹೊಂದಿದ್ದರು. ಪತಿ ಕದಿರೇಶ್ ಪತ್ನಿಗಾಗಿ ಲೈಸೆನ್ಸ್ ರಿವಾಲ್ವರ್ ಕೊಡಿಸಿದ್ದರು. ಹಾಗೂ ಅದರ ಬಳಕೆಗೆ ತರಬೇತಿ ಸಹ ಕೊಡಿಸಿದ್ದರು.

Rekha Kadiresh: ರೇಖಾಳ ಸೇಫ್ಟಿಗಾಗಿ ರಿವಾಲ್ವರ್ ಖರೀದಿಸಿದ್ದ ಕದಿರೇಶ್.. ಇದನ್ನ ಮರಿತದ್ದೆ ದೊಡ್ಡ ಅನಾಹುತವಾಯ್ತು
ಕದಿರೇಶ್ ದಂಪತಿ
Follow us
TV9 Web
| Updated By: ಆಯೇಷಾ ಬಾನು

Updated on: Jul 04, 2021 | 11:04 AM

ಬೆಂಗಳೂರು: ಹಾಡಹಗಲೇ ಚಾಕುವಿನಿಂದ ಕೊಚ್ಚಿ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಈಗಾಗಲೇ ಏಳು ಜನರನ್ನು ಬಂಧಿಸಲಾಗಿದೆ. ದಿನದಿಂದ ದಿನಕ್ಕೆ ಈ ಪ್ರಕರಣ ಸಂಬಂಧ ರೋಚಕ ಸಂಗತಿಗಳು ಬಯಲಾಗುತ್ತಿವೆ. ಸದ್ಯ ತನ್ನ ಪತ್ನಿಯ ಸೇಫ್ಟಿಗಾಗಿ ಮೃತ ಕದಿರೇಶ್ ರಿವಾಲ್ವರ್ ಖರೀದಿಸಿ ಆಕೆಗೆ ರಿವಾಲ್ವರ್ ಬಳಕೆ ತರಬೇತಿ ಸಹ ಕೊಡಿಸಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.

ರೇಖಾ ಕದಿರೇಶ್ ಲೋಡೆಡ್ ರಿವಾಲ್ವರ್ ಹೊಂದಿದ್ದರು. ಪತಿ ಕದಿರೇಶ್ ಪತ್ನಿಗಾಗಿ ಲೈಸೆನ್ಸ್ ರಿವಾಲ್ವರ್ ಕೊಡಿಸಿದ್ದರು. ಹಾಗೂ ಅದರ ಬಳಕೆಗೆ ತರಬೇತಿ ಸಹ ಕೊಡಿಸಿದ್ದರು. ರೇಖಾ ಕದಿರೇಶ್ ಸುರಕ್ಷತೆಗೆ 20 ಜನರ ತಂಡ ಸಹ ಇತ್ತು. ಆದರೆ 2018ರಲ್ಲಿ ಕದಿರೇಶ್ ಹತ್ಯೆ ಬಳಿಕ 20 ಜನರ ತಂಡ ಹಂತ ಹಂತವಾಗಿ ಛಿದ್ರವಾಗಿತ್ತು. ರೇಖಾಳ ಹತ್ಯೆ ದಿನ ರಿವಾಲ್ವರ್ ಮನೆಯಲ್ಲಿಯೇ ಇಟ್ಟಿದ್ದರು. ರೇಖಾ ತನ್ನ ಬಳಿ ರಿವಲ್ವಾರ್ ತಂದಿದ್ದರೆ ಆರೋಪಿಗಳಿಗೆ ಹತ್ಯೆ ಮಾಡುವುದು ಸುಲಭವಾಗುತ್ತಿರಲಿಲ್ಲ.

ಕದಿರೇಶ್ ಕೊಲೆ ಮಾಡಿದವರಿಗಾಗಿ ಹೊಂಚು ಪೀಟರ್ ಕದಿರೇಶ್ನ ಪಕ್ಕ ಶಿಷ್ಯನಾಗಿದ್ದ. ಹೀಗಾಗಿ ಕದಿರೇಶ್ ಕೊಲೆಗೆ ಪ್ರತೀಕಾರವಾಗಿ ಮೂರು ಜನರನ್ನು ಕೊಲೆ ಮಾಡಲು ಪೀಟರ್ ತೀರ್ಮಾನಿಸಿದ್ದ. ಕದಿರೇಶ್ ಹತ್ಯೆಗೆ ಕಾರಣವಾಗಿದ್ದು ಗಾರ್ಡನ್ ಶಿವ, ನವೀನ್ ಮತ್ತು ವಿನಯ್ ಎಂಬ ಮೂವರು. ಜೋಪಡಿ ರಾಜೇಂದ್ರನ ಹತ್ಯೆಗೆ ಪ್ರತಿಕಾರವಾಗಿ ಗಾರ್ಡನ್ ಶಿವನ ಅಕ್ಕನ ಮಕ್ಕಳಾದ ನವೀನ್ ಮತ್ತು ವಿನಯ್ ಸೇರಿ ಕದಿರೇಶ್ನ ಕೊಂದಿದ್ರು. ಹೀಗಾಗಿ ಕದಿರೇಶ್ ಹತ್ಯೆಗೆ ಕಾರಣರಾದವರನ್ನ ಮುಗಿಸಲು ಪೀಟರ್ ಹಲ್ಲು ಮಸೆಯುತ್ತಿದ್ದ. ಗಾರ್ಡನ್ ಶಿವ, ವಿನಯ್, ನವೀನ್ ಕೊಲೆ ಮಾಡಬೇಕು ಎಂದು ಪೀಟರ್ & ಟೀಂ ತಯಾರಿ ಮಾಡಿಕೊಳ್ಳುತ್ತಿತ್ತು.

