ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಸುದ್ದಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೊರೆ ಹೋಗಿದ್ದಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ವಿಧಾನ ಪರಿಷತ್ನಲ್ಲಿ ಸಮರ್ಥನೆ ನೀಡಿದ್ದಾರೆ. ಮೇಟಿ ರಾಸಲೀಲೆ ಪ್ರಕರಣದ ಬಳಿಕ ರಾಜೀನಾಮೆ ಪಡೆದರು. ಮೂರು ತಿಂಗಳ ನಂತರ ಅವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ಲೀನ್ ಚಿಟ್ ಸಿಕಿತು. ಆದರೆ ಅಷ್ಟರಲ್ಲಿ ಮೇಟಿ ಮಾನ, ಮರ್ಯಾದೆ ಎಲ್ಲಾ ಹೋಗಿತ್ತು. ಚುನಾವಣೆಯಲ್ಲಿ ಕೂಡ ಮೇಟಿ ಸೋತರು ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ಹೀಗಾಗಿ ನಾವೆಲ್ಲ ಸಿಡಿ ಇದೆ ಎಂದು ಕೋರ್ಟ್ಗೆ ಹೋಗಿಲ್ಲ. ಅನಗತ್ಯವಾಗಿ ತೇಜೋವಧೆ ಮಾಡಬಾರದು ಎಂದು ನ್ಯಾಯಾಲಯದ ಮೊರೆ ಹೋಗಿದ್ದೇವೆ. ಇನ್ನು ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗದ ಬಗ್ಗೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್ ಇಡೀ ಜಗತ್ತಿನಲ್ಲಿ ರಮೇಶ್ ಮರ್ಯಾದೆ ಹರಾಜು ಆಯಿತು. ದೂರು ಕೊಟ್ಟಿದ್ದವರೇ ಈಗ ದೂರು ವಾಪಸ್ ಪಡೆದಿದ್ದಾರೆ. ಆದರೆ ಈಗ ರಮೇಶ್ ಅವರ ಮಾನ ಯಾರು ವಾಪಸ್ಸು ತಂದು ಕೊಡುತ್ತಾರೆ ಎಂದು ವಿಧಾನ ಪರಿಷತ್ನಲ್ಲಿ ಪ್ರಶ್ನೆ ಕೇಳಿದ್ದಾರೆ.
ಇದನ್ನೂ ಓದಿ:
ಸಿಡಿ ವಿಚಾರ ನಾಲ್ಕು ತಿಂಗಳ ಹಿಂದೆಯೇ ಗೊತ್ತಿತ್ತು, 5 ಕೋಟಿ ರೂಪಾಯಿಗೆ ಬೇಡಿಕೆ ಇತ್ತು: ರಮೇಶ್ ಜಾರಕಿಹೊಳಿ
ನಾನು ಅಮಾಯಕ, ಮುಗ್ಧ.. ರಾಜಕೀಯದಲ್ಲಿ ಈಗ ಅಂಬೆಗಾಲು ಇಡುತ್ತಿದ್ದೇನೆ -S.T.ಸೋಮಶೇಖರ್