ಎಟಿಎಂ ಮಷಿನ್ ಕಟ್ ಮಾಡಿ ಹಣ ದರೋಡೆಗೆ ಯತ್ನ

ಗ್ಯಾಸ್ ವೆಲ್ಡಿಂಗ್ ಮಷಿನ್​ನಿಂದ ಎಟಿಎಂ ಮಷಿನ್ ಕಟ್ ಮಾಡಿ ಹಣ ದರೋಡೆ ಮಾಡಲು ಯತ್ನಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ದರೋಡೆ ಯತ್ನದ ಬಳಿಕವೂ ಎಟಿಎಂ ನಿಂದ ಜನರು ಹಣ ಡ್ರಾ ಮಾಡಿಕೊಂಡು ಹೋಗಿದ್ದಾರೆ.

ಎಟಿಎಂ ಮಷಿನ್ ಕಟ್ ಮಾಡಿ ಹಣ ದರೋಡೆಗೆ ಯತ್ನ
ಗದಗದ ಎಟಿಎಂ ಕೇಂದ್ರ
Edited By:

Updated on: Jan 17, 2021 | 3:57 PM

ಗದಗ: ಎಟಿಎಂ ಮಷಿನ್ ಕಟ್ ಮಾಡಿ ಹಣ ಕಳವು ಮಾಡಲು ಯತ್ನಿಸಿದ ಘಟನೆ ಗದಗ ಜಿಲ್ಲೆಯ ಹಾತಲಗೇರಿ ರಸ್ತೆಯ ಇಎಒನ ಎಸ್​ಬಿಐ ಎಟಿಎಂನಲ್ಲಿ ನಡೆದಿದೆ.

ಗ್ಯಾಸ್ ವೆಲ್ಡಿಂಗ್ ಜ್ವಾಲೆಯಿಂದ ಎಟಿಎಂ ಮಷಿನ್ ಕಟ್ ಮಾಡಿ ಹಣ ದರೋಡೆ ಮಾಡಲು ಯತ್ನಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ದರೋಡೆ ಯತ್ನದ ಬಳಿಕವೂ ಎಟಿಎಂ ನಿಂದ ಜನರು ಹಣ ಡ್ರಾ ಮಾಡಿಕೊಂಡು ಹೋಗಿದ್ದಾರೆ.

ಈ ಬಗ್ಗೆ ಗ್ರಾಹಕರೊಬ್ಬರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಡಿವೈಎಸ್​ಪಿ ಪ್ರಹ್ಲಾದ್ ಹಾಗೂ ಬಡಾವಣೆ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಎಸ್​ಬಿಐ ಬ್ಯಾಂಕ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿಸಿ ಕ್ಯಾಮರಾಗಳಿಗೆ ಕಪ್ಪು ಪಟ್ಟಿ ಹಚ್ಚಿ ದರೋಡೆಗೆ ಯತ್ನಿಸಿದ್ದು, ಈ ಸಂಬಂಧ ಪ್ರಕರಣ ಗದಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಕಳವು ಮಾಡಲು ಯತ್ನಿಸಿದವರ ಶೋಧ ಕಾರ್ಯ ನಡೆಯುತ್ತಿದೆ.

ಎಟಿಎಂ ದೋಚುವ ಯತ್ನ

ಗದಗದ ಎಟಿಎಂ

ಗೂರ್ಖಾ ಬಹಾದ್ದೂರ್​ನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಚಿನ್ನದ ದರೋಡೆ!