ಕೌಟುಂಬಿಕ ಕಲಹ ಹಿನ್ನೆಲೆ ಪತಿ ಮನೆಯಲ್ಲಿ ಪತ್ನಿಯ ಅನುಮಾನಾಸ್ಪದ ಸಾವು
ನವ್ಯಾ ಪತಿ ಚೇತನ್ ಕುಮಾರ್ಗೆ ಮೃತಳ ಸಂಬಂಧಿಗಳು ಛೀಮಾರಿ ಹಾಕಿ ಥಳಿಸಿದ್ದಾರೆ. ಇನ್ನೂ ಮೃತಳ ತಂದೆ ತಾಯಿಯಿಂದ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಿಕ್ಕಬಳ್ಳಾಪುರ: ಕುಟುಂಬ ಕಲಹ ಹಿನ್ನಲೆ ಮನೆಯಲ್ಲಿ ಟೆಕ್ಕಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಚಿಕ್ಕಬಳ್ಳಾಪುರದ ಪ್ರಶಾಂತ್ ನಗರದ ಗಂಡನ ಮನೆಯಲ್ಲಿ ನವ್ಯಾ ಎಸ್.ಆರ್ (23) ಮೃತಪಟ್ಟಿದ್ದಾಳೆ. ವರದಕ್ಷಣೆ ಕಿರುಕುಳ ನೀಡಿ ನೇಣು ಹಾಕಿರುವುದಾಗಿ ಆರೋಪಿಸಲಾಗಿದೆ. ಮಗಳ ಸಾವಿನ ಸುದ್ದಿಯನ್ನು ಕೇಳಿ ತಂದೆ ಎಂ.ರಾಮಚಂದ್ರಪ್ಪ ಅಸ್ವಸ್ಥರಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನವ್ಯಾ ಪತಿ ಚೇತನ್ ಕುಮಾರ್ಗೆ ಮೃತಳ ಸಂಬಂಧಿಗಳು ಛೀಮಾರಿ ಹಾಕಿ ಥಳಿಸಿದ್ದಾರೆ. ಮಹಿಳೆಯರ ಕೈಯಿಂದ ಚೇತನ್ ಕುಮಾರ್ನನ್ನು ಬಿಡಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಇನ್ನೂ ಮೃತಳ ತಂದೆ ತಾಯಿಯಿಂದ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಕ್ರಮವಾಗಿ ದಾಸ್ತಾನಿಟ್ಟಿರುವ ಗೋವಾ ಮದ್ಯ ಜಪ್ತಿ
ಕಾರವಾರ: ಅಕ್ರಮವಾಗಿ ದಾಸ್ತಾನಿಟ್ಟಿರುವ ಗೋವಾ ಮದ್ಯ ಜಪ್ತಿ ಮಾಡಲಾಗಿದೆ. ಕಾರವಾರ ತಾಲೂಕಿನ ಐಸ್ ಫ್ಯಾಕ್ಟರಿ ಚೆಂಡಿಯಾ ಗ್ರಾಮದಲ್ಲಿ ಜಪ್ತಿ ಮಾಡಲಾಗಿದ್ದು, ಸುನಿಲ್ ಲಕ್ಷ್ಮಣ ಪಡ್ತಿ ಆಮದಳ್ಳಿ ಇವರ ಮನೆಯಲ್ಲಿ ಅಕ್ರಮವಾಗಿ ಗೋವಾ ಮದ್ಯೆ ದಾಸ್ತಾನು ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕರು ಸುವರ್ಣ ಬಿ ನಾಯ್ಕ್ ಅವರ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ಒಟ್ಟು 369,360 ಲೀಟರ್ ಮದ್ಯೆವನ್ನು ಅಬಕಾರಿ ಇಲಾಖೆ ವಶಕ್ಕೆ ಪಡೆದಿದ್ದಾರೆ. ಗೋವಾ ಪೆನ್ನಿ 81,000 ಲೀ, ಗೋವಾ ಬೀಯರ್ 72,000 ಲೀ, ಜಪ್ತಿ ಮಾಡಲಾಗಿದ್ದು, ಅಂದಾಜು 2,44,800 ರೂ ನಷ್ಟು ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ. ಸದ್ಯ ಪ್ರಕರಣದ ಪ್ರಥಮ ವರ್ತಮಾನ ವರದಿ ನ್ಯಾಯಾಲಕ್ಕೆ ಸಲ್ಲಿಕೆ ಮಾಡಲಾಗಿದೆ.
ದರೋಡೆಗೆ ಹೊಂಚು ಹಾಕಿದ್ದ ರೌಡಿಶೀಟರ್ ಮತ್ತು ಸಹಚರರ ಬಂಧನ
ಬೆಂಗಳೂರು: ದರೋಡೆಗೆ ಹೊಂಚು ಹಾಕಿದ್ದ ರೌಡಿಶೀಟರ್ ಮತ್ತು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಯಲಹಂಕ ಠಾಣೆ ರೌಡಿಶೀಟರ್ ವಸೀಮ್, ಸಹಚರರಾದ ನಾಜೀಂ ಪಾಷಾ, ಮೋಷಿನ್ ಖಾನ್ ಬಂಧಿಸಿ ಮಾರಕಾಸ್ತ್ರಗಳನ್ನ ಜಪ್ತಿ ಮಾಡಿದ್ದಾರೆ. ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಹೊಂಚು ಹಾಕ್ತಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮಿಳುನಾಡು ಮೂಲದ ದಂತ ಚೋರ ಗ್ಯಾಂಗ್ ಅರೆಸ್ಟ್
ಬೆಂಗಳೂರು: ತಮಿಳುನಾಡು ಮೂಲದ ದಂತಚೋರರ ಗ್ಯಾಂಗ್ನ 8 ಆರೋಪಿಗಳನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಬೆಟ್ಟಮುಗಿಲಾಲಂ ಅರಣ್ಯ ಪ್ರದೇಶದಲ್ಲಿ 2 ಆನೆಯನ್ನು ಈ ಗ್ಯಾಂಗ್ ಕೊಂದ್ದು ಹಾಕಿತ್ತು. 42 ಲಕ್ಷ ರೂಪಾಯಿಗೆ ಆನೆ ಸೊಂಡಿಲು, ದಂತ ಮಾರಾಟಕ್ಕೆ ಯತ್ನಿಸುತ್ತಿದ್ದ ಗ್ಯಾಂಗ್ನ್ನು ಸೆರೆ ಹಿಡಿಯಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಹೆಬ್ಬಗೋಡಿ ಪೊಲೀಸರು, ದಂತ ಚೋರ್ ಗ್ಯಾಂಗ್ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ದಂತಚೋರರಿಂದ ಆನೆ ದಂತ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮಾಡಲಾಗುತ್ತಿದೆ.
ಇದನ್ನೂ ಓದಿ:
ಹರ್ಷ ಹುತಾತ್ಮನಾಗಿದ್ದಾನೆ, ಕೊಲೆ ಮಾಡಿದವರನ್ನು ಗುಂಡಿಟ್ಟು ಕೊಲ್ಲಬೇಕು ಎಂದರು ಬಿಜೆಪಿ ಶಾಸಕ ಹರತಾಳು ಹಾಲಪ್ಪ