ಕದಿರೇಶ್ನನ್ನು ಕೊಂದವರನ್ನು ಕೊಲೆ ಮಾಡಬೇಕು ಸಹಾಯ ಮಾಡು ಎಂದು ಮೊದಲು ಪೀಟರ್, ರೇಖಾಳನ್ನೆ ಕೇಳಿದ್ದ. ಅಣ್ಣ ಕದಿರೇಶ್ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡಬೇಕು ಸಹಾಯ ಮಾಡಿ ಎಂದು ರೇಖಾರನ್ನು ಬೇಡಿಕೊಂಡಿದ್ದ. ಅದ್ರೆ ಇದಕ್ಕೆ ರೇಖಾ ತಾನು ಯಾವುದೆ ಸಹಕಾರ ಕೊಡಲ್ಲಾ ಎಂದಿದ್ರು. ರೌಡಿಸಂ ಐಡಿಯಾ ಇಲ್ಲದ ರೇಖಾ, ಪೀಟರ್ ಮನವಿಯನ್ನ ತಿರಸ್ಕರಿಸಿದ್ದರು. ಈ ವಿಚಾರಕ್ಕೆ ರೇಖಾ ಮೇಲೆ ಪೀಟರ್ಗೆ ಕೋಪವಿತ್ತು. ಇದೆ ಸಮಯದಲ್ಲಿ ಅರೂಣ್ ಕಳೆದ ನಾಲ್ಕು ತಿಂಗಳ ಹಿಂದೆ ಜೈಲಿನಿಂದ ಹೊರಬಂದಿದ್ದ.

ಜೈಲಿನಿಂದ ಹೊರ ಬಂದು ಕದಿರೇಶ್ ಕೊಲೆಗೆ ರೇಖಾ ಕಾರಣ ಎಂದಿದ್ದ. ಆಕೆ ಕದಿರೇಶ್ ಕೊಲೆ ಮಾಡಲು ನವೀನ್, ವಿನಯ್ಗೆ ಸಹಾಯ ಮಾಡಿದ್ದಾಳೆ ಎಂದಿದ್ದ. ಅರೂಣ್ ಮತ್ತು ಮಾಲಾ 4 ತಿಂಗಳ ಹಿಂದೆ ಪೀಟರ್ ಅಂಡ್ ಟೀಮ್ ಜೊತೆ ಮೀಟಿಂಗ್ ಮಾಡಿದ್ದರು. ಮೀಟಿಂಗ್ನಲ್ಲಿ ಪೀಟರ್, ಗಾರ್ಡನ್ ಶಿವನ ಬಗ್ಗೆ ಹೇಳಿದ್ದ. ಅದೇ ಮೀಟಿಂಗ್ನಲ್ಲಿ ಅರೂಣ್ ರೇಖಾ ಬಗ್ಗೆ ಕೂಡ ಸ್ಕೆಚ್ ಹಾಕಿದ್ದ. ಗಾರ್ಡನ್ ಶಿವ ಮತ್ತು ವಿನಯ್ ರನ್ನ ನಂತ್ರ ಮುಗಿಸೋಣ. ಮೊದಲು ರೇಖಾಳನ್ನ ಮುಗಿಸೋಣ ಎಂದು ಮಾತನಾಡಿ ಮೀಟಿಂಗ್ ಮುಗಿಸಿದ್ರು. ಹಲವು ದಿನಗಳ ಕಾಲ ರೇಖಾಳ ದಿನಚರಿ ಅವರು ಯಾವಾಗ ಒಂಟಿಯಾಗಿರುತ್ತಾರೆ ಎಂದು ಗಮನಿಸಿದ್ರು. ಊಟ ನೀಡಿ ವಾಪಸ್ಸು ಹೋಗುವ ಸಮಯದಲ್ಲಿ ಜನರು ಕಡಿಮೆ ಇರ್ತಾರೆ ಅವಾಗ ಕೊಲೆ ಮಾಡೋದು ಎಂದು ಪ್ಲಾನ್ ಫಿಕ್ಸ್ ಮಾಡಿದ್ರು. ಈ ರೀತಿ ಮೃತ ಕದಿರೇಶ್ ಪತ್ನಿ ರೇಖಾ ಕದಿರೇಶ್ರ ಕೊಲೆ ಮಾಡಲಾಗಿದೆ. ಈ ಕೊಲೆಯ ಬಳಿಕ ನಗರದಲ್ಲಿ ಮತ್ತೆ ಮೂರು ಕೊಲೆ ನಡೆಯುವ ಸಾಧ್ಯತೆ ಇತ್ತು. ಸದ್ಯ ಪೊಲೀಸರ ತನಿಖೆಯಿಂದ ಈ ಮೂವರ ಕೊಲೆ ಬಗ್ಗೆ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ:Rekha Kadiresh Murder ರೇಖಾ ನಾದಿನಿ ಮಾಲಾಳ ಹಿಸ್ಟರಿ ರೀ ಓಪನ್.. ಜೋಪಡಿ ರಾಜೇಂದ್ರ ಕೊಲೆಯಲ್ಲೂ ಈಕೆ ಆರೋಪಿ 

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