ಕಲಬುರಗಿ; ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಾದರೆ, ಕಲಬುರಗಿ ಜಿಲ್ಲೆಯ ಜನರಿಗೆ ನಡುಕ ಹೆಚ್ಚಾಗುತ್ತದೆ. ಮಹಾರಾಷ್ಟ್ರದಲ್ಲಿ ಮೂರನೇ ಅಲೆ ಜೋರಾದರೆ ಜಿಲ್ಲೆಯ ಜನರಿಗೆ ಭಯ ಕಾಡುತ್ತದೆ. ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ರಕರಣಗಳು ಹೆಚ್ಚಾದರೆ ಜಿಲ್ಲೆಯ ಜನರಿಗೆ ಆತಂಕ ಹೆಚ್ಚಾಗುತ್ತದೆ. ಮಹಾರಾಷ್ಟ್ರ ಮತ್ತು ಕಲಬುರಗಿಗೆ ನಂಟಿದೆ. ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕಲಬುರಗಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಹೀಗಾಗಿ ಇಂದಿನಿಂದ (ಜೂನ್ 26) ಮಹಾರಾಷ್ಟ್ರದಿಂದ ಕಲಬುರಗಿಗೆ ಬರುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿದೆ.
ದೇಶದಲ್ಲಿ ಮೊದಲು ಕೊರೊನಾ ಹೆಚ್ಚಾಗಿದ್ದು ಮಹಾರಾಷ್ಟ್ರದಲ್ಲಾದರೆ, ರಾಜ್ಯದಲ್ಲಿ ಮೊದಲು ಕೊರೊನಾ ಹೆಚ್ಚಾಗಿದ್ದು ಮತ್ತು ದೇಶದಲ್ಲಿ ಮೊದಲು ಕೊರೊನಾ ಬಲಿ ಪಡೆದಿದ್ದು ಕಲಬುರಗಿಯಲ್ಲಿ. ದೇಶದಲ್ಲಿ ಎರಡನೇ ಅಲೆ ಜೋರಾಗಿದ್ದು ಮೊದಲು ಮಹಾರಾಷ್ಟ್ರದಲ್ಲಾದರೆ, ರಾಜ್ಯದಲ್ಲಿ ಎರಡನೇ ಅಲೆ ಕೂಡಾ ಮೊದಲು ಜೋರಾಗಿದ್ದು ಕಲಬುರಗಿಯಲ್ಲಿ. ಮಹಾರಾಷ್ಟ್ರದಲ್ಲಿ ಕೊರೊನಾ ಮೊದಲು ಹೆಚ್ಚಾದರೆ ರಾಜ್ಯದಲ್ಲಿ ಮೊದಲು ಹೆಚ್ಚಿನ ಪರಿಣಾಮ ಬೀರುವುದು ಕಲಬುರಗಿ ಜಿಲ್ಲೆಯ ಮೇಲೆ.
ಮಹಾರಾಷ್ಟ್ರದಲ್ಲಿ ಮೂರನೇ ಅಲೆಯ ಅಬ್ಬರ ಹೆಚ್ಚಾಗುತ್ತಿದೆ. ಜೊತೆಗೆ ಡೆಲ್ಟಾ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿವೆ. ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಬಿಸಿಲನಾಡು ಕಲಬುರಗಿ ಜಿಲ್ಲೆಯ ಜನರಿಗೆ ನಡುಕ ಹುಟ್ಟಿಸುತ್ತಿದೆ. ಹೀಗಾಗಿ ಜಿಲ್ಲಾಡಳಿತ ಮಹಾರಾಷ್ಟ್ರದಿಂದ ಕಲಬುರಗಿ ಬರುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿದೆ. ಎಪ್ಪತ್ತೆರಡು ಗಂಟೆಯೊಳಗಿನ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದ್ದು, ರಿಪೋರ್ಟ್ ಇಲ್ಲದೇ ಬರುವವರಿಗೆ ಅವಕಾಶ ಇಲ್ಲ. ಜಿಲ್ಲೆಯ ಐದು ಕಡೆ ಚೆಕ್ ಪೋಸ್ಟ್ ಮೂಲಕ ತಪಾಸಣೆ ನಡೆಸಲಾಗುತ್ತಿದೆ.
ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ
ಹುಬ್ಬಳ್ಳಿ, ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದ್ದು, ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ ಅನುಮತಿ ಪಡೆದಿರುವ ಮದುವೆ ಸಮಾರಂಭಗಳನ್ನು 40 ಕ್ಕಿಂತ ಹೆಚ್ಚು ಜನರು ಸೇರದೆ ಆಯೋಜಿಸಬಹುದು. ಅಂತ್ಯಕ್ರಿಯೆಗಳಲ್ಲಿ ಗರಿಷ್ಠ 5 ಜನ ಮಾತ್ರ ಭಾಗವಹಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ನೀಡಿದೆ. ಮಂಡ್ಯ, ತುಮಕೂರು, ದಕ್ಷಿಣ ಕನ್ನಡ, ಕೊಪ್ಪಳ, ರಾಮನಗರ, ಚಾಮರಾಜನಗರ, ಉತ್ತರ ಕನ್ನಡ, ಯಾದಗಿರಿ ಸೇರಿದಂತೆ ರಾಜ್ಯದ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಾಗಿದೆ.
ಚಿಕ್ಕಬಳ್ಳಾಫುರ ಜಿಲ್ಲೆಯಾದ್ಯಂತ ಕೆಎಸ್ಆರ್ಟಿಸಿ ಬಸ್ ಸಂಚಾರ ಇದೆ. ಜಿಲ್ಲೆಯ ಎಲ್ಲಾ ಕೆಎಸ್ಆರ್ಟಿಸಿ ಡಿಪೋಗಳಿಂದ ಬಸ್ ಸಂಚಾರ ಇದೆ ಎಂದು ಟಿವಿ9ಗೆ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ್ ಮಾಹಿತಿ ನೀಡಿದ್ದಾರೆ. ಇಂದಿನಿಂದ ಮೈಸೂರಿನಲ್ಲಿ ಅನ್ಲಾಕ್ ಮೊದಲ ಹಂತ ಜಾರಿಯಾಗಿದೆ. ಪಾಸಿಟಿವಿಟಿ ರೇಟ್ ಕಡಿಮೆಯಾದ ಹಿನ್ನೆಲೆ ಆದೇಶ ನೀಡಲಾಗಿದೆ. ಆದರೆ ಶನಿವಾರ, ಭಾನುವಾರ ವೀಕೆಂಡ್ ಕರ್ಫ್ಯೂ ಇರಲಿದೆ.
ಇದನ್ನೂ ಓದಿ
ಕೊವಿಡ್ ಆತಂಕದ ಜೊತೆಗೆ ರಾಜ್ಯದಲ್ಲಿ ಅಪರೂಪದ ಎನೆಕ್ ಕಾಯಿಲೆ ಬಾಲಕನಲ್ಲಿ ಪತ್ತೆ!
ಮಾನಸಿಕ ಅಸ್ವಸ್ಥ ಯುವಕನಿಗೆ ಕಿರುಕುಳ: ದಾಬಸ್‌ಪೇಟೆ ಪೊಲೀಸರಿಂದ ಕಾಮುಕ ಶಿಕ್ಷಕ ರಂಗನಾಥ್ ಸೆರೆ
(TPCR negative report is mandatory for those coming from Maharashtra to Kalaburagi)