Russia Ukraine War; ಉಕ್ರೇನ್​ನಲ್ಲಿ ಸಿಲುಕಿರುವ ಮಕ್ಕಳ ಪರದಾಟ ನೋಡಿ ಕಂಗಾಲಾದ ಪೋಷಕರು; ಸುರಕ್ಷಿತವಾಗಿ ಕರೆತರುವಂತೆ ಮನವಿ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 24, 2022 | 8:46 PM

ಮನೋಜ್, ವೈಭವ್, ಅರುಣ್ ಕುಮಾರ್, ತನುಜಾ ಎಂಬ ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ಸೆರೆ. ಮಕ್ಕಳ ಪರದಾಟ ನೋಡಿ ಪೋಷಕರು ಕಂಗಾಲಾಗಿದ್ದಾರೆ. ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆತರುವಂತೆ ಪೋಷಕರು ಟಿವಿ9 ಜೊತೆ ಕಣ್ಣೀರಿಟ್ಟು ಮನವಿ ಮಾಡಿಕೊಂಡಿದ್ದಾರೆ.

Russia Ukraine War; ಉಕ್ರೇನ್​ನಲ್ಲಿ ಸಿಲುಕಿರುವ ಮಕ್ಕಳ ಪರದಾಟ ನೋಡಿ ಕಂಗಾಲಾದ ಪೋಷಕರು; ಸುರಕ್ಷಿತವಾಗಿ ಕರೆತರುವಂತೆ ಮನವಿ
ಉಕ್ರೇನ್​ನಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳು
Follow us on

ಚಿಕ್ಕಮಗಳೂರು: ಉಕ್ರೇನ್​ ಮೇಲೆ ರಷ್ಯಾ ಯುದ್ಧ (Russia Ukraine War) ಘೋಷಿಸಿದೆ. ಸಾಕಷ್ಟು ಭಾರತೀಯರು ಉಕ್ರೇನ್​ನಲ್ಲಿ ಸಿಲುಕಿಕೊಂಡಿದ್ದಾರೆ. ಜಿಲ್ಲೆಯ ಎಂಬಿಬಿಎಸ್​ ವಿದ್ಯಾರ್ಥಿ ಪ್ರದ್ವಿನ್ ಉಕ್ರೇನ್​ನಲ್ಲಿ ಸಿಲುಕಿಕೊಂಡಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೊಸಳ್ಳಿ ನಿವಾಸಿಯಾದ ಪ್ರದ್ವಿನ್ ಎಂಬಿಬಿಎಸ್​ ಓದಲು ಉಕ್ರೇನ್​​ಗೆ ತೆರಳಿದ್ದಾನೆ. ಇಂದ್ರೇಶ್ ಹಾಗೂ ರೇಖಾ ದಂಪತಿಯ ಪುತ್ರನಾಗಿದ್ದು, ಉಕ್ರೇನ್ ಖಾರ್ಕಿವ್​ನಲ್ಲಿ 3ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಪ್ರದ್ವಿನ್​ಗೆ ಸದ್ಯ ಪೋಷಕರು ಮಗನಿಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ವಿಡಿಯೋ ಕರೆ ಮಾಡಿ ಪೋಷಕರು ತಮ್ಮ ಮಗನಿಗೆ ಧೈರ್ಯ ಹೇಳಿದ್ದಾರೆ. ಇನ್ನೂ ಈತನ ಜೊತೆಗೆ ಮನೋಜ್, ವೈಭವ್, ಅರುಣ್ ಕುಮಾರ್, ತನುಜಾ ಎಂಬ ವಿದ್ಯಾರ್ಥಿಗಳು ಸಹ ಸಿಲುಕೊಂಡಿದ್ದಾರೆ. ಮಕ್ಕಳ ಪರದಾಟ ನೋಡಿ ಪೋಷಕರು ಕಂಗಾಲಾಗಿದ್ದು, ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆತರುವಂತೆ ಪೋಷಕರು ಟಿವಿ9 ಜೊತೆ ಕಣ್ಣೀರಿಟ್ಟು ಮನವಿ ಮಾಡಿಕೊಂಡಿದ್ದಾರೆ. ಅದೇ ರೀತಿಯಾಗಿ ನೆಲಮಂಗಲದ ಎಂಬಿಬಿಎಸ್ ವಿದ್ಯಾರ್ಥಿನಿಯಾದ ನವ್ಯಶ್ರೀ ಕೂಡ ಉಕ್ರೇನ್​ನಲ್ಲಿ ಸಿಲುಕಿಕೊಂಡಿದ್ದಾರೆ. ಉಕ್ರೇನ್​​ನ ಕಾರ್​ಕೀವ್​​​ನಲ್ಲಿ ಎಂಬಿಬಿಎಸ್​ ವ್ಯಾಸಂಗ ಮಾಡುತ್ತಿರುವ ನವ್ಯಶ್ರೀ, ಸದ್ಯಕ್ಕೆ ಸುರಕ್ಷಿತವಾಗಿರುವುದಾಗಿ ಹೇಳಿಕೊಂಡಿದ್ದಾರೆ.

