ಸರ್ದಾರ್ ವಲ್ಲಭಭಾಯಿ ಪಟೇಲ್ ನಂತರ ಆ ಮಟ್ಟಕ್ಕೆ ಬೆಳೆದವರು ಗೃಹ ಸಚಿವ ಅಮಿತ್ ಶಾ: ಯಡಿಯೂರಪ್ಪ
ಸರ್ದಾರ್ ವಲ್ಲಭಭಾಯಿ ಪಟೇಲ್ ನಂತರ ಆ ಮಟ್ಟಕ್ಕೆ ಬೆಳೆದ ಮತ್ತೊಬ್ಬ ಗೃಹ ಸಚಿವ ಅಮಿತ್ ಶಾ. ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು. ಅಮಿತ್ ಶಾ ಮತ್ತೊಮ್ಮೆ ಕೇಂದ್ರ ಗೃಹ ಸಚಿವರಾಗಬೇಕು -BSY ಹೇಳಿಕೆ.
ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಸರ್ದಾರ್ ಪಟೇಲರಿಗೆ ಹೋಲಿಸಿದರು.
ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ನಂತರ ಆ ಮಟ್ಟಕ್ಕೆ ಬೆಳೆದ ಮತ್ತೊಬ್ಬ ಗೃಹ ಸಚಿವ ಅಮಿತ್ ಶಾ. ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು. ಅಮಿತ್ ಶಾ ಮತ್ತೊಮ್ಮೆ ಕೇಂದ್ರ ಗೃಹ ಸಚಿವರಾಗಬೇಕು. ಆ ನಿಟ್ಟಿನಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದು ಸಿಎಂ ಯಡಿಯೂರಪ್ಪ ಆಶಯ ವ್ಯಕ್ತಪಡಿಸಿದರು.
ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ವಂತ ಶಕ್ತಿ ಮೇಲೆ 150ಕ್ಕೂ ಹೆಚ್ಚು ಸೀಟ್ ಗೆಲ್ಲಲಿದೆ. ಈ ಬಗ್ಗೆ, ಅಮಿತ್ ಶಾಗೆ ನಾನು ಈ ಭರವಸೆ ನೀಡುತ್ತೇನೆ. ರೈತರಿಗೆ ಸಿಗಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ನಮ್ಮ ಸರ್ಕಾರ ನೀಡುತ್ತಿದೆ. ರೈತರ ಯೋಗಕ್ಷೇಮಕ್ಕಾಗಿ ಏನೆಲ್ಲಾ ಯೋಜನೆ ರೂಪಿಸಬೇಕೋ ಅದೆಲ್ಲವನ್ನೂ ಮೋದಿಯವರ ಆಶೀರ್ವಾದದಿಂದ ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.
ಬಾಗಲಕೋಟೆ ಶುಗರ್ ಫ್ಯಾಕ್ಟರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಮಿತ್ ಶಾ, ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಸಹಿತ ಇತರ ಬಿಜೆಪಿ ನಾಯಕರು ಭಾಗವಹಿಸಿದ್ದಾರೆ. ಮುರುಗೇಶ್ ನಿರಾಣಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ದೇವರು ಇನ್ನಷ್ಟು ಶಕ್ತಿ ನೀಡಲಿ ಎಂದು ಯಡಿಯೂರಪ್ಪ ಶುಭಹಾರೈಸಿದ್ದಾರೆ. ಸಮಾರಂಭದಲ್ಲಿ ಅಮಿತ್ ಶಾ, ಯಡಿಯೂರಪ್ಪಗೆ ಮುರುಗೇಶ್ ನಿರಾಣಿ ಬೆಳ್ಳಿತಟ್ಟೆ ನೀಡಿ ಗೌರವಸಿದ್ದಾರೆ.
ನಮ್ಮವರು ಸರ್ಕಾರದ ವಿರುದ್ಧ ಮಾತನಾಡದಂತೆ ಕೆಲಸ ಮಾಡಿ: ಯಡಿಯೂರಪ್ಪಗೆ ಅಮಿತ್ ಶಾ ಕಿವಿಮಾತು
Published On - 3:55 pm, Sun, 17 January 21