ATMಗಳಲ್ಲಿ ನಿಮಗೆ ಪಿಂಕ್ ನೋಟು ಸಿಗ್ತಿದೆಯಾ?

|

Updated on: Feb 26, 2020 | 5:36 PM

ಬೆಂಗಳೂರು: ಸಿಲಿಕಾನ್ ಸಿಟಿ ಎಟಿಎಂಗಳಲ್ಲಿ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಸಿಗ್ತಿಲ್ಲ. ಆದ್ರೆ ಕೆಲ ದಿನಗಳಿಂದ ಎರಡು ಸಾವಿರ ರೂಪಾಯಿಯ ಪಿಂಕ್ ನೋಟು ಬ್ಯಾನ್ ಆಗುತ್ತೆ ಎಂಬ ವದಂತಿ ಧಾರಾಳವಾಗಿ ಹರಿದಾಡಿತ್ತು. ಇದು ನಿಜಾನಾ!? ವಾಸ್ತವ ಏನೂ ಅಂದ್ರೆ 2 ಸಾವಿರ ರೂಪಾಯಿ ನೋಟುಗಳ ಮುದ್ರಣವೇ ಸ್ಥಗಿತವಾಗುತ್ತೆ ಎಂದು ಆರ್ಬಿಐ ಈ ಹಿಂದೆಯೇ ಮಾಹಿತಿ ನೀಡಿತ್ತು. ಅದರಂತೆ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತವಾಗಿದ್ದು, 200 ರೂಪಾಯಿ ನೋಟುಗಳ ಮುದ್ರಣಕ್ಕೆ ಹೆಚ್ಚಿನ ಆದ್ಯತೆ […]

ATMಗಳಲ್ಲಿ ನಿಮಗೆ ಪಿಂಕ್ ನೋಟು ಸಿಗ್ತಿದೆಯಾ?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಎಟಿಎಂಗಳಲ್ಲಿ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಸಿಗ್ತಿಲ್ಲ. ಆದ್ರೆ ಕೆಲ ದಿನಗಳಿಂದ ಎರಡು ಸಾವಿರ ರೂಪಾಯಿಯ ಪಿಂಕ್ ನೋಟು ಬ್ಯಾನ್ ಆಗುತ್ತೆ ಎಂಬ ವದಂತಿ ಧಾರಾಳವಾಗಿ ಹರಿದಾಡಿತ್ತು. ಇದು ನಿಜಾನಾ!?

ವಾಸ್ತವ ಏನೂ ಅಂದ್ರೆ 2 ಸಾವಿರ ರೂಪಾಯಿ ನೋಟುಗಳ ಮುದ್ರಣವೇ ಸ್ಥಗಿತವಾಗುತ್ತೆ ಎಂದು ಆರ್ಬಿಐ ಈ ಹಿಂದೆಯೇ ಮಾಹಿತಿ ನೀಡಿತ್ತು. ಅದರಂತೆ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತವಾಗಿದ್ದು, 200 ರೂಪಾಯಿ ನೋಟುಗಳ ಮುದ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಮಾರ್ಚ್ 1ರಿಂದ ಈ ಅದೇಶ ಜಾರಿಯಾಗುತ್ತೆ ಎಂದು ಹೇಳಲಾಗುತ್ತಿತ್ತು. ಆದರೆ ಫೆಬ್ರವರಿ ಕೊನೇ ವಾರದಿಂದಲೇ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ ಎಟಿಎಂಗಳಲ್ಲಿ 2 ಸಾವಿರ ನೋಟು ಸಿಗ್ತಿಲ್ಲ.

ಕೆಲ ಬ್ಯಾಂಕ್​ಗಳ ಎಟಿಎಂ ನಿಂದ 2 ಸಾವಿರ ರೂ. ನೋಟು ಜೋಡಿಸುವ ಕ್ಯಾಸೆಟ್​ಗಳನ್ನೇ ತೆಗೆದು ಹಾಕಲಾಗಿದೆ. ಇದರ ಬದಲಿಗೆ 200 ರೂ. ನೋಟುಗಳ ಕ್ಯಾಸೆಟ್​ಗಳ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ ಎಂದು ಟಿವಿ9 ಗೆ ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ ಸಿಕ್ಕಿದೆ.

ಅಲ್ಲದೆ ಈ ಬಗ್ಗೆ ರಿಯಾಲಿಟಿ ಚೆಕ್ ಕೂಡ ನಡೆಸಿದ್ದು, ಎಸ್.ಬಿಐ, ಕೆನರಾ, ಆಕ್ಸಿಸ್, ಹೆಚ್.ಡಿ.ಎಫ್.ಸಿ ಬ್ಯಾಂಕ್ ಎಟಿಎಂಗಳಲ್ಲಿ 2 ಸಾವಿರ ಮುಖಬೆಲೆಯ ನೋಟುಗಳು ಸಿಗ್ತಿಲ್ಲ. ಹಾಗಾಗಿ ಇನ್ಮುಂದೆ ಜನ ಪಿಂಕ್ ನೋಟುಗಳನ್ನು ನೋಡುವುದು ಕಡಿಮೆ ಆಗಲಿದೆ.

Published On - 5:06 pm, Wed, 26 February 20