ನವ್ಯಶ್ರೀ ಕಳೆದ ನಾಲ್ಕು ವರ್ಷದಿಂದ ಉಕ್ರೇನ್‌‌ನಲ್ಲಿ ಎಂ‌ಬಿ‌ಬಿ‌ಎಸ್ ಕೋರ್ಸ್ ಮಾಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದವರಾಗಿದ್ದು, ಉಕ್ರೇನ್‌‌ನ ಕಾರ್ ಕೀವ್ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಇಂದು ಮುಂಜಾನೆ ಬಾಂಬ್ ಬ್ಲಾಸ್ಟ್ ಆಗಿದೆ. ಸ್ಥಳಿಯರು ಹೇಳೋ ಪ್ರಕಾರ 2014 ರಿಂದ ಈ ರೀತಿ ನಡೆಯುತ್ತಿದ್ದು, ಇದರಿಂದ ಹೆಚ್ಚು ಆತಂಕವಾಗುವ ಅಗತ್ಯವಿಲ್ಲ ಅಂತಾರೆ ಸ್ಥಳೀಯರು. ಎಟಿ‌ಎಂ, ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಜನರು ಹೊರಬರುತ್ತಿದ್ದಾರೆ. ಒಂದು ರೀತಿ ಲಾಕ್‌ಡೌನ್ ಪರಿಸ್ಥಿತಿಯಲ್ಲಿದೆ ಕಾರ್ ಕೀವ್. ನೆನ್ನೆವರೆಗೂ ಆಫ್‌ಲೈನ್ ಕ್ಲಾಸ್‌ಗಳನ್ನ ಅಟೆಂಡ್ ಮಾಡಿದ್ದೇವೆ. ಆದ್ರೆ ಇಂದಿನಿಂದ ಯಾವುದೇ ಆಫ್‌ಲೈನ್‌ ಕ್ಲಾಸ್‌ಗಳಿಲ್ಲ. ನಾವು ಸದ್ಯ ಸೇಫ್​ ಆಗಿ ಇದ್ದೇವೆ ಎಂದು ವಿಧ್ಯಾರ್ಥಿನಿ ನವ್ಯಶ್ರೀ ಹೇಳಿದ್ದಾರೆ. ಉಕ್ರೇನ್‌ ಸರ್ಕಾರದಿಂದ ಕಾರ್‌ ಕೀವ್‌ ನಿವಾಸಿಗಳಿಗೆ ತುರ್ತು ಸೂಚನೆ ನೀಡಿದ್ದು, ಅಪಾರ್ಟ್ಮೆಂಟ್ ನಿವಾಸಿಗಳಿಗೆ ಮೆಟ್ರೋ ನಿಲ್ದಾಣಗಳಿಗೆ ತೆರಳಲು ತಿಳಿಸಿದ್ದು, ಸುರಕ್ಷತಾ ದೃಷ್ಟಿಯಿಂದ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣಗಳಿಗೆ ತೆರಳಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ:

Russia Ukraine War ಕೈವ್‌ನಲ್ಲಿ ಕೊರೆಯುವ ಚಳಿಯಲ್ಲಿ ಕಾಯುತ್ತಿರುವ ಭಾರತೀಯರ ವಿಡಿಯೊ ವೈರಲ್; ಭಾರತೀಯ ರಾಯಭಾರ ಕಚೇರಿ ಹೇಳಿದ್ದೇನು?