Road Tax: ರಸ್ತೆ ತೆರಿಗೆ ಪಾವತಿ ಗಡುವು ಮುಂದೂಡಿಕೆ; 40 ಸಾವಿರ ಬಸ್ ಮಾಲೀಕರಿಗೆ ಅನುಕೂಲ

ತೆರಿಗೆ ಪಾವತಿ ಮಾಡಲು ಒಂದು ತಿಂಗಳು ಅವಕಾಶ ನೀಡಿರುವುದು ಸುಮಾರು 40 ಸಾವಿರ ಬಸ್ ಮಾಲೀಕರಿಗೆ ಅನುಕೂಲ ಮಾಡಿಕೊಡಲಿದೆ.

Road Tax: ರಸ್ತೆ ತೆರಿಗೆ ಪಾವತಿ ಗಡುವು ಮುಂದೂಡಿಕೆ; 40 ಸಾವಿರ ಬಸ್ ಮಾಲೀಕರಿಗೆ ಅನುಕೂಲ
ಸಾರಿಗೆ ಸಚಿವ ಬಿ.ಶ್ರೀರಾಮುಲು
Edited By:

Updated on: Aug 19, 2021 | 2:30 PM

ಬೆಂಗಳೂರು: ವಾಹನಗಳ ರಸ್ತೆ ಪಾವತಿಗೆ ಒಂದು ತಿಂಗಳು ಕಾಲಾವಕಾಶ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಸ್ತೆ ತೆರಿಗೆ ಪಾವತಿ ಮಾಡಲು ಸೆಪ್ಟೆಂಬರ್ 15ರವರೆಗೆ ಗಡುವು ನೀಡಲಾಗಿದ್ದು, ಸ್ಟೇಜ್ ಕ್ಯಾರೇಜ್, ಕಾಂಟ್ರಾಕ್ಟ್ ಕ್ಯಾರೇಜ್ ವಾಹನಗಳ ತೆರಿಗೆಗಳಿಗೂ ಆದೇಶ ಅನ್ವಯವಾಗಲಿದೆ. ತೆರಿಗೆ ಪಾವತಿ ಮಾಡಲು ಒಂದು ತಿಂಗಳು ಅವಕಾಶ ನೀಡಿರುವುದು ಸುಮಾರು 40 ಸಾವಿರ ಬಸ್ ಮಾಲೀಕರಿಗೆ ಅನುಕೂಲ ಮಾಡಿಕೊಡಲಿದೆ.

ಆಗಸ್ಟ್ 15 ರಂದು ಪಾವತಿಸಬೇಕಿದ್ದ ರಸ್ತೆ ತೆರಿಗೆ ಪಾವತಿ ಅವಧಿ ಸೆಪ್ಟೆಂಬರ್ 15 ರವರೆಗೆ ವಿಸ್ತರಣೆ ಮಾಡಲಾಗಿದೆ. ಸೆಪ್ಟೆಂಬರ್ 15 ರಂದು ಪಾವತಿಸಬೇಕಿದ್ದ ರಸ್ತೆ ತೆರಿಗೆ ಅಕ್ಟೊಬರ್ 15 ರವರೆಗೆ ದಂಡರಹಿತವಾಗಿ ಪಾವತಿಸಲು ವಿಸ್ತರಣೆ ಮಾಡಿ ಅವಕಾಶ ಒದಗಿಸಲಾಗಿದೆ. ರಸ್ತೆ ತೆರಿಗೆ ಪಾವತಿ ದಿನಾಂಕವನ್ನು ಮುಂದೂಡಲು ಮನವಿ ಮಾಡಿ ಖಾಸಗಿ ಬಸ್ ಮಾಲೀಕರ ವಿವಿಧ ಸಂಘಟನೆಗಳು ಸಾರಿಗೆ ಸಚಿವ ಶ್ರೀರಾಮುಲು ಅವರನ್ನು ಭೇಟಿ ಮಾಡಿದ್ದವು. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಾರಿಗೆ ಉದ್ದಿಮೆಯ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಅವಧಿ ವಿಸ್ತರಿಸಲು ಸಂಘಟನೆಗಳು ನೀಡಿದ್ದ ಮನವಿಯನ್ನು ಪುರಸ್ಕರಿಸಿದ ರಾಜ್ಯ ಸರ್ಕಾರ ಅವಧೀ ವಿಸ್ತರಿಸಿ ಆದೇಶಿಸಿದೆ.

ಇದನ್ನೂ ಓದಿ: 

‘ಅಫ್ಘಾನ್​​ನಲ್ಲಿ ಭಾರತದ ಹೂಡಿಕೆ ಮುಂದುವರಿಯಲಿದೆಯಾ’-ಅಮೆರಿಕ ಮಾಧ್ಯಮಗಳ ಈ ಪ್ರಶ್ನೆಗೆ ಎಸ್​.ಜೈಶಂಕರ್​ ಕೊಟ್ಟ ಚುಟುಕು ಉತ್ತರ ಹೀಗಿದೆ

Bank Holidays: ಇಂದಿನಿಂದ 4 ದಿನಗಳ ಕಾಲ ಈ ರಾಜ್ಯಗಳಲ್ಲಿ ಬ್ಯಾಂಕ್​ಗಳಿಗೆ ರಜಾ ದಿನ

(Road Tax payment deadline Postponed until october 15)

TV9 Web

TV9 Kannada

Read More
Loading...
Unable to load recommendations.
Follow Us