ಜಾತಿಗೆ ಮೀಸಲಾತಿ ಗೊಡವೆ ಬೇಡ! ಕನ್ನಡ ಶಾಲೆಯಲ್ಲಿ ಓದುವವರಿಗೆ ಮಾತ್ರ ಮೀಸಲಾತಿ ನೀಡಿ -ಸುರಪುರ ಶಾಸಕ ರಾಜುಗೌಡ

ಜಾತಿಗೆ ಮೀಸಲಾತಿ ಗೊಡವೆ ಬೇಡ! ಕನ್ನಡ ಶಾಲೆಯಲ್ಲಿ ಓದುವವರಿಗೆ ಮಾತ್ರ ಮೀಸಲಾತಿ ನೀಡಿ -ಸುರಪುರ ಶಾಸಕ ರಾಜುಗೌಡ
ಜಾತಿಗೆ ಮೀಸಲಾತಿ ಗೊಡವೆ ಬೇಡ! ಕನ್ನಡ ಶಾಲೆಯಲ್ಲಿ ಓದುವವರಿಗೆ ಮಾತ್ರ ಮೀಸಲಾತಿ ನೀಡಿ..ಸುರಪುರ ಶಾಸಕ ರಾಜಗೌಡ

Reservation Quota BJP MLA Rajugowda Opinion:

sadhu srinath

|

Feb 20, 2021 | 3:52 PM

ಯಾದಗಿರಿ: ಇತ್ತೀಚಿನ ದಿನಗಳಲ್ಲಿ ಮೀಸಲಾತಿ ಮೀಸಲಾತಿ ಮೀಸಲಾತಿ ಎಂಬ ಪದ ಬಳಕೆ ವ್ಯಾಪಕವಾಗಿದೆ. ಮೀಸಲಾತಿಗೊಂದು ಕಡಿವಾಣ ಹಾಕುವ ಜರೂರತ್ತು ಇದೆ ಎಂದು ಹೇಳುವವರೂ ಇದ್ದಾರೆ. ಈ ಮಧ್ಯೆ, ಜಿಲ್ಲೆಯ ಖಾನಪುರ ಎಸ್.ಎಚ್. ಗ್ರಾಮದಲ್ಲಿ ಸುರಪುರ ಬಿಜೆಪಿ ಶಾಸಕ ರಾಜುಗೌಡ ಭಿನ್ನ ಹೇಳಿಕೆಯೊಂದನ್ನು ನೀಡಿದ್ದಾರೆ.  ಯಾರು ಕನ್ನಡ ಶಾಲೆಯಲ್ಲಿ ಓದುತ್ತಾರೋ ಅಂತವರಿಗೆ ಮಾತ್ರ ಮೀಸಲಾತಿ ನೀಡಿ, ಅವರು ಯಾವುದೇ ಜಾತಿಯವರಾಗಿರಲಿ. ಯಾವುದೇ ಜಾತಿಗೆ ಮಾತ್ರ ಮೀಸಲಾತಿ ಬೇಡವೇ ಬೇಡ ಎಂದು ಶಾಸಕ ರಾಜುಗೌಡರಿಂದ ಉಚಿತ ಸಲಹೆ ನೀಡಿದ್ದಾರೆ (Reservation Quota BJP MLA Rajugowda Opinion ).

ಮೀಸಲಾತಿ ವಿಚಾರವಾಗಿ ಸಿಎಂ ಬಹಳ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇತ್ತೀಚೆಗೆ ಎಲ್ಲರೂ ಮೀಸಲಾತಿ ಕೇಳುತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಒಂದು ಅಕ್ಷರ ಚೇಂಜ್ ಮಾಡುವ ಶಕ್ತಿ ಯಾರಿಗೂ ಇಲ್ಲ. ಇಂದು ಲಿಂಗಾಯತ, ಒಕ್ಕಲಿಗ, ಪಂಚಮಸಾಲಿ ಎಲ್ಲರೂ ಮೀಸಲಾತಿ ಕೇಳುತಿದ್ದಾರೆ. ಎಪಿಎಲ್/ ಬಿಪಿಎಲ್ ಕಾಡ್೯ ಯಾವ ರೀತಿ ಕೊಡುತ್ತೀರೋ ಆ ರೀತಿಯಾಗಿ ಮಿಸಲಾತಿ ಕೊಡಿ. ಅವರಲ್ಲೂ ಕಡು ಬಡವರಿದ್ದಾರೆ. ಅದರ ಆಧಾರದ ಮೇಲೆ ಮೀಸಲಾತಿ ನೀಡಿ. ಮಳೆ ಬಂದ್ರೆ ಸಂತೆಯಲ್ಲಿ ಉಪ್ಪು ಮಾರುವವರು ಅಳುತ್ತಾರೆ. ಯಾಕಂದ್ರೆ ಮಳೆ ಬಂದ್ರೆ ಉಪ್ಪು ಕರಗಿ ಹೋಗುತ್ತೆ ಅಂತ ಅವರು ಅಳುತ್ತಾರೆ. ಇವಾಗ ತೆಂಗಿನ ಕಾಯಿ ಮಾರುವವರು ಸಹ ಅಳುತಿದ್ದಾರೆ. ಮಳೆ ಬಂದ್ರೆ ತೆಂಗಿನ ಕಾಯಿ ಕರಗಲ್ಲ, ಆದ್ರೂ ತೆಂಗಿನ ಕಾಯಿಯವರೂ ಮೀಸಲಾತಿ ಕೇಳ್ತಿದ್ದಾರೆ ಎಂದು ಶಾಸಕ ರಾಜುಗೌಡ ಗಂಭೀರವಾಗಿ ಹೇಳಿದರು.

ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾತೀಯತೇ ಹೆಚ್ಚಾಗಿದೆ. ನಮ್ಮ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜಾತಿಗೊಂದು ಜಯಂತಿ ಮಾಡಲಾಗಿದೆ. ಇನ್ಮುಂದೆ ಯಾವ ಜಯಂತಿಗೂ ರಾಜ್ಯದಲ್ಲಿ ರಜೆ ಕೊಡುವುದು ನಿಲ್ಲಿಸಬೇಕು. ವಾಲ್ಮೀಕಿ, ಕನಕ ಜಯಂತಿ ಸೇರಿ ಹಲವಾರು ಜಯಂತಿಗಳನ್ನು ಜಾರಿಗೆ ತಂದಿದ್ದು ಬಿಎಸ್ ವೈ ಸಾಹೇಬರು. ಈ ಜಯಂತಿಗಳಿಗೆ ಅಧಿಕಾರಿಗಳು ಪೋಟೋಗೆ ಹಾರ ಹಾಕಿ ರಜೆ ತಗೊಂಡು ಮನೆಗೋಗ್ತಾರೆ. ಇನ್ನು ಮುಂದೆ ಜಯಂತಿಗಳ ಆಚರಣೆ ವೇಳೆ ಎರಡು ಗಂಟೆ ಹೆಚ್ಚು ತರಗತಿ ತೆಗೆದುಕೊಳ್ಳುವಂತಾಗಬೇಕು ಎಂದು ಸದ್ಯದ ಪರಿಸ್ಥಿತಿಗೆ ಕನ್ನಡಿ ಹಿಡಿದು ಮಾತನಾಡಿದರು.

Follow us on

Related Stories

Most Read Stories

Click on your DTH Provider to Add TV9 Kannada