ಆಷಾಡ ಶುಕ್ರವಾರ: ನಟ ದರ್ಶನ್​ಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿಲ್ಲ

| Updated By: Digi Tech Desk

Updated on: Jul 16, 2021 | 10:53 AM

Darshan: ಪ್ರತೀ ವರ್ಷ ಅಷಾಡ ಶುಕ್ರವಾರದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡಿ ದೇವಿಯ ದರ್ಶನ ಪಡೆಯುತ್ತಿದ್ದ ನಟ ದರ್ಶನ್​ಗೆ ಈ ಬಾರಿ ದರ್ಶನದ ಸಾಧ್ಯತೆ ಕಡಿಮೆ.

ಆಷಾಡ ಶುಕ್ರವಾರ: ನಟ ದರ್ಶನ್​ಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿಲ್ಲ
ನಟ ದರ್ಶನ್ (ಫೈಲ್ ಚಿತ್ರ)
Follow us on

ಮೈಸೂರು: ಪ್ರತೀ ವರ್ಷವೂ ಅಷಾಡ ಶುಕ್ರವಾರದಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ನಟ ದರ್ಶನ್​ಗೆ ಈ ಬಾರಿ ಅನುಮತಿ ನೀಡಲಾಗಿಲ್ಲ. ಕೊರೊನಾ ನಿಯಮಾವಳಿಗಳ ಹಿನ್ನೆಲೆಯಲ್ಲಿ ಭಕ್ತರಿಗೆ ಚಾಮುಂಡಿ ಬೆಟ್ಟಕ್ಕೆ ಈ ಬಾರಿ ಆಷಾಡ ಶುಕ್ರವಾರಗಳಂದು ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಯಾವುದೇ ಭಕ್ತರಿಗೆ ಪ್ರವೇಶಾವಕಾಶ ಸಿಗದ ಹಿನ್ನೆಲೆಯಲ್ಲಿ ದರ್ಶನ್​ ಅವರಿಗೂ ಚಾಮುಂಡಿ ದೇವಿಯ ದರ್ಶನಕ್ಕೆ ಅನುಮತಿ ನೀಡಲಾಗಿಲ್ಲ. ತಾವರಕಟ್ಟೆ ಮುಖ್ಯದ್ವಾರದ ಬಳಿ ಬ್ಯಾರಿಕೇಡ್ ಅಳವಡಿಸಿ ಬೆಟ್ಟಕ್ಕೆ ಪೊಲಿಸ್ ಭದ್ರತೆಯನ್ನು ನೀಡಲಾಗಿದೆ. ಅದಾಗ್ಯೂ ಇಂದು ಬೆಟ್ಟಕ್ಕೆ ಭೇಟಿ ನೀಡಲು ತೆರಳಿರುವ ಭಕ್ತರನ್ನು ಪೊಲಿಸರು ವಾಪಸ್ ಕಳಿಸುತ್ತಿದ್ದಾರೆ.

ಹಲವು ಕಾರಣಗಳಿಂದ ಸುದ್ದಿಯಲ್ಲಿರುವ ದರ್ಶನ್ ದೇವಿಯ ದರ್ಶನ ಪಡೆದು ನಿರಾಳವಾಗುವ ಯೋಚನೆಯಲ್ಲಿದ್ದರು. ಅದಕ್ಕಾಗಿ ಅವರು ಮೈಸೂರಿಗೂ ತೆರಳಿದ್ದರು. ಆದರೆ ದರ್ಶನ ಸಿಗುವ ಸಾಧ್ಯತೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಮೈಸೂರಿನಲ್ಲೇ ಬೀಡು ಬಿಟ್ಟಿರುವ ನಟ ದರ್ಶನ್, ಮೈಸೂರಿನ ತಮ್ಮ ಫಾರಂ ಹೌಸ್‌ನಲ್ಲಿ ಉಳಿದುಕೊಂಡಿದ್ದಾರೆ. ಟಿ ನರಸೀಪುರ ರಸ್ತೆಯಲ್ಲಿರುವ ತೂಗುದೀಪ ಫಾರಂ ಹೌಸ್​ನಲ್ಲಿ ನಿನ್ನೆಯೇ ತಮ್ಮ ಸ್ನೇಹಿತರು ಹಾಗೂ ಸಂದೇಶ್‌ರನ್ನು ಭೇಟಿ ಮಾಡಿರುವ ದರ್ಶನ್, ಮಾತುಕತೆ ನಡೆಸಿದ್ದಾರೆ. ಸಂದೇಶ್ ಜತೆ ಮಾತುಕತೆ ನಡೆಸಿ ವಾಪಸ್ಸಾದ ದರ್ಶನ್ ಇಂದು ಮಾಧ್ಯಮದ ಮುಂದೆ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದ್ದು, ಮೌನಕ್ಕೆ ಶರಣಾಗುವಂತೆ ಆಪ್ತ ಸ್ನೇಹಿತರು ನೀಡಿರುವ ಸಲಹೆಯನ್ನು ಪರಿಗಣಿಸಿ ದರ್ಶನ್ ಸುಮ್ಮನಿರಲಿದ್ದಾರೆ ಎಂದು ಅಂದಾಜಿಸಲಾಗಿದೆ. ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ, ಮೊದಲು ತನಿಖೆಯಾಗಲಿ ನಂತರ ಈ ಬಗ್ಗೆ ಮಾತನಾಡಿ ಎಂದು ಸ್ನೇಹಿತರೂ ಸಲಹೆ ನೀಡಿದ್ದು, ಕಾನೂನು ಹೋರಾಟದಲ್ಲೇ ಎಲ್ಲವೂ ಹೊರಬರಲಿ ಎಂಬ ನಿಲುವು ತಳೆಯುವ ಸಾಧ್ಯತೆ ಹೆಚ್ಚಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Published On - 10:17 am, Fri, 16 July 21