ಬೆಂಗಳೂರು: ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗುತ್ತಿದ್ದಂತೆ ರೆಮ್‌ಡಿಸಿವಿರ್ ಬೇಡಿಕೆ ಹೆಚ್ಚಾಯಿತು. ಇದರ ಲಾಭ ಪಡೆದು ಅಕ್ರಮವಾಗಿ ರೆಮ್‌ಡಿಸಿವಿರ್ ಮಾರಾಟ ಮಾಡಿ ಹಣ ಮಾಡಿಕೊಳ್ಳಲು ಅನೇಕ ಮಂದಿ ಮುಂದಾಗಿದ್ದು ಈ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.
ರೆಮ್‌ಡಿಸಿವಿರ್ ಹಂಚಿಕೆಯಲ್ಲಿ ಪಾರದರ್ಶಕತೆ ತರಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ರೆಮ್‌ಡಿಸಿವಿರ್ ಹಂಚಿಕೆಯಲ್ಲಿ ಪಾರದರ್ಶಕತೆ ತರಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಲಾಗಿದ್ದು ಸೋಂಕಿತ ವ್ಯಕ್ತಿಯ ಹೆಸರಿನಲ್ಲಿ ಯಾವ ಆಸ್ಪತ್ರೆಗೆ ಔಷಧ ಹಂಚಿಕೆ ಮಾಡಲಾಗಿದೆ ಎಂದು SMS ಕಳುಹಿಸಲಾಗುತ್ತದೆ.
ಸಾರ್ವಜನಿಕರು ಈ ಲಿಂಕ್ ಮೂಲಕ ತಮಗೆ ಹಂಚಿಕೆಯಾಗಿರುವ ಔಷಧದ ಬಗ್ಗೆ ಮಾಹಿತಿ ಪಡೆಯಬಹುದು. ಒಂದು ವೇಳೆ ಸೋಂಕಿತರ SRF IDಗೆ ರೆಮ್‌ಡಿಸಿವಿರ್ ಔಷಧ ಹಂಚಿಕೆಯಾಗಿ
ಆಸ್ಪತ್ರೆ ಅದನ್ನು ಆ ವ್ಯಕ್ತಿ ಚಿಕಿತ್ಸೆಗೆ ಒದಗಿಸದಿದ್ದಲ್ಲಿ ಈ ಬಗ್ಗೆ ಇದೇ ಲಿಂಕ್ ಮೂಲಕ ಸರ್ಕಾರಕ್ಕೆ ವರದಿ ಮಾಡಲು ವ್ಯವಸ್ಥೆ ಮಾಡಲಾಗಿದೆ. covidwar.karnataka.gov.in/service2 ಮೂಲಕ ದೂರು ಸಲ್ಲಿಸಬಹುದಾಗಿದೆ. ಈ ಪಾರದರ್ಶಕ ವ್ಯವಸ್ಥೆಯಿಂದ ಕಾಳಸಂತೆಯಲ್ಲಿ ಮಾರಾಟ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋಣ ಎಂದು ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
In case if the #Remdesivir is allocated against the SRF ID & the hospital has not provided it to the patient, a facility is provided in the same link to report it to the government.
This will help govt in curbing blackmarketing & misuse of Remdesivir.https://t.co/jSFve4Kcig
— Dr Sudhakar K (@mla_sudhakar) May 23, 2021
ಗದಗದಲ್ಲಿ ಬ್ಲ್ಯಾಕ್ ಮಾರ್ಕೆಟ್ನಲ್ಲಿ ರೆಮ್ಡಿಸಿವಿರ್ ಮಾರಾಟ ಜಾಲ
ಇನ್ನು ಗದಗ ಜಿಲ್ಲೆಯಲ್ಲಿ ನಾಲ್ವರು ದಂಧೆಕೋರರನ್ನು ಬಂಧಿಸಲಾಗಿದೆ. ಗದಗ ವೈದ್ಯಕೀಯ ಕಾಲೇಜು ಆಸ್ಪತ್ರೆ ಲ್ಯಾಬ್ಟೆಕ್ನಿಷಿಯನ್, ಗದಗದ ಖಾಸಗಿ ಆಸ್ಪತ್ರೆಯ ಇಬ್ಬರು ನರ್ಸ್ಗಳಾಗಿರುವ ಮೊಹಮ್ಮದ್ ಇಸ್ಮಾಯಿಲ್, ಫಿರೋಜ್ ಖಾನ್, ರಮೇಶ್, ಗವಿಸಿದ್ದಯ್ಯನನ್ನು ಸೇರಿ ನಾಲ್ವರನ್ನು CEN ಠಾಣೆ ಪೊಲೀಸರು ಅರೆಸ್ಟ್ ಮಾಡಿಲಾಗಿದೆ.
ತಲೆ ಮರೆಸಿಕೊಂಡಿರುವ ನರ್ಸ್ ಜ್ಯೋತಿಗಾಗಿ ಹುಡುಕಾಟ ನಡೆಯುತ್ತಿದೆ. ಬಂಧಿತರಿಂದ 14 ರೆಮ್ಡಿಸಿವಿರ್ ಇಂಜೆಕ್ಷನ್ ವಶಕ್ಕೆ ಪಡೆಯಲಾಗಿದೆ. ಜಿಮ್ಸ್ ಆಸ್ಪತ್ರೆಯಲ್ಲಿ ರೆಮ್ಡಿಸಿವಿರ್ ಕದ್ದು 1 ರೆಮ್ಡಿಸಿವಿರ್ ಇಂಜೆಕ್ಷನ್ 30,000 ರೂ.ಗೆ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ಗದಗ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಾಳಸಂತೆಯಲ್ಲಿ ನಕಲಿ ರೆಮ್ಡಿಸಿವಿರ್ ಮಾರಾಟ ಪ್ರಕರಣ; ಮಾತೃ ಆಸ್ಪತ್ರೆಗೆ ನೋಟಿಸ್