ನಾಪತ್ತೆಯಾಗಿದ್ದ ಶ್ರೀಗಂಧ ಬೆಳೆಗಾರ ವಿಶುಕುಮಾರ್ ತುಮಕೂರಿನ ರಾಷ್ಟ್ರೀಯ ಹೆದ್ದಾರಿ ಕಚೇರಿ ಬಳಿ ಪತ್ತೆ

| Updated By: ಸಾಧು ಶ್ರೀನಾಥ್​

Updated on: Dec 21, 2020 | 11:58 AM

ರಾಷ್ಟ್ರೀಯ ಹೆದ್ದಾರಿಗಾಗಿ ರೈತರು ಬೆಳೆದ ಶ್ರೀಗಂಧ ಮರಗಳನ್ನು ಕಡಿದು ಹಾಕಿದ್ದಾರೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಹೈಕೋರ್ಟ್ ತಿಳಿಸಿದರೂ ಕೂಡಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಲಕ್ಷ್ಯ ತೋರಿದ್ದ ಕಾರಣ ರೈತ ವಿಶುಕುಮಾರ್ ಡೆತ್ ನೋಟ್ ಬರೆದಿಟ್ಟು ಕಣ್ಮರೆಯಾಗಿದ್ದರು. ಇಂದು ತುಮಕೂರು ರಾಷ್ಟ್ರೀಯ ಹೆದ್ದಾರಿ ಬಳಿ ಪತ್ತೆಯಾಗಿದ್ದಾರೆ

ನಾಪತ್ತೆಯಾಗಿದ್ದ ಶ್ರೀಗಂಧ ಬೆಳೆಗಾರ ವಿಶುಕುಮಾರ್ ತುಮಕೂರಿನ ರಾಷ್ಟ್ರೀಯ ಹೆದ್ದಾರಿ ಕಚೇರಿ ಬಳಿ ಪತ್ತೆ
ಶ್ರೀಗಂಧ ಬೆಳೆಗಾರ ವಿಶುಕುಮಾರ್
Follow us on

ಚಿಕ್ಕಮಗಳೂರು: ಡೆತ್​ ನೋಟ್​ ಬರೆದಿಟ್ಟು ಶ್ರೀಗಂಧ ಬೆಳೆಗಾರ ವಿಶುಕುಮಾರ್ ಭಾನುವಾರ ನಾಪತ್ತೆಯಾಗಿದ್ದರು. ಇಂದು ಚಿಕ್ಕಮಗಳೂರು ಜಿಲ್ಲೆ ತರಿಕೆರೆ ಪಟ್ಟಣದ  ವಿಶುಕುಮಾರ್ ತುಮಕೂರಿನ ಬಟವಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಚೇರಿ ಎದುರು ಪತ್ತೆಯಾಗಿದ್ದಾರೆ. ಪರಿಹಾರ ನೀಡದ ಹಿನ್ನೆಲೆಯಲ್ಲಿ ಕಚೇರಿಯ ಬಳಿ ನಿಂತಿರುವುದಾಗಿ ವಿಶುಕುಮಾರ್ ಹೇಳಿದ್ದಾರೆ.

ಡೆತ್​ನೋಟಿನ ಜೊತೆಗೆ ವಿಡಿಯೋ ಮಾಡಿ ತನಗಾದ ನೋವು ಹಂಚಿಕೊಂಡು ನಾಪತ್ತೆಯಾಗಿದ್ದರು. ಈ ಕುರಿತಾಗಿ ಇದೀಗ ಕ್ಷಮೆ ಯಾಚಿಸಿದ್ದಾರೆ. ಕೋರ್ಟ್​ ಆದೇಶದಂತೆ ಶ್ರೀಗಂಧ ಮರಕ್ಕೆ ಪರಿಹಾರ ನೀಡುವುದಾಗಿ ವಿಶುಕುಮಾರ್ ಒತ್ತಾಯಿಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಾಗಿ ರೈತರು ಬೆಳೆದ ಶ್ರೀಗಂಧ ಮರಗಳನ್ನು ಕಡಿದು ಹಾಕಲಾಗಿದೆ. ಹೀಗಾಗಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಹೈಕೋರ್ಟ್ ತಿಳಿಸಿದರೂ ಕೂಡಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ತಲೆ ಕೆಡಿಸಿಕೊಂಡಿಲ್ಲ.

22 ಮಂದಿಗೆ ಪರಿಹಾರ ದೊರೆಯಬೇಕಿತ್ತು. ಆದರೆ ರಸ್ತೆ ಪ್ರಾಧಿಕಾರದವರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನೊಂದ ವಿಶುಕುಮಾರ್ ನಿಮಗೆಲ್ಲಾ ಮೋಸ ಮಾಡಿ ಹೋಗುತ್ತಿದ್ದೇನೆ ಎಂದು ಕುಟುಂಬದವರಿಗೆ ವಿಡಿಯೋ ಮೂಲಕ ತಿಳಿಸಿ ಕಣ್ಮರೆಯಾಗಿದ್ದರು.

3 ದಿನಗಳ ಹಿಂದೆ ತುಮಕೂರಿನ ಪ್ರಾಧಿಕಾರ ಕಚೇರಿಯೆದುರು ರೈತರು ಪ್ರತಿಭಟನೆ ನಡೆಸಿದ್ದರು. ಆದರೂ ರಸ್ತೆ ಪ್ರಾಧಿಕಾರದವರಿಂದ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಆದ್ದರಿಂದ ಡೆತ್​ ನೋಟ್ ಬರೆದಿಟ್ಟು ವಿಶುಕುಮಾರ್ ಕಣ್ಮರೆಯಾಗಿದ್ದರು.

ಹೆದ್ದಾರಿಗಾಗಿ 2523 ಶ್ರೀಗಂಧದ ಮರ ಹನನ.. ಬೆಂಗಳೂರಿನಲ್ಲಿ ಕಡಿದರೆ 1 ಮರಕ್ಕೆ 63 ಲಕ್ಷ ಪರಿಹಾರ! ಹೆದ್ದಾರಿಯಲ್ಲಿ ಕಡಿದರೆ ಬರೀ 3 ಲಕ್ಷ! ರೈತರು ಕಂಗಾಲು

ಶ್ರೀಗಂಧ ಬೆಳೆಗಾರರಿಂದ ಹೆದ್ದಾರಿ ಪ್ರಾಧಿಕಾರದ ಕಚೇರಿ ಮುಂದೆ ಪ್ರತಿಭಟನೆ

 

Published On - 8:43 am, Mon, 21 December 20