AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಟ್ಟುಹಬ್ಬದ ದಿನವೇ ‘ಲಕ್ಕಿ’ ಮನೆಗೆ ಕಾಲಿಡಲಿರುವ ಬಿಎಸ್​ವೈ

ಬೆಂಗಳೂರು: ಸುಣ್ಣ-ಬಣ್ಣ ಜೋರಾಗಿದೆ. ಎಲ್ಲಾ ಕಡೆ ಕ್ಲೀನಿಂಗ್. ಶೈನಿಂಗ್. ಕಾರ್ಮಿಕರು ಬ್ಯುಸಿಯಾಗಿದ್ದಾರೆ. ಡಾಂಬರೀಕರಣ ಮಾಡಿದ್ದಾರೆ. ಬ್ಯಾರಿಕೇಡ್​ ಹಾಕಿದ್ದಾರೆ. ಪೊಲೀಸ್ರು ಹದ್ದಿನ ಕಣ್ಣಿಟ್ಟಿದ್ದಾರೆ. ಸಿಎಂ ಬಿಎಸ್​ವೈ ಸ್ವಾಗತಕ್ಕಾಗಿ ಬಂಗಲೆ ಕಳೆಗಟ್ಟಿದೆ. ಹುಟ್ಟುಹಬ್ಬದ ದಿನವೇ ‘ಲಕ್ಕಿ’ ಮನೆಗೆ ‘ರಾಜಹುಲಿ’ ಎಂಟ್ರಿ! ಯೆಸ್.. ಕಾವೇರಿ ನಿವಾಸ. ಮಾಜಿ ಸಿಎಂ ಸಿದ್ದರಾಮಯ್ಯಗೆ ನೆಚ್ಚಿನ ಮನೆ. ಸಿಎಂ ಬಿಎಸ್​​ವೈಗೆ ಲಕ್ಕಿ ಮನೆ. ನಾ ಕೊಡೆ ನೀ ಬಿಡೆ ಅನ್ನೋ ಜಿದ್ದಿಗೆ ಅಂದು ಕಾವೇರಿ ನಿವಾಸ ಸಿಲುಕ್ಕಿತ್ತು. ಬಿಎಸ್​​ವೈ ಸಿಎಂ ಆದ್ಮೇಲೆ ಪಟ್ಟು ಬಿಡದೇ ಸಿದ್ದರಾಮಯ್ಯ […]

ಹುಟ್ಟುಹಬ್ಬದ ದಿನವೇ ‘ಲಕ್ಕಿ’ ಮನೆಗೆ ಕಾಲಿಡಲಿರುವ ಬಿಎಸ್​ವೈ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Feb 27, 2020 | 6:56 AM

Share

ಬೆಂಗಳೂರು: ಸುಣ್ಣ-ಬಣ್ಣ ಜೋರಾಗಿದೆ. ಎಲ್ಲಾ ಕಡೆ ಕ್ಲೀನಿಂಗ್. ಶೈನಿಂಗ್. ಕಾರ್ಮಿಕರು ಬ್ಯುಸಿಯಾಗಿದ್ದಾರೆ. ಡಾಂಬರೀಕರಣ ಮಾಡಿದ್ದಾರೆ. ಬ್ಯಾರಿಕೇಡ್​ ಹಾಕಿದ್ದಾರೆ. ಪೊಲೀಸ್ರು ಹದ್ದಿನ ಕಣ್ಣಿಟ್ಟಿದ್ದಾರೆ. ಸಿಎಂ ಬಿಎಸ್​ವೈ ಸ್ವಾಗತಕ್ಕಾಗಿ ಬಂಗಲೆ ಕಳೆಗಟ್ಟಿದೆ.

ಹುಟ್ಟುಹಬ್ಬದ ದಿನವೇ ‘ಲಕ್ಕಿ’ ಮನೆಗೆ ‘ರಾಜಹುಲಿ’ ಎಂಟ್ರಿ! ಯೆಸ್.. ಕಾವೇರಿ ನಿವಾಸ. ಮಾಜಿ ಸಿಎಂ ಸಿದ್ದರಾಮಯ್ಯಗೆ ನೆಚ್ಚಿನ ಮನೆ. ಸಿಎಂ ಬಿಎಸ್​​ವೈಗೆ ಲಕ್ಕಿ ಮನೆ. ನಾ ಕೊಡೆ ನೀ ಬಿಡೆ ಅನ್ನೋ ಜಿದ್ದಿಗೆ ಅಂದು ಕಾವೇರಿ ನಿವಾಸ ಸಿಲುಕ್ಕಿತ್ತು. ಬಿಎಸ್​​ವೈ ಸಿಎಂ ಆದ್ಮೇಲೆ ಪಟ್ಟು ಬಿಡದೇ ಸಿದ್ದರಾಮಯ್ಯ ಅವರನ್ನ ಕಾವೇರಿ ನಿವಾಸದಿಂದ ಖಾಲಿ ಮಾಡಿಸಿದ್ರು.

