ಗಣರಾಜ್ಯೋತ್ಸವ ದಿನಾಚರಣೆಗೆ ಸಾರ್ವಜನಿಕರಿಗೆ E-Pass
ಬೆಂಗಳೂರು, ಜನವರಿ 22: ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಜನವರಿ 26 ರಂದು ನಡೆಯಲಿರುವ 77ನೇ ಗಣರಾಜ್ಯೋತ್ಸವ ದಿನಾಚರಣೆ (Republic Day) ಕಾರ್ಯಕ್ರಮ ವೀಕ್ಷಿಸಿಸಲು ಸಾರ್ವಜನಿಕರಿಗೆ E-Pass ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ರವರು ತಿಳಿಸಿದ್ದಾರೆ. ಆಸಕ್ತರು ಸೇವಾ ಸಿಂಧು ವೆಬ್ ಸೈಟ್ (www.sevasindhu.karnataka.gov.in) ನಲ್ಲಿ ಜನವರಿ 24, 2026 ರ ಸಂಜೆ 5 ಗಂಟೆಯೊಳಗೆ ಅಗತ್ಯವಿರುವ ಎಲ್ಲ ವೈಯಕ್ತಿಕ ವಿವರಗಳನ್ನು ನಮೂದಿಸಿ ಇ-ಪಾಸ್ ಗಳನ್ನು ಪಡೆಯಬಹುದು.
ಇ-ಪಾಸ್ ಗಳನ್ನು ಹೊಂದಿರುವವರು ಪರೇಡ್ ಮೈದಾನದ ಪ್ರವೇಶ ದ್ವಾರ ಸಂಖ್ಯೆ 05 ರಲ್ಲಿ ಪರಿಶೀಲನೆಗಾಗಿ ಇ-ಪಾಸ್ ನ ಮುದ್ರಿತ ಪ್ರತಿಯನ್ನು ಅಥವಾ ಡಿಜಿಟಲ್ (ಮೊಬೈಲ್ ) ಪ್ರತಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಅವರು ತಿಳಿಸಿದ್ದಾರೆ.
ಇ-ಪಾಸ್ ನೋಂದಣಿ ಪ್ರಕ್ರಿಯೆ ಕುರಿತು ಸಹಾಯಕ್ಕಾಗಿ ಸೇವಾ ಸಿಂಧು ವೈಬ್ ಸೈಟ್ನಲ್ಲಿ ಸಹಾಯ ವಿಭಾಗವನ್ನು ವಿಕ್ಷೀಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
- ಸೇವಾಸಿಂಧು ಪೋರ್ಟಲ್ ಓಪನ್ ಮಾಡಿ
- ಮೊದಲು Registered User Login ಆಯ್ಕೆಯನ್ನು ಕ್ಲಿಕ್ ಮಾಡಿ
- ನಿಮ್ಮ Aadhaar ಸಂಖ್ಯೆಗೆ ಲಗತ್ತಾದ ಮೊಬೈಲ್ ನಂ. ಟೈಪ್ ಮಾಡಿ
- OTP ಬರಲು ಕಾಯಿರಿ ಮತ್ತು ನಮೂದಿಸಿ
- ಮೊದಲು ನೋಂದಣಿ ಮಾಡಿಲ್ಲ ಅಂದ್ರೆ, New User/Register ಆಯ್ಕೆಮಾಡಿ ಖಾತೆ ರಚಿಸಿ
- ಲಾಗಿನ್ ಆದ ಮೇಲೆ “Departments and Services” ಅಥವಾ “Apply for Services” ವಿಭಾಗಕ್ಕೆ ಹೋಗಿ
“Republic Day e-Pass” ಎನ್ನುವ ಆಯ್ಕೆಯನ್ನು ಹುಡುಕಿ
- ನಿಮ್ಮ ವ್ಯಕ್ತಿಗತ ವಿವರಗಳು (ಹೆಸರು, ವಯಸ್ಸು, ಲಿಂಗ, ತಾಯಿ/ತಂದೆಯ ಹೆಸರು ಹಾಗು ನಗರ/ಜಿಲ್ಲೆ) ಭರ್ತಿ ಮಾಡಿ
OTP Verification ಮತ್ತು ಯಾವುದೇ ಅಗತ್ಯ ಮಾಹಿತಿಗಳನ್ನು ಸರಿಯಾಗಿ ನಮೂದಿಸಿ
- ಎಲ್ಲಾ ಮಾಹಿತಿ ಸರಿಯಾಗಿ ಚೆಕ್ ಮಾಡಿ
- ಎಲ್ಲ ವಿವರಗಳು ಸರಿಯಾಗಿ ಇದ್ದರೆ “Submit” ಕ್ಲಿಕ್ ಮಾಡಿ
- ಅರ್ಜಿ ಸಲ್ಲಿಸಿದ ನಂತರ e-Pass display ಆಗುತ್ತದೆ
- ಈ pass-ನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಮಾಡಿ ಇಟ್ಟುಕೊಳ್ಳಿ
- ಜನವರಿ 26ರಂದು ಆಧಾರ್/Photo ID ಜೊತೆಗೆ ಇದು ಮುಖ್ಯವಾಗಿ ಬೇಕಾಗುತ್ತದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