ವಿಮಾನದ ಮೂಲಕ ಸ್ಯಾನಿಟೈಸ್ ಕಾರ್ಯಕ್ಕೆ ಚಾಲನೆ; ನಾಳೆಯಿಂದ ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಸ್ಯಾನಿಟೈಸೇಷನ್

ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಸ್ಯಾನಿಟೈಸೇಷನ್ ಮಾಡಲಾಗುತ್ತದೆ. ಏರೋಡ್ರೋಮ್​​ನಲ್ಲಿ ರಾಸಾಯನಿಕ ಸಿಂಪಡಣೆ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.

ವಿಮಾನದ ಮೂಲಕ ಸ್ಯಾನಿಟೈಸ್ ಕಾರ್ಯಕ್ಕೆ ಚಾಲನೆ; ನಾಳೆಯಿಂದ ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಸ್ಯಾನಿಟೈಸೇಷನ್
ವಿಮಾನದ ಮೂಲಕ ಸ್ಯಾನಿಟೈಸರ್ ಸ್ಪ್ರೇ
Updated By: ganapathi bhat

Updated on: Aug 14, 2021 | 1:09 PM

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ನಗರದಲ್ಲಿ ವಿಮಾನದ ಮೂಲಕ ಸ್ಯಾನಿಟೈಸ್ ಮಾಡುವ ಕಾರ್ಯಕ್ರಮಕ್ಕೆ ಇಂದು (ಮೇ 29) ಚಾಲನೆ ನೀಡಲಾಗಿದೆ. ಏರೋಡ್ರೋಮ್ ಮೂಲಕ ರಾಸಾಯನಿಕ ಸಿಂಪಡಣೆಗೆ ಚಾಲನೆ ಕೊಡಲಾಗಿದೆ. ಬೆಂಗಳೂರಿನ ಜಕ್ಕೂರು ಏರೋಡ್ರೋಮ್​​ನಲ್ಲಿ ಯೋಜನೆ ಆರಂಭಿಸಿದ್ದು, ಕಂದಾಯ ಸಚಿವ ಆರ್. ಅಶೋಕ್, ಬಿಡಿಎ ಅಧ್ಯಕ್ಷ ವಿಶ್ವನಾಥ್, ಶಾಸಕ ಕೃಷ್ಣ ಭೈರೇಗೌಡರಿಂದ ಸ್ಯಾನಿಟೈಸೇಷನ್​​ಗೆ ಚಾಲನೆ ದೊರೆತಿದೆ.

ನಾಳೆಯಿಂದ ಮೂರು ದಿನಗಳ ಕಾಲ ಟ್ರಯಲ್​ ರನ್ ಮಾಡಲಾಗುತ್ತದೆ. ಮಾರುಕಟ್ಟೆ, ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತದೆ. ಗಂಟೆಗೆ 300 ಲೀ., 300 ಹೆಕ್ಟೇರ್ ಪ್ರದೇಶಕ್ಕೆ ಸ್ಯಾನಿಟೈಸ್ ಮಾಡಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ. ಏರ್ ಸ್ಪ್ರೇ ಸಿಂಪಡಣೆ ಬ್ಯಾಕ್ಟೀರಿಯಾ, ವೈರಸ್, ಶೀಲಿಂದ್ರಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಹೇಳಲಾಗಿದೆ. ಏರಿಯಲ್ ವರ್ಕ್ಸ್ ಏರೋ ಎಲ್​ಎಲ್​ಪಿ ಕ್ಯಾಪ್ಟನ್ ಮುರಳಿ ರಾಮಕೃಷ್ಣ ನೇತೃತ್ವದಲ್ಲಿ ಪ್ರಯೋಗ ನಡೆಯಲಿದೆ.

ರಾಸಾಯನಿಕ ಸಿಂಪಡಣೆಯಿಂದ ಜನರಿಗೆ ತೊಂದರೆ ಆಗಲ್ಲ
ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಸ್ಯಾನಿಟೈಸೇಷನ್ ಮಾಡಲಾಗುತ್ತದೆ. ಏರೋಡ್ರೋಮ್​​ನಲ್ಲಿ ರಾಸಾಯನಿಕ ಸಿಂಪಡಣೆ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ನಾಳೆ ಬೆಳಗ್ಗೆ 8 ಗಂಟೆಯಿಂದ ಮಾರುಕಟ್ಟೆಗಳಲ್ಲಿ ಸಿಂಪಡಣೆ ಮಾಡಲಾಗುವುದು. ಕೆ.ಆರ್. ಮಾರ್ಕೆಟ್, ಶಿವಾಜಿನಗರದ ಮಾರ್ಕೆಟ್ ಸೇರಿದಂತೆ, ನಗರದ ಜನನಿಬಿಡ ಪ್ರದೇಶಗಳಲ್ಲಿ ಸಿಂಪಡಣೆ ಮಾಡಲಾಗುತ್ತೆ. ಇದರ ಫಲಿತಾಂಶ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ರಾಸಾಯನಿಕ ಸಿಂಪಡಣೆಯಿಂದ ಜನರಿಗೆ ತೊಂದರೆ ಆಗಲ್ಲ ಎಂದು ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಡಿ ಗೆದ್ದ 88 ವರ್ಷದ ವೃದ್ಧೆ; ಹೊನ್ನಮ್ಮನ ಆತ್ಮಸ್ಥೈರ್ಯಕ್ಕೆ ವೈದ್ಯರಿಂದ ಮೆಚ್ಚುಗೆ

ನೆಗ್ಲೆಕ್ಟ್​ ಮಾಡಿದ್ದಕ್ಕೆ ಸಾವು: ಕೊರೊನಾ ಬಂದು 5 ದಿನವಾದ್ರೂ ಏನಾಗೋಲ್ಲ ಅಂತ ಮನೆಯಲ್ಲೇ ಇದ್ದ ಬಾಡಿಬಿಲ್ಡರ್ ಸಾವು

Published On - 6:32 pm, Sat, 29 May 21