ಅದ್ರಲ್ಲೂ ಕಳೆದ ಆರೂವರೆ ವರ್ಷಗಳಿಂದ ಕಾವೇರಿ ನಿವಾಸದಲ್ಲೇ ವಾಸ್ತವ್ಯ ಹೂಡಿದ್ದ ಸಿದ್ದು, ಇಷ್ಟದ ಮನೆಯಿಂದ ಒಲ್ಲದ ಮನಸ್ಸಲ್ಲೇ ಹೊರಗೆ ಹೆಜ್ಜೆ ಇಟ್ಟಿದ್ರು. ಆದ್ರೀಗ ಸಿದ್ದು ಕಾವೇರಿ ತೊರೆದು 20 ದಿನಗಳದ್ಮೇಲೆ ಸಿಎಂ ಬಿಎಸ್​ವೈ ಕಾವೇರಿ ನಿವಾಸಕ್ಕೆ ಎಂಟ್ರಿ ಕೊಡಲಿದ್ದಾರೆ. ಇಂದು ಬರ್ತ್​​​ಡೇ ದಿನವೇ ತಮ್ಮ ಲಕ್ಕಿ ಮನೆಗೆ ರಾಜಾಹುಲಿ ಎಂಟ್ರಿ ಕೊಡಲಿದೆ.

ಇವತ್ತು ಕಾವೇರಿ ನಿವಾಸಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಎಂಟ್ರಿ ಕೊಡ್ತಿರೋದ್ರಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾವೇರಿ ನಿವಾಸದ ಕಾಂಪೌಂಡ್​, ಗೇಟ್​ಗಳಿಗೆ ಸುಣ್ಣ ಬಣ್ಣ ಮಾಡಲಾಗಿದೆ. ಗಾರ್ಡನ್, ರಸ್ತೆಗಳಿಗೆ ಟಾರ್ ಹಾಕಿ ನವೀಕರಿಸಲಾಗಿದೆ. ಇವತ್ತು ಸಿಎಂ ಬಿಎಸ್​ವೈ ಕಾವೇರಿ ಬಂಗಲೆ ಪ್ರವೇಶಿಸಿದ ಬಳಿಕ ಬೆಳಗ್ಗೆ ವಿಶೇಷ ಹೋಮ-ಹವನ ನಡೆಸಲಿದ್ದಾರೆ. ಗೃಹ ಪ್ರವೇಶದ ಬಳಿಕ ಡಾಲರ್ಸ್​​ ಕಾಲೋನಿಯ ಧವಳಗಿರಿಯಲ್ಲೇ ಸಿಎಂ ಬಿಎಸ್​​ವೈ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.

ಕಾವೇರಿ ನಿವಾಸದಿಂದ ತೆರಳಿ ಬಜೆಟ್ ಮಂಡಿಸ್ತಾರಾ ಬಿಎಸ್​ವೈ? ಇನ್ನು, ಮಾರ್ಚ್​ 5ರಂದು ಸಿಎಂ ಯಡಿಯೂರಪ್ಪ ಬಜೆಟ್​ ಮಂಡಿಸಲಿದ್ದಾರೆ. ಹೀಗಾಗಿ ಬಿಎಸ್​ವೈ ಬಜೆಟ್​ ಮಂಡನೆ ತಯಾರಿಯಲ್ಲಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಕಾವೇರಿ ನಿವಾಸದಲ್ಲಿನ ಸ್ವಚ್ಛತೆಯ ಕೆಲಸ ಮುಗಿದರೆ, ಕಾವೇರಿ ನಿವಾಸದಿಂದಲೇ ತೆರಳಿ ಬಜೆಟ್ ಮಂಡಿಸಲಿದ್ದಾರೆ. ಇಲ್ಲವೇ ಡಾಲರ್ಸ್ ಕಾಲೋನಿ ನಿವಾಸದಿಂದಲೇ ಬಂದು ಬಜೆಟ್ ಮಂಡಿಸಲಿದ್ದಾರೆ.

ಇನ್ನು, ಅದು ಇದು ಕಾರಣ ನೀಡಿ ಕೊನೆಗೂ ನೆಚ್ಚಿನ ನಿವಾಸ ಕಾವೇರಿಯನ್ನ ಭಾರವಾದ ಮನಸ್ಸಿನಿಂದಲೇ ಸಿದ್ದರಾಮಯ್ಯ ಖಾಲಿ ಮಾಡಿದ್ರು. ಇದೀಗ ಸಿಎಂ ಬಿಎಸ್​​ವೈ ಲಕ್ಕಿ ಮನೆ ಕಾವೇರಿ ನಿವಾಸಕ್ಕೆ ಎಂಟ್ರಿ ಕೊಡಲಿದ್ದಾರೆ. ಇದರ ಜೊತೆಗೆ ಸಿಎಂ ಬಿಎಸ್​​ವೈ ಧವಳಗಿರಿ ನಿವಾಸದಿಂದ ತೆರಳುತ್ತಿದ್ದ ವೇಳೆ ಟ್ರಾಫಿಕ್ ಕಿರಿಕಿರಿ ಅನುಭವಿಸ್ತಿದ್ದ ಜನರು ನಿಟ್ಟುಸಿರು ಬಿಡಲಿದ್ದಾರೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು