ಕಾಂಗ್ರೆಸ್ ಸೇರಲು ಸತೀಶ್ ಸೌಜನ್ಯದ ಆಹ್ವಾನ ಕೊಟ್ಟಿದ್ದಾರೆ: ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ
Ashok Pujari: ಕಾಂಗ್ರೆಸ್ ಸೇರಲು ಸತೀಶ್ ಸೌಜನ್ಯದ ಆಹ್ವಾನ ಕೊಟ್ಟಿದ್ದಾರೆ. ಈ ಬಗ್ಗೆ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜತೆ ಮಾತಾಡುತ್ತೇನೆ. ಅವರ ಜತೆ ಚರ್ಚಿಸಿ ನನ್ನ ನಡೆ ತಿಳಿಸುವುದಾಗಿ ಹೇಳಿದ್ದೇನೆ ಎಂದು ಜೆಡಿಎಸ್ ಪಕ್ಷ ಮುಖಂಡ ಅಶೋಕ್ ಪೂಜಾರಿ ತಿಳಿಸಿದರು.
ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಮನೆಗೆ ಭೇಟಿ ನೀಡಿರುವ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿರುವ ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ನಿನ್ನೆ (ಫೆಬ್ರವರಿ 16) ನಮ್ಮ ಮನೆಗೆ ಸತೀಶ್ ಜಾರಕಿಹೊಳಿ ಬಂದಿದ್ದರು. ಅಧಿಕೃತವಾಗಿಯೇ ಕಾಂಗ್ರೆಸ್ ಪಕ್ಷದ ವತಿಯಿಂದ ಭೇಟಿಗೆ ಬಂದಿದ್ದಾಗಿ ಹೇಳಿದ್ದರು. ಎಲ್ಲರೂ ಸೇರಿ ಹೊಸ ಅಧ್ಯಾಯ ಆರಂಭಿಸೋಣ ಎಂದೂ ತಿಳಿಸಿದರು ಎಂಬುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಸೇರಲು ಸತೀಶ್ ಸೌಜನ್ಯದ ಆಹ್ವಾನ ಕೊಟ್ಟಿದ್ದಾರೆ. ಈ ಬಗ್ಗೆ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜತೆ ಮಾತಾಡುತ್ತೇನೆ. ಅವರ ಜತೆ ಚರ್ಚಿಸಿ ನನ್ನ ನಡೆ ತಿಳಿಸುವುದಾಗಿ ಹೇಳಿದ್ದೇನೆ. ಅಲ್ಲದೇ ಸದ್ಯ ಗೋಕಾಕ್ ವ್ಯವಸ್ಥೆ ವಿರುದ್ಧ ಹೋರಾಟ ನಡೆದಿದೆ. ನಿಮ್ಮ ವಿಚಾರಧಾರೆ ನಮ್ಮ ವಿಚಾರಧಾರೆ ಒಂದೇ ಇದೆ ಎಂದರು. ಎಲ್ಲರೂ ಸೇರಿ ಹೊಸ ಅಧ್ಯಾಯ ಆರಂಭ ಮಾಡೋಣ ಎಂದಿದ್ದಾರೆ. ಆದರೆ ನನ್ಮ ರಾಜಕೀಯ ಗಾಡ್ ಫಾದರ್ ಹೆಚ್.ಡಿ.ದೇವೇಗೌಡ. ಹೀಗಾಗಿ ಅವರ ಬಳಿ ಕೇಳಿ ಅದಕ್ಕೆ ಪೂರಕವಾಗಿ ನನ್ನ ನಡೆ ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದೇನೆ ಎಂಬುದಾಗಿ ಹೇಳಿದ್ದಾರೆ.
ಬೆಳಗಾವಿ ಲೋಕಸಭೆ ಎಲೆಕ್ಷನ್ ಟಿಕೆಟ್ ಆಫರ್ ಏನೂ ಮಾಡಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿಲ್ಲ. ಜೆಡಿಎಸ್ ಪಕ್ಷದಲ್ಲಿ ಅಧಿಕೃತವಾಗಿ ಇದ್ದೇನೆ. ಈ ವೇಳೆ ಕಾಂಗ್ರೆಸ್ ಪಕ್ಷ ನನಗೆ ಎಂಪಿ ಟಿಕೆಟ್ ನೀಡುವ ಪ್ರಶ್ನೆಯೇ ಇಲ್ಲ ಎಂದೂ ಅವರು ತಿಳಿಸಿದ್ದಾರೆ.