ನಂಜನಗೂಡು: ರಾಜ್ಯದ ಪ್ರಸಿದ್ಧ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಕೊರೊನಾ ಕಂಟಕ ಎದುರಾಗಿದೆ. 6 ದಿನ ನಡೆಯಬೇಕಿದ್ದ ಜಾತ್ರೆಯನ್ನು 1 ದಿನಕ್ಕೆ ಮೊಟಕು ಮಾಡಲು ಸುತ್ತೂರು ಶ್ರೀಗಳು ನಿರ್ಧರಿಸಿದ್ದಾರೆ.
ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಫೆ.8-13ವರೆಗೆ ನಡೆಯಬೇಕಿತ್ತು. ಈ ವೇಳೆ ರಥೋತ್ಸವ, ಲಕ್ಷ ದೀಪೋತ್ಸವ, ಅನ್ನದಾಸೋಹ ಸೇರಿ ನಾನಾ ಕಾರ್ಯಕ್ರಮಗಳು ನಡೆಯುತ್ತಿದ್ದವು.
ರಾಜ್ಯದ ನಾನಾ ಭಾಗಗಳಿಂದ ಜಾತ್ರೆಗೆ ಜನರು ಬರುತ್ತಿದ್ದರು. ಮುಖ್ಯಮಂತ್ರಿ, ಸಚಿವರು, ಕೇಂದ್ರದ ಮಂತ್ರಿಗಳು, ಶಾಸಕರು ಜಾತ್ರೆಯಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆಯುತ್ತಿದ್ದರು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಜನರು ಸೇರುವುದು ಬೇಡ ಎನ್ನುವ ಕಾರಣಕ್ಕೆ ಈ ಬಾರಿ ಅತ್ಯಂತ ಸರಳವಾಗಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.
ಪ್ರತಿ ವರ್ಷ ತೇರು ಎಳೆಯುವ ಕಾರ್ಯಕ್ರಮಕ್ಕೆ ಜನಸ್ತೋಮವೇ ಸೇರುತ್ತಿತ್ತು. ಆದರೆ, ಈ ಬಾರಿ ಅದಕ್ಕೂ ಬ್ರೇಕ್ ಹಾಕಲಾಗಿದೆ. ಈ ಮೂಲಕ ಕೊರೊನಾ ಹರಡದಂತೆ ತಡೆಯಲು ಆಡಳಿತ ಮಂಡಳಿ ಕ್ರಮ ಕೈಗೊಳ್ಳುತ್ತಿದೆ. ಈ ಬಾರಿ ಫೆಬ್ರವರಿ 10ರಂದು ಒಂದೇ ದಿನ ಜಾತ್ರಾ ಮಹೋತ್ಸವ ಜರುಗಲಿದೆ.
ನಂಜನಗೂಡು ಟಿಹೆಚ್ಒ ಆತ್ಮಹತ್ಯೆ ಕೇಸ್: ಡಿಸಿ ಜತೆ ಟಿಹೆಚ್ಒ ಮಾತಾಡಿದ್ದಾರೆನ್ನುವ ಆಡಿಯೋ ವೈರಲ್