ಅಸಾಮಾನ್ಯ ಪಾಂಡಿತ್ಯದ ಖನಿ ಬನ್ನಂಜೆ ಗೋವಿಂದಾಚಾರ್ಯ

ಅತಿಸೂಕ್ಷ್ಮ ಶಾಸ್ತ್ರ ವಿಷಯಗಳನ್ನು ಅತ್ಯಾಕರ್ಷಕವಾಗಿ, ಸರಳ ಕನ್ನಡದಲ್ಲಿ ವಿವರಿಸುತ್ತಿದ್ದ ಆಚಾರ್ಯರು ತಮ್ಮ ಉಪನ್ಯಾಸ ಮಾಲಿಕೆಗಳ ಮೂಲಕ ಜನಸಾಮಾನ್ಯರ ಆಧ್ಯಾತ್ಮ ಜಿಜ್ಞಾಸೆಗಳನ್ನು ತಣಿಸುತ್ತಿದ್ದರು.

ಅಸಾಮಾನ್ಯ ಪಾಂಡಿತ್ಯದ ಖನಿ ಬನ್ನಂಜೆ ಗೋವಿಂದಾಚಾರ್ಯ
ಬನ್ನಂಜೆ ಗೋವಿಂದಾಚಾರ್ಯ
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 13, 2020 | 3:02 PM

ಉಡುಪಿ: ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಅದ್ಭುತ ವಿದ್ವತ್ತು, ಅಪ್ರತಿಮ ಪಾಂಡಿತ್ಯದ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಭಾನುವಾರ (ಡಿಸೆಂಬರ್13, 2020) ನಿಧನರಾಗಿದ್ದಾರೆ. ಅತಿಸೂಕ್ಷ್ಮ ಶಾಸ್ತ್ರ ವಿಷಯಗಳನ್ನು ಅತ್ಯಾಕರ್ಷಕವಾಗಿ, ಸರಳ ಕನ್ನಡದಲ್ಲಿ ವಿವರಿಸುತ್ತಿದ್ದ ಆಚಾರ್ಯರು ತಮ್ಮ ಉಪನ್ಯಾಸ ಮಾಲಿಕೆಗಳ ಮೂಲಕ ಜನಸಾಮಾನ್ಯರ ಆಧ್ಯಾತ್ಮ ಜಿಜ್ಞಾಸೆಗಳನ್ನು ತಣಿಸುತ್ತಿದ್ದರು. ಅವರ ಬದುಕಿನ ವಿವರ, ಪ್ರಮುಖ ಕೃತಿಗಳ ಪರಿಚಯ ಇಲ್ಲಿದೆ.

ಆಗಸ್ಟ್ 3, 1936ರಂದು ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ತರ್ಕ ಕೇಸರಿ ನಾರಾಯಣಾಚಾರ್ಯರ ಮಗನಾಗಿ ಬನ್ನಂಜೆ ಗೋವಿಂದಚಾರ್ಯರು ಜನಿಸಿದರು. ಅಪ್ಪನಿಂದಲೇ ವೈದಿಕ ಶಿಕ್ಷಣ, ವಿದ್ಯಾಮಾನ್ಯ ತೀರ್ಥ ಸ್ವಾಮೀಜಿ ಮತ್ತು ವಿದ್ಯಾ ಸಮುದ್ರ ತೀರ್ಥರಲ್ಲಿ ಶಾಸ್ತ್ರಾಭ್ಯಾಸ ನಡೆಯಿತು.

ಇದನ್ನೂ ಓದಿ: ಬನ್ನಂಜೆ ಗೋವಿಂದಾಚಾರ್ಯ ನಿಧನ

ಬಾಣಭಟ್ಟನ ಕಾದಂಬರಿ, ಕಾಳೀದಾಸನ ಶಾಕುಂತಲ, ಶೂದ್ರಕನ ಮೃಚ್ಛಕಟಿಕ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ತ್ರಿವಿಕ್ರಮಾಚಾರ್ಯ ದಾಸರ ‘ಆನ೦ದಮಾಲಾ’, ತ್ರಿವಿಕ್ರಮ ಪ೦ಡಿತಾಚಾರ್ಯರ ‘ವಾಯುಸ್ತುತಿ’ ಮತ್ತು ‘ವಿಷ್ಣುಸ್ತುತಿ’, ಮಧ್ವಾಚಾರ್ಯರ ಮಹಾಭಾರತದ ತಾತ್ಪರ್ಯದ ‘ಯಮಕ ಭಾರತ’ ಮತ್ತು ‘ಭಾಗವತ ತಾತ್ಪರ್ಯ’ ಕೃತಿಗಳಿಗೆ ವಿದ್ವತ್ಪೂರ್ಣ ಟಿಪ್ಪಣಿಗಳನ್ನು ರಚಿಸಿದ್ದಾರೆ.

ವೇದ ಸೂಕ್ತಗಳಾದ ಪುರುಷಸೂಕ್ತ, ಶ್ರೀಸೂಕ್ತ, ಪ್ರಸ್ಥಾನ ತ್ರಯಗಳಲ್ಲಿ ಒಂದಾದ ಭಗವದ್ಗೀತೆ, ನಾರಾಯಣ ಪಂಡಿತಾಚಾರ್ಯರ ಶಿವಸ್ತುತಿ, ತ್ರಿವಿಕ್ರಮ ಪಂಡಿತಾಚಾರ್ಯರ ನರಸಿಂಹಸ್ತುತಿ, ಮಧ್ವಾಚಾರ್ಯರ ತಂತ್ರಸಾರ ಸಂಗ್ರಹ ಕೃತಿಗಳನ್ನು ಟಿಪ್ಪಣಿ ಸಹಿತ ಕನ್ನಡಕ್ಕೆ ಅನುವಾದಿಸಿದ್ದಾರೆ.

‘ಉಡುಪಿಯ ಕೃಷ್ಣನ ಕಂಡಿರಾ…’ ಬನ್ನಂಜೆಯವರ ಪ್ರಸಿದ್ಧ ಕನ್ನಡ ಕೀರ್ತನೆ. ಜಿ.ವಿ. ಅಯ್ಯರ್ ನಿರ್ದೇಶನದ ಶ್ರೀಶಂಕರಾಚಾರ್ಯ, ಶ್ರೀಮಧ್ವಾಚಾರ್ಯ ಮತ್ತು ಶ್ರೀರಾಮಾನುಜಾಚಾರ್ಯ ಸಂಸ್ಕೃತ ಚಲನಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ.

ಪದ್ಮಶ್ರೀ ಪ್ರಶಸ್ತಿ, ಅನುವಾದಕ್ಕಾಗಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಣಿಪಾಲದ ಪ್ರತಿಷ್ಠಿತ ವಿದ್ಯಾ ಸಮೂಹದ ಫೆಲೋಶಿಪ್, ಅದಮಾರು ಪೀಠದಿಂದ ವಿದ್ಯಾವಾಚಸ್ಪತಿ ಬಿರುದು, ಪಲಿಮಾರು ಮಠದಿಂದ ಪ್ರತಿಭಾಂಬುದಿ ಬಿರುದು, ಅಖಿಲ ಭಾರತ ಮಾಧ್ವಮಹಾ ಮಂಡಲದಿಂದ ಶಾಸ್ತ್ರ ಸವ್ಯಸಾಚಿ, ಕಬೀರಾನಂದ ಆಶ್ರಮದ ಆರೂಢಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿದ್ದವು.

1979ರಲ್ಲಿ ಅಮೆರಿಕಾದ ಪ್ರಿನ್ಸ್​ಸ್ಟನ್​ನಲ್ಲಿ ನಡೆದ ‘ವರ್ಲ್ಡ್ ಕಾನ್ವರೆನ್ಸ್ ಆನ್ ರಿಲಿಜನ್ ಅಂಡ್ ಪೀಸ್’ (ವಿಶ್ವ ಧಾರ್ಮಿಕ ಮತ್ತು ಶಾಂತಿ) ಸಮ್ಮೇಳನದಲ್ಲಿ ಭಾಗಿಯಾಗಿದ್ದರು.

ವಿದ್ಯಾವಾಚಸ್ಪತಿ, ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯ ವಿಧಿವಶ

ಒಡನಾಡಿಯ ನೆನಪು | ಗೀತಾ ಭಾಷ್ಯ ಮುಗಿಸಿಯೇ ‘ಹೋಗಬೇಕು’ ಅಂದುಕೊಂಡಿದ್ದರು ಬನ್ನಂಜೆ ಗೋವಿಂದಾಚಾರ್ಯ

Published On - 2:09 pm, Sun, 13 December 20

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