ಎಂಎಲ್ಎಗಳಿಗೆ ಗೌರವ ಕೊಡಿ: ಹಾಸನ ಡಿಸಿ ಬಗ್ಗೆ ಮತ್ತೆ ಬಹಿರಂಗ ಮನಸ್ತಾಪ ಹೊರಹಾಕಿದ ರೇವಣ್ಣ
ಮಾಜಿ ಸಚಿವ ಹೆಚ್.ಡಿ ರೇವಣ್ಣ, ಹಾಸನ ಜಿಲ್ಲಾಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಜಿಲ್ಲೆಯ ಬರ ಪರಿಹಾರ, ಶಾಸಕರ ಅನುದಾನ, ಪಂಚಾಯಿತಿಗಳ ಹಣಕಾಸು ಹಾಗೂ ಸೈಟ್ ವಿತರಣೆಯಲ್ಲಿನ ವಿಳಂಬಕ್ಕೆ ಡಿಸಿ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡುತ್ತಿಲ್ಲ ಎಂದು ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಾಸನ, ಅಕ್ಟೋಬರ್ 28: ‘ಎಂಎಲ್ಎಗಳಿಗೆ ಗೌರವ ಕೊಡಿ’ ಎಂದು ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಬಗ್ಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮತ್ತೊಮ್ಮೆ ಬಹಿರಂಗವಾಗಿ ಮನಸ್ತಾಪ ಹೊರಹಾಕಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಒಬ್ಬ ಜಿಲ್ಲಾಧಿಕಾರಿಯಾದವರು ಪಕ್ಷಾತೀತವಾಗಿ ಎಲ್ಲಾ ಎಂಎಲ್ಎಗಳಿಗೆ ಫೋನ್ ಮಾಡಬೇಕು. ಕನಿಷ್ಠ ಒಂದು ಆಸ್ಪತ್ರೆಯ ವಿಷಯದಲ್ಲಾದರೂ ಜಿಲ್ಲಾಧಿಕಾರಿಗಳು ಎಂಎಲ್ಎ, ಎಂಎಲ್ಸಿಗಳಿಗೆ ಕರೆ ಮಾಡಬಾರದಾ’ ಎಂದು ಪ್ರಶ್ನಿಸಿದ್ದಾರೆ. ‘ತಾವು ಯಾರೊಬ್ಬರಿಗೂ ಫೋನ್ ಮಾಡಿವುದಿಲ್ಲ, ಗುಮಾಸ್ತರಿಂದ ಫೋನ್ ಮಾಡಿಸುತ್ತಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ಎಂಎಲ್ಎಗಳಿಗೆ ಗೌರವ ನೀಡಬೇಕು’ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
